Sun Transit in Leo 2022: ಎಲ್ಲಾ ಗ್ರಹಗಳ ರಾಜನಾಗಿರುವ ಸೂರ್ಯ ದೇವ ಪ್ರಸ್ತುತ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ಸೂರ್ಯದೇವನ ಕೃಪೆ ಯಾವ ರಾಶಿಗಳ ಮೇಲೆ ಇರುತ್ತದೆಯೋ, ಆ ಜಾತಕದವರ ಭಾಗ್ಯ ಸೂರ್ಯನಂತೆಯೇ ಬೆಳಗುತ್ತದೆ ಮತ್ತು ಅವರಿಗೆ ಯಾವುದೇ ರೀತಿಯ ಕೊರತೆ ಎದುರಾಗುವುದಿಲ್ಲ. ಸಂಪತ್ತು, ಸುಖ-ಸಮೃದ್ಧಿ, ಐಶ್ವರ್ಯ ಎಲ್ಲವೂ ಪ್ರಾಪ್ತಿಯಾಗುತ್ತದೆ. ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಇರುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಮುಂಬರುವ 13 ದಿನಗಳು ಕೆಲವು ರಾಶಿಗಳ ಜನರಿಗೆ ತುಂಬಾ ಮಂಗಳಕರವಾಗಿರಲಿವೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಮುಂದಿನ 13 ದಿನಗಳು ತುಂಬಾ ಶುಭಕರವಾಗಿರುತ್ತದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಮನಸ್ಸು ಶಾಂತವಾಗಿರಲಿದೆ. ಆರ್ಥಿಕ ಸಮಸ್ಯೆ ಇರುವವರು ಸ್ನೇಹಿತರಿಂದ ಆರ್ಥಿಕ ಸಹಾಯ ಪಡೆಯಬಹುದು. ಲಾಭದ ಅವಕಾಶಗಳಿರುತ್ತವೆ. ನಿಮ್ಮ ಮಾತಿನ ಮೂಲಕ ಜನರನ್ನು ಮೆಚ್ಚಿಸಲು ನಿಮಗೆ ಸಾಧ್ಯವಾಗಲಿದೆ.


ಸಿಂಹ ರಾಶಿ (ಸೂರ್ಯದೇವನ ಸ್ವರಾಶಿ)
ವ್ಯಾಪಾರ ವೃದ್ಧಿಯಾಗಲಿದೆ. ಬರವಣಿಗೆ ಮತ್ತು ಅಧ್ಯಯನದ ಕಡೆಗೆ ಒಲವು ಹೆಚ್ಚಾಗುತ್ತದೆ. ಮಕ್ಕಳ ಕಡೆಯಿಂದ ಕೆಲವು ಶುಭ ಸಮಾಚಾರಗಳು ಪ್ರಾಪ್ತಿಯಗಳಿವೆ ವ್ಯಾಪಾರ ಮಾಡುವವರು ಸಹೋದರ ಸಹೋದರಿಯರಿಂದ ಸಹಾಯ ಪಡೆಯಲಿದ್ದಾರೆ. ನಿಮ್ಮ ಮಾತಿನಲ್ಲಿನ ಮಧುರತೆಯಿಂದ ಜನರು ಪ್ರಭಾವಿತರಾಗುತ್ತಾರೆ.


ವೃಶ್ಚಿಕ ರಾಶಿ
ಸೂರ್ಯನು ಸಿಂಹರಾಶಿಯಲ್ಲಿರುವುದರಿಂದ, ವೃಶ್ಚಿಕ ರಾಶಿಯ ಜನರು ಆತ್ಮವಿಶ್ವಾಸದಿಂದ ತುಂಬಿರುತ್ತಾರೆ. ಆದಾಯ ಹೆಚ್ಚಾಗಲಿದೆ. ಪೋಷಕರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಸ್ನೇಹಿತರ ಬೆಂಬಲ ಸಿಗಲಿದೆ. ಈ ಸಮಯದಲ್ಲಿ, ಒಳ್ಳೆಯ ಸುದ್ದಿ ಪಡೆದು  ಮನಸ್ಸು ಸಂತೋಷವಾಗುತ್ತದೆ, ಉದ್ಯೋಗವನ್ನು ಬದಲಾಯಿಸುವ ಆಲೋಚನೆಯಲ್ಲಿರುವವರು, ತಮ್ಮ ಉದ್ಯೋಗದಲ್ಲಿ ಬದಲಾವಣೆಯನ್ನು ಕಾಣಬಹುದು.


ಇದನ್ನೂ ಓದಿ-ನಿಮ್ಮ ಅಂಗೈಯಲ್ಲಿ ಇದ್ಯಾ ‘ಮಿಸ್ಟಿಕ್ ಕ್ರಾಸ್’? ಅದೃಷ್ಟವಂತರಿಗೆ ಮಾತ್ರ ಇರುತ್ತೆ ಈ ರೇಖೆ


ಧನು ರಾಶಿ
ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುವಿರಿ. ವೈವಾಹಿಕ ಜೀವನವು ಸಂತೋಷದಿಂದ ಕೂಡಿರಲಿದೆ, ಇದರಿಂದಾಗಿ ಪತಿ ಮತ್ತು ಪತಿ ನಡುವಿನ ಸಂಬಂಧವು ಸುಮಧುರವಾಗಿರಲಿದೆ. ಬೋಧನಾ ಕಾರ್ಯದಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ, ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಸಹೋದರ ಸಹೋದರಿಯರ ಸಹಕಾರದಿಂದ ಲಾಭವಾಗಲಿದೆ.


ಇದನ್ನೂ ಓದಿ-Durga Ashtami 2022: ದಾರಿದ್ರ್ಯ ತೊಲಗಿಸಿ, ಸಂಪತ್ತನ್ನು ದ್ವಿಗುಣಗೊಳಿಸುತ್ತದೆ ತಾಯಿ ಲಕ್ಷ್ಮಿಗೆ ಸಮರ್ಪಿತ ಈ ವ್ರತ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.