ನವದೆಹಲಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಾದಿತ್ಯ ಯೋಗವು ಸೂರ್ಯ ಮತ್ತು ಬುಧದ ಸಂಯೋಜನೆಯಿಂದ ರೂಪುಗೊಂಡಿದೆ. ಏಪ್ರಿಲ್ 14 ರಂದು ಸೂರ್ಯನು ಮೇಷ ರಾಶಿಯಲ್ಲಿ ಸಾಗುತ್ತಾನೆ. ಈ ಹಿಂದೆ ಏಪ್ರಿಲ್ 8ರಂದು ಬುಧವು ಮೇಷ ರಾಶಿಯಲ್ಲಿ ಸಂಕ್ರಮಿಸಿದ್ದ. ಏಪ್ರಿಲ್ 25ರವರೆಗೆ ಬುಧ ಮೇಷ ರಾಶಿಯಲ್ಲಿ ಇರುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಬುಧ ಗ್ರಹಗಳ ಸಂಯೋಗದಿಂದ ಬುಧಾದಿತ್ಯ ಯೋಗ ಉಂಟಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧಾದಿತ್ಯ ಯೋಗವು 4 ರಾಶಿಚಕ್ರದ ಚಿಹ್ನೆಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಆ ರಾಶಿಚಕ್ರದ ಚಿಹ್ನೆಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗ ಆಗುತ್ತಿದೆ. ಇದರಿಂದ ಬುಧಾದಿತ್ಯ ಯೋಗವು ರೂಪುಗೊಳ್ಳುತ್ತಿದೆ. ಬುಧಾದಿತ್ಯ ಯೋಗದ ಪ್ರಭಾವದಿಂದ ಧೈರ್ಯ ಮತ್ತು ಶಕ್ತಿಯಲ್ಲಿ ಹೆಚ್ಚಿನ ಹೆಚ್ಚಳ ಕಂಡುಬರುತ್ತದೆ. ಇದರೊಂದಿಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಈ ಸಮಯವು ಹಣದ ಹೂಡಿಕೆಗೆ ಮಂಗಳಕರವಾಗಿರುತ್ತದೆ. ಇದಲ್ಲದೇ ಆದಾಯವೂ ಹೆಚ್ಚಲಿದೆ.


ಇದನ್ನೂ ಓದಿ: Guru Gochar 2022: ಇಂದಿನಿಂದ ಈ 3 ರಾಶಿಯವರ ಬದುಕಿನಲ್ಲಿ ಹಣದ ಸುರಿಮಳೆ


ವೃಷಭ ರಾಶಿ: ವೃಷಭ ರಾಶಿಯವರಿಗೆ ಬುಧಾದಿತ್ಯ ಯೋಗದ ಲಾಭ ದೊರೆಯಲಿದೆ. ಬುಧಾದಿತ್ಯ ಯೋಗದಿಂದ ಆರ್ಥಿಕ ಸ್ಥಿತಿಯಲ್ಲಿ ಸಕಾರಾತ್ಮಕ ಸುಧಾರಣೆ ಕಂಡುಬರುವುದು. ಸಮಾಜದಲ್ಲಿ ಗೌರವದ ಲಾಭವನ್ನು ಪಡೆಯುತ್ತೀರಿ. ಇದಲ್ಲದೇ ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಿಂದ ಧನ ಲಾಭವಾಗಲಿದೆ.


ಮಿಥುನ ರಾಶಿ: ಈ ರಾಶಿಯವರಿಗೆ ಬುಧಾದಿತ್ಯ ಯೋಗದ ಲಾಭ ದೊರೆಯಲಿದೆ. ವಾಸ್ತವವಾಗಿ ಈ ರಾಶಿಚಕ್ರದ ಅಧಿಪತಿ ಬುಧ ಮತ್ತು ಸೂರ್ಯನೊಂದಿಗೆ ಅದರ ಸಂಯೋಗದಿಂದ ಉದ್ಯೋಗದಲ್ಲಿ ಬಡ್ತಿಯ ಅವಕಾಶವಿರುತ್ತದೆ. ಇದಲ್ಲದೇ ವ್ಯಾಪಾರದಲ್ಲಿಯೂ ಆರ್ಥಿಕ ಪ್ರಗತಿ ಕಂಡುಬರುವುದು. ಈ ಸಮಯದಲ್ಲಿ ಆಸ್ತಿ ಸಂಪಾದಿಸುವಲ್ಲಿ ಯಶಸ್ವಿಯಾಗುತ್ತೀರಿ.


ಸಿಂಹ ರಾಶಿ: ಸಿಂಹ ರಾಶಿಯ ಜನರು ಬುಧಾದಿತ್ಯ ಯೋಗದಿಂದ ಅದ್ಭುತವಾದ ಲಾಭವನ್ನು ಪಡೆಯುತ್ತಾರೆ. ಬುಧಾದಿತ್ಯ ಯೋಗವು ಈ ರಾಶಿಯವರಿಗೆ ಅದೃಷ್ಟವನ್ನು ಹೆಚ್ಚಿಸುತ್ತದೆ. ಉದ್ಯೋಗ-ವ್ಯವಹಾರಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.  


ಇದನ್ನೂ ಓದಿ: Shani Gochar: 30 ವರ್ಷಗಳ ನಂತರ ಕುಂಭ ರಾಶಿಗೆ ಶನಿ ಪ್ರವೇಶ, ಬೆಳಗಲಿದೆ ಈ ರಾಶಿಯವರ ಭಾಗ್ಯ


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.