Sun Transit 2022 Effect: ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳಲ್ಲಿ ಸೂರ್ಯನನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತದೆ. ಹಾಗಾಗಿ ಸೂರ್ಯನ ಸ್ಥಾನದಲ್ಲಿನ ಬದಲಾವಣೆಯು ಬಹಳ ಮುಖ್ಯವಾಗಿದೆ. ಸೂರ್ಯನು 16 ಡಿಸೆಂಬರ್ 2022 ರಾಶಿ ಬದಲಾವಣೆ ಮಾಡಲಿದ್ದಾನೆ. ಪ್ರಸ್ತುತ ವೃಶ್ಚಿಕ ರಾಶಿಯಲ್ಲಿರುವ ಸೂರ್ಯನು  ಡಿಸೆಂಬರ್ 16ರಂದು ವೃಶ್ಚಿಕ ರಾಶಿಯನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸುವನು. ಧನು ರಾಶಿಗೆ ಸೂರ್ಯನ ಪ್ರವೇಶದೊಂದಿಗೆ ಧನುರ್ ಮಾಸ ಆರಂಭವಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಎಂದರೆ, ಧನುರ್ ಮಾಸ ಮುಗಿಯುವವರೆಗೂ ಯಾವುದೇ ಮದುವೆ, ಗೃಹಪ್ರವೇಶದಂತಹ ಶುಭ ಕಾರ್ಯಗಳು ನೆರವೇರುವುದಿಲ್ಲ. ಆದಾಗ್ಯೂ, ಸೂರ್ಯನ ರಾಶಿ ಪರಿವರ್ತನೆಯು ಕೆಲವು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಡಿಸೆಂಬರ್‌ನಲ್ಲಿ ಸೂರ್ಯ ರಾಶಿ ಪರಿವರ್ತನೆಯಿಂದ ಯಾವ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ ಎಂದು ತಿಳಿಯೋಣ...
ಮೇಷ ರಾಶಿ:  

ಡಿಸೆಂಬರ್‌ನಲ್ಲಿ ಸೂರ್ಯ ರಾಶಿ ಪರಿವರ್ತನೆಯು ಮೇಷ ರಾಶಿಯವರಿಗೆ ಶುಭ ಫಲಗಳನ್ನು ತರಲಿದೆ. ವಿದೇಶಕ್ಕೆ ಹೋಗುವ ಕನಸು ಕಾಣುತ್ತಿರುವವರ ಕನಸು ಈಡೇರುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೆ, ಈ ರಾಶಿಯವರಿಗೆ ಈ ಸಮಯವು ನಿಮ್ಮ ಉದ್ಯೋಗ, ವ್ಯವಹಾರಕ್ಕೆ ಸಂಬಂಧಿಸಿದಂತೆಯೂ ಕೂಡ ಉತ್ತಮವಾಗಿದ್ದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣಬಹುದು.


ಕರ್ಕಾಟಕ ರಾಶಿ: 
ವರ್ಷದ ಕೊನೆಯ ತಿಂಗಳಿನಲ್ಲಿ ಸೂರ್ಯನ ಸಂಚಾರವು ಕರ್ಕಾಟಕ ರಾಶಿಯವರಿಗೆ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಯಶಸ್ಸನ್ನು ನೀಡಲಿದೆ. ಈ ರಾಶಿಯ ಜನರು ಈ ಸಮಯದಲ್ಲಿ ಕೆಲವು ಗುಡ್ ನ್ಯೂಸ್ ಪಡೆಯಬಹುದು. ಕೋರ್ಟು ಕಚೀರಿಗೆ ಸಂಬಂಧಿಸಿದ ವ್ಯಾಜ್ಯಗಳು ಈ ಸಮಯದಲ್ಲಿ ಇತ್ಯರ್ಥವಾಗಲಿದ್ದು, ವಿತ್ತೀಯ ಲಾಭ ಸಾಧ್ಯತೆಯೂ ಇದೆ.


ಇದನ್ನೂ ಓದಿ- Guru Margi 2022: ಗುರುವಿನ ನೇರ ನಡೆಯಿಂದ 'ಗಜಕೇಸರಿ ಯೋಗ', ಈ 3 ರಾಶಿಯವರಿಗೆ ಭಾರೀ ಅದೃಷ್ಟ


ಕನ್ಯಾ ರಾಶಿ: 
ಸೂರ್ಯನ ರಾಶಿ ಬದಲಾವಣೆಯು ಕನ್ಯಾ ರಾಶಿಯ ಉದ್ಯಮಿಗಳಿಗೆ ಅಪಾರ ಪ್ರಯೋಜನವನ್ನು ತರಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಾಧ್ಯತೆ ಇದ್ದು, ಆದಾಯವೂ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದ್ದು, ಇದರಿಂದ ಉತ್ತಮ ಲಾಭವೂ ಲಭ್ಯವಾಗಲಿದೆ.


ವೃಶ್ಚಿಕ ರಾಶಿ: 
ಡಿಸೆಂಬರ್‌ನಲ್ಲಿ ಸೂರ್ಯ ರಾಶಿ ಪರಿವರ್ತನೆಯ ಶುಭ ಫಲಗಳು ವೃಶ್ಚಿಕ ರಾಶಿಯವರ ಮೇಲೆ ಹೆಚ್ಚಾಗಿರುತ್ತದೆ. ವೃಶ್ಚಿಕವನ್ನು ತೊರೆದು ಧನು ರಾಶಿಯನ್ನು ಪ್ರವೇಶಿಸಲಿರುವ ಸೂರ್ಯನು ಈ ರಾಶಿಯವರಿಗೆ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದ್ದಾನೆ. ಸರ್ಕಾರಿ ನೌಕರರಿಗೆ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ದೊರೆಯಲಿದೆ. ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುವವರಿಗೆ ಒಲೆಯ ಸಮಯ. ಆರ್ಥಿಕ ಹರಿವು ಹೆಚ್ಚಾಗಲಿದ್ದು ಸಮಾಜದಲ್ಲಿ ಗೌರವವೂ ವೃದ್ಧಿಯಾಗಲಿದೆ. 


ಇದನ್ನೂ ಓದಿ- December Graha Gochar: ಶನಿಯ ನಕ್ಷತ್ರ ಪುಂಜದಲ್ಲಿ 3 ಶಕ್ತಿಶಾಲಿ ಗ್ರಹಗಳ ಸಂಯೋಗ, ಈ ರಾಶಿಯವರಿಗೆ ಹಣದ ಮಳೆ


ಧನು ರಾಶಿ:
ಧನು ರಾಶಿಗೆ ಸೂರ್ಯನ ಪ್ರವೇಶವಾಗುವುದರಿಂದ ಈ ರಾಶಿಚಕ್ರದ ಸ್ಥಳೀಯರಿಗೆ ಮಂಗಳಕರ ಫಲಿತಾಂಶಗಳು ಲಭ್ಯವಾಗಲಿವೆ. ಈ ರಾಶಿಯವರು ತಮ್ಮ ವೃತ್ತಿ ರಂಗದಲ್ಲಿ ಉತ್ತುಂಗಕ್ಕೇರಲಿದ್ದಾರೆ. ಇದರೊಂದಿಗೆ ಸಮಾಜದಲ್ಲಿ ಸ್ಥಾನಮಾನ, ಹಣ, ಗೌರವ ಎಲ್ಲವೂ ನಿಮ್ಮದಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ..