Sugar Free Sweet Recipe : ಸಿಹಿತಿಂಡಿಗಳಿಲ್ಲದೆ ದೀಪಾವಳಿ ಹಬ್ಬವನ್ನು ಅಪೂರ್ಣ ಎಂದೇ ಹೇಳಲಾಗುತ್ತದೆ. ಆದರೆ ಮಧುಮೇಹ ರೋಗಿಗಳು ಮಾತ್ರ ಸಿಹಿ ತಿಂಡಿಗಳಿಂದ ದೂರವೇ ಉಳಿಯಬೇಕಾಗುತ್ತದೆ. ಹಬ್ಬದ ನೆಪದಲ್ಲಿ ಸೇವಿಸುವ ಸಿಹಿ ತಿಂಡಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸುವ ಅಪಾಯವಿರುತ್ತದೆ.  ಆದರೆ ಮಧುಮೇಹಿಗಳು ಕೂಡಾ ಸಿಹಿ ತಿಂದು ಹಬ್ಬದ ಸಂಭ್ರಮವನ್ನು  ಅನುಭವಿಸುವುದು ಸಾಧ್ಯವಾಗುತ್ತದೆ. ಮಧು ಮೇಹಿಗಳಿಗಾಗಿ ಮನೆಯಲ್ಲಿಯೇ  ಶುಗರ್  ಫ್ರೀ ತಿಂಡಿಗಳನ್ನು ಮಾಡಬಹುದು. ಇಂದು ನಾವು ನಿಮಗೆ ಫಿಗ್ ಬರ್ಫಿ ಮಾಡುವ ರೆಸಿಪಿಯನ್ನು ಹೇಳಲಿದ್ದೇವೆ. ಇದನ್ನು ಮಧುಮೇಹಿಗಳು ಕೂಡಾ ಯಾವುದೇ ಭಯವಿಲ್ಲದೆ ತಿನ್ನಬಹುದು. 


COMMERCIAL BREAK
SCROLL TO CONTINUE READING

 ಫಿಗ್  ಬರ್ಫಿ ತಯಾರಿಸಲು ಬೇಕಾಗುವ ಸಾಮಗ್ರಿಗಳು : 
 ಈ ಸಿಹಿ ತಯಾರಿಸಲು, 200 ಗ್ರಾಂ ಅಂಜೂರ, 100 ಗ್ರಾಂ ಖರ್ಜೂರ, 50 ಗ್ರಾಂ ಒಣದ್ರಾಕ್ಷಿ, 50 ಗ್ರಾಂ ಪಿಸ್ತಾ, 50 ಗ್ರಾಂ ಗೋಡಂಬಿ, 50 ಗ್ರಾಂ ಬಾದಾಮಿ, ಮೂರರಿಂದ ನಾಲ್ಕು ಚಮಚ ದೇಸಿ ತುಪ್ಪ ಬೇಕಾಗುತ್ತದೆ. 


ಇದನ್ನೂ ಓದಿ : Diabetes Control Tips : ಮಧುಮೇಹ ನಿಯಂತ್ರಣಕ್ಕೆ ದೇಹದ ಈ ಭಾಗದಲ್ಲಿ ಮಸಾಜ್ ಮಾಡಿ


 ಫಿಗ್  ಬರ್ಫ ಮಾಡುವ ವಿಧಾನ : 
1. ಮೊದಲು ಒಣ ಹಣ್ಣುಗಳನ್ನು ಹುರಿದುಕೊಳ್ಳಬೇಕು. 
2. ಸಿಹಿಗಾಗಿ ಮೊದಲು ಅಂಜೂರದ ಹಣ್ಣುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. 
3. ಇದರ ನಂತರ, ಖರ್ಜೂರದಿಂದ ಬೀಜಗಳನ್ನು ತೆಗೆದುಕೊಂಡು, ಖರ್ಜೂರವನ್ನು ಪ್ರತ್ಯೇಕ ತಟ್ಟೆಯಲ್ಲಿ ಇರಿಸಿ. 
4. ಈಗ ಖರ್ಜೂರ, ಕತ್ತರಿಸಿದ ಅಂಜೂರ ಮತ್ತು ಒಣದ್ರಾಕ್ಷಿಗಳನ್ನು ಬ್ಲೆಂಡರ್ನಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. 
5. ನಂತರ ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದರಲ್ಲಿ ಎರಡು ಚಮಚ ತುಪ್ಪ ಹಾಕಿ ಅದರಲ್ಲಿ ಗೋಡಂಬಿ, ಒಣದ್ರಾಕ್ಷಿ, ಪಿಸ್ತಾ ಹುರಿದು ತಿಳಿ ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. 
6. ನಂತರ ಈ ಎಲ್ಲಾ ಒಣ ಹಣ್ಣುಗಳನ್ನು ನುಣ್ಣಗೆ ಕತ್ತರಿಸಿ ಮತ್ತು ಅವುಗಳನ್ನು ಪಕ್ಕಕ್ಕೆ ಇರಿಸಿ. 


ಪಾಕ ವಿಧಾನ :
1. ಬಾಣಲೆಯಲ್ಲಿ ತುಪ್ಪ ಹಾಕಿ ಅದಕ್ಕೆ ಸಿದ್ಧಪಡಿಸಿದ ನುಣ್ಣನೆಯ ಮಿಶ್ರಣವನ್ನು ಸೇರಿಸಿ. 2.  ಸ್ವಲ್ಪ ಸಮಯ ಫ್ರೈ ಮಾಡಿ. ಹುರಿಯುವಾಗ ಗ್ಯಾಸ್ ಅನ್ನು ಲೋ ಫ್ಲೇಮ್ ನಲ್ಲಿಡಿ. 
3. ಇದು ಹುರಿದ ನಂತರ, ಅದಕ್ಕೆ ಕತ್ತರಿಸಿದ ಎಲ್ಲಾ ಒಣ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. 
4. ಇದಾದ ನಂತರ  ಒಂದು ಟ್ರೇಯಲ್ಲಿ ತುಪ್ಪವನ್ನು ಹಾಕಿ. 
5. ನಂತರ ತಯಾರಾದ ಎಲ್ಲಾ ಮಿಶ್ರಣವನ್ನು ಆ ಟ್ರೇ ಮೇಲೆ ಹಾಕಿ ಚೆನ್ನಾಗಿ ನಯವಾಗಿ ಹರಡಿ. 
6. ಅದು ತಣ್ಣಗಾದಾಗ ಬೇಕಾದ ಆಕಾರಕ್ಕೆ ಕತ್ತರಿಸಿ.  ಮಧುಮೇಹಿಗಳಿಗೆ ಬೇಕಾದ ಶುಗರ್ ಫ್ರೀ ಅಂಜೂರ ರೆಡಿ. 


ಇದನ್ನೂ ಓದಿ : Garlic Side Effects: ಬೆಳ್ಳುಳ್ಳಿಯನ್ನು ಅತಿಯಾಗಿ ತಿಂದ್ರೆ ಈ ತೊಂದರೆ ಫಿಕ್ಸ್‌.!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.