ಯಾವ ಹೆಣ್ಣು ಮಕ್ಕಳ ಕೈಯಲ್ಲಿ ಈ ಮೂರು ಚಿಹ್ನೆಗಳಿರುತ್ತವೆಯೋ, ಅವರು ಅದೃಷ್ಟಶಾಲಿಗಳಾಗಿರುತ್ತಾರೆ
ಹಸ್ತಸಾಮುದ್ರಿಕ ತಜ್ಞರು ಹೇಳುವಂತೆ ಅಂಗೈಯ ರೇಖೆಗಳು ಜೀವನದಲ್ಲಿ ಬರುವ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳ ಬಗ್ಗೆ ಹೇಳುತ್ತವೆ.
ನವದೆಹಲಿ : ಹಸ್ತಸಾಮುದ್ರಿಕ ಶಾಸ್ತ್ರವು ಜ್ಯೋತಿಷ್ಯದ (Astrology) ಒಂದು ಭಾಗವಾಗಿದೆ. ಇದರ ಅಡಿಯಲ್ಲಿ, ಅಂಗೈಯನ್ನು ನೋಡುವ ಮೂಲಕ, ಭವಿಷ್ಯವನ್ನು ಹೇಳಲಾಗುತ್ತದೆ. ಹಸ್ತಸಾಮುದ್ರಿಕ (Palmistry) ತಜ್ಞರು ಹೇಳುವಂತೆ ಅಂಗೈಯ ರೇಖೆಗಳು ಜೀವನದಲ್ಲಿ ಬರುವ ಒಳ್ಳೆಯ ಮತ್ತು ಕೆಟ್ಟ ಸಂದರ್ಭಗಳ ಬಗ್ಗೆ ಹೇಳುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಹುಡುಗಿಯರ ಕೈಗಳ ಕೆಲವು ವಿಶೇಷ ಚಿಹ್ನೆಗಳು ಮಂಗಳಕರವಾಗಿರುತ್ತವೆ. ಇದು ಜೀವನದಲ್ಲಿ ಪ್ರಗತಿಯ ಸಂಕೇತಗಳನ್ನು ನೀಡುತ್ತದೆ.
ಚಕ್ರ ಚಿಹ್ನೆ :
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ತಮ್ಮ ಅಂಗೈಯಲ್ಲಿ ಚಕ್ರದ ಗುರುತುಗಳನ್ನು ಹೊಂದಿರುವ ಹುಡುಗಿಯರು ಜೀವನದಲ್ಲಿ ಬಹಳಷ್ಟು ಯಶಸ್ಸನ್ನು ಪಡೆಯುತ್ತಾರೆ. ತಮ್ಮ ಬೆರಳುಗಳ ಮೇಲೆ ವೃತ್ತದ ಗುರುತು (Circle Mark In Pal) ಹೊಂದಿರುವ ಹುಡುಗಿಯರು, ಜೀವನದಲ್ಲಿ ಸಾಕಷ್ಟು ಖ್ಯಾತಿಯನ್ನು ಪಡೆಯುತ್ತಾರೆ. ಈ ಹುಡುಗಿಯರು , ತುಂಬಾ ಬುದ್ಧಿವಂತರಾಗಿರುತ್ತಾರೆ. ಅವರ ಎಲ್ಲಾ ಆಸೆಗಳು ಈಡೇರುತ್ತವೆ. ಅಷ್ಟೇ ಅಲ್ಲ ಈ ಹೆಣ್ಣುಮಕ್ಕಳು ಸಮಾಜದಲ್ಲಿ ಹೆಮ್ಮೆಯಿಂದ ಬದುಕುತ್ತಾರೆ.
ಇದನ್ನೂ ಓದಿ : ಶನಿ ಗ್ರಹದ ಹಿಮ್ಮುಖ ಚಲನೆಯಿಂದ ಈ ನಾಲ್ಕು ರಾಶಿರಯವರಿಗೆ ಎದುರಾಗಲಿದೆ ಆರ್ಥಿಕ ಸಂಕಷ್ಟ
ಮೀನಿನ ಚಿಹ್ನೆ :
ಹುಡುಗಿಯರ ಅಂಗೈಯಲ್ಲಿ ಮೀನಿನ ಚಿಹ್ನೆ (Lucky Symbol) ಇದ್ದರೆ ಅದನ್ನು ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. ತಮ್ಮ ಅಂಗೈಯಲ್ಲಿ ಈ ಗುರುತು ಇರುವ ಹುಡುಗಿಯರನ್ನು ತುಂಬಾ ಅದೃಷ್ಟವಂತರಾಗಿರುತ್ತಾರೆ. ಮೀನನ್ನು ವಿಷ್ಣುವಿನ (Lord Vishnu) ಸಂಕೇತವೆಂದು ಹೇಳಲಾಗುತ್ತದೆ. ಯಾರ ಕೈಅಯಲ್ಲಿ ಜೀವನ ರೇಖೆಯಲ್ಲಿ ಮೀನಿನ ಚಿಹ್ನೆ ಇರುತ್ತದೆಯೋ, ಅವರ ಅದೃಷ್ಟ ಬೆಳಗುತ್ತದೆ.
ಕಮಲದ ಚಿಹ್ನೆ :
ಹೆಣ್ಣುಮಕ್ಕಳ ಅಂಗೈಯಲ್ಲಿ ಕಮಲದ ಚಿಹ್ನೆ (Lotus mark in palm) ಇದ್ದರೆ ಅದು ಅತ್ಯಂತ ಶುಭ. ತಮ್ಮ ಅಂಗೈಯಲ್ಲಿ ಕಮಲದ ಚಿಹ್ನೆಯನ್ನು ಹೊಂದಿರುವವರು ಜೀವನದಲ್ಲಿ ಯಾವತ್ತೂ ಆರ್ಥಿಕ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಈ ಹುಡುಗಿಯರು ಯಾವಾಗಲೂ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಲಕ್ಷ್ಮೀ ದೇವಿಯ (Godess Lakshmi) ಕೃಪೆ ಸದಾ ಇವರ ಮೇಲಿರುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟ ರೇಖೆ, ಜೀವನ ರೇಖೆ, ಶನಿ ಪರ್ವತ, ಗುರು ಪರ್ವತ ಮತ್ತು ಶುಕ್ರ ಪರ್ವತಗಳಲ್ಲಿ ಕಮಲದ ಗುರುತುಗಳಿದ್ದಾರೆ ಅದು ಶುಭ.
ಇದನ್ನೂ ಓದಿ : Popularity Tips: ನಿಮಗೂ ಫೇಮಸ್ ಆಗುವ ಬಯಕೆಯೇ? ಈ ಸುಲಭ ಉಪಾಯಗಳನ್ನು ಅನುಸರಿಸಿ ಝಟ್ ಅಂತ ಪ್ರಸಿದ್ಧಿ ಪಡೆಯಿರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.