Sun Transit Impact: ಶನಿಯ ಮನೆಯಲ್ಲಿ ಸೂರ್ಯನ ಪ್ರವೇಶ, ಈ ರಾಶಿಯ ಜನರ ಮೇಲೆ ಬೀಳಲಿದೆ ಹೆಚ್ಚು ಪ್ರಭಾವ
Guru Ast In 2022 - ಫೆಬ್ರವರಿ 13 ರಂದು, ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿ ಶನಿಯ ರಾಶಿಯಗಿರುವ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೇ. ಅಲ್ಲಿ ಈಗಾಗಲೇ ಗುರು ಆಗಮನ ನಡೆದಿದೆ. ಸೂರ್ಯನ ಆಗಮನದಿಂದ ಗುರುಗಳು ಅಸ್ತಗೊಳ್ಳುತ್ತಾನೆ. ಈ ಪರಿಸ್ಥಿತಿಯು ಎಲ್ಲಾ ರಾಶಿಗಳ ಜನರ ಮೇಲೆಪ್ರಭಾವ ಬೀರುತ್ತದೆ.
ನವದೆಹಲಿ: Guru Ast Impact - ಜ್ಯೋತಿಷ್ಯ ಶಾಸ್ತ್ರದಲ್ಲಿ(Astrology) ಸೂರ್ಯ(Sun Transit), ಶನಿ (Shani Dev) ಮತ್ತು ಗುರು (Guru Ast) ಗ್ರಹಗಳನ್ನು ಪ್ರಮುಖ ಗ್ರಹಗಳೆಂದು ಪರಿಗಣಿಸಲಾಗಿದೆ. ಫೆಬ್ರವರಿ 2022 ಸೂರ್ಯ, ಶನಿ ಮತ್ತು ಗುರುಗಳ ಸ್ಥಾನದಲ್ಲಿ ಗಮನಾರ್ಹ ಬದಲಾವಣೆಯ ತಿಂಗಳಾಗಿದೆ. ಸೂರ್ಯನು ಶನಿಯ ಕುಂಭ ರಾಶಿ ಪ್ರವೇಶಿಸಲಿದ್ದಾನೆ. ಆದರೆ ಗುರು (Guru) ಈಗಾಗಲೇ ಕುಂಭ ರಾಶಿಗೆ ಪ್ರವೇಶಿಸಿರುವ ಕಾರಣ ಸೂರ್ಯನ ಈ ಕುಂಭ ರಾಶಿ ಪ್ರವೇಶದಿಂದ ಗುರು ಅಸ್ತಮಿಸಲಿದ್ದಾನೆ (Guru Combust) ಫೆಬ್ರವರಿ 13 ರಂದು ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಗುರುವನ್ನು ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿರುವುದರಿಂದ, ಅದರ ಅಸ್ತ ಉತ್ತಮ ಸಂಕೇತಗಳನ್ನು ನೀಡುವುದಿಲ್ಲ.
ಕುಂಭ ರಾಶಿಯ ಮೇಲೆ ಹೆಚ್ಚಿನ ಪ್ರಭಾವ
ಈ ಗ್ರಹಗಳ ಸ್ಥಾನಗಳ ಪರಿಣಾಮವು ಎಲ್ಲಾ ರಾಶಿ ಚಿಹ್ನೆಗಳ (Zodiac Sign) ಮೇಲೆ ಇರಲಿದೆ. ಆದರೆ ಕುಂಭ ರಾಶಿಯವರಿಗೆ (Zodiac Natives), ಈ ಸಮಯವು ಅತ್ಯಂತ ದುಬಾರಿ ಪರಿಣಮಿಸುವ ಸಾಧ್ಯತೆ ಇದೆ. ಹೀಗಾಗಿ ಅವರು ಯಾವುದೇ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ನಂತರ ಒಂದು ತಿಂಗಳು ಕಾಯಿರಿ.
ಉಳಿದ ರಾಶಿಗಳ ಮೇಲೆ ಯಾವ ಪ್ರಭಾವ
ಮೇಷ: ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ಹೊಗಳಿಕೆ ಇರಬಹುದು. ಬಡ್ತಿ ಪಡೆಯಬಹುದು. ಹಣಕಾಸಿನ ಹರಿವು ಉತ್ತಮವಾಗಿರಲಿದೆ.
ವೃಷಭ: ಅನೇಕ ವಿಷಯಗಳಲ್ಲಿ ಸಮಯ ಉತ್ತಮವಾಗಿದೆ. ಬಹಳ ಸಮಯದ ನಂತರ, ಈಗ ನೀವು ಪ್ರಗತಿ ಬಹಿರಂಗವಾಗಿ ರುಚಿ ಸವಿಯುತ್ತಿರುವಿರಿ. ವೃತ್ತಿಯಲ್ಲಿ ಅಧಿಕಾರ ಹೆಚ್ಚಾಗಲಿದೆ. ನೀವು ಬಡ್ತಿ ಮತ್ತು ಗೌರವದ ಸಂಕೇತಗಳಿವೆ.
ಮಿಥುನ: ವ್ಯಾಪಾರಸ್ಥರಿಗೆ ಅಪಾರ ಲಾಭವಾಗಲಿದೆ. ಕಾರ್ಮಿಕ ವರ್ಗದವರಿಗೂ ಸಮಯ ಉತ್ತಮವಾಗಿರುತ್ತದೆ. ಧನ ಲಾಭದ ಸಂಕೇತಗಳು ಗೋಚರಿಸುತ್ತಿವೆ.
ಕರ್ಕ: ನೀವು ಹಣದ ಬಿಕ್ಕಟ್ಟು ಅನುಭವಿಸುವಿರಿ. ಯಾವುದೇ ಒಂದು ಹಾನಿ ಸಂಭವಿಸಬಹುದು. ವೃತ್ತಿಜೀವನಕ್ಕೆ ನಿಮ್ಮ ಅತ್ಯುತ್ತಮವಾದದ್ದನ್ನು ನೀಡಿ.
ಸಿಂಹ: ಸಿಂಹ ರಾಶಿಯವರಿಗೆ ಕೆಲಸದಲ್ಲಿ ಕೆಲವು ಸಮಸ್ಯೆಗಳು ಎದುರಾಗಬಹುದು. ಬಯಸಿದ ಫಲಿತಾಂಶಗಳನ್ನು ಪಡೆಯದಿರುವುದು ನಿರಾಶೆ ತರುವ ಸಾಧ್ಯತೆ ಇದೆ.
ಕನ್ಯಾ: ಶತ್ರುಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ ಮತ್ತು ಅವರನ್ನು ನಿರಾಶೆಗೊಳಿಸಿ ಬಿಡುವಿರಿ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ಸರ್ಕಾರಿ ವಲಯದಲ್ಲಿ ಜನರಿಗೆ ಧನಲಾಭವಾಗುವ ಸಂಭವವಿದೆ.
ತುಲಾ: ಹಳೆಯ ಹೂಡಿಕೆ ಲಾಭ ನೀಡಲಿದೆ. ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳಿವೆ, ನೀವು ಅದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುತ್ತೀರಿ. ಇದರಿಂದ ಭವಿಷ್ಯದಲ್ಲಿಯೂ ಅನುಕೂಲವಾಗಲಿದೆ.
ವೃಶ್ಚಿಕ: ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳಿರಬಹುದು. ಸಮತೋಲನವನ್ನು ಕಾಪಾಡಿಕೊಳ್ಳಿ, ಇಲ್ಲದಿದ್ದರೆ ನೀವು ಒತ್ತಡಕ್ಕೆ ಗುರಿಯಾಗುವಿರಿ.
ಧನು: ಯೋಜನೆಗಳು ಪೂರ್ಣಗೊಳ್ಳಲಿವೆ. ಅದೃಷ್ಟ ನಿಮ್ಮೊಂದಿಗೆ ಇರುತ್ತದೆ. ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.
ಮಕರ: ಆರ್ಥಿಕ ಪರಿಸ್ಥಿತಿಗಳು ಸಾಧಾರಣವಾಗಿರುತ್ತವೆ, ಆದರೆ ಕೆಲವು ಸಂದರ್ಭಗಳಲ್ಲಿ ಮಾತ್ರ ನಿರಾಶೆ ಬರಬಹುದು. ವಿವಾದವನ್ನು ತಪ್ಪಿಸಿ.
ಇದನ್ನೂ ಓದಿ-Chanakya Niti : ವಿಧಿಯ ಈ 5 ನಿರ್ಧಾರಗಳು ತಾಯಿಯ ಗರ್ಭದಲ್ಲಿ ನಿರ್ಧರವಾಗುತ್ತವೆಯಂತೆ!
ಮೀನ: ಆರ್ಥಿಕವಾಗಿ ಹೊಂದಾಣಿಕೆ ಇರುತ್ತದೆ. ನೀವು ಖರ್ಚುಗಳನ್ನು ನಿಯಂತ್ರಿಸಿದರೆ ಉತ್ತಮ. ಇದರಿಂದ ನಿಮ್ಮ ಠೇವಣಿಗಳು ಖಾಲಿಯಾಗುವುದಿಲ್ಲ.
ಇದನ್ನೂ ಓದಿ-ಪೂಜೆಗಿಂತ ಸಂಧ್ಯಾ ವಂದನೆ ಏಕೆ ಮುಖ್ಯ? ಇದರ ಹಿಂದಿರುವ ಧಾರ್ಮಿಕ ಕಾರಣವೇನೆಂದು ತಿಳಿಯಿರಿ
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರನ್ನು ಸಂಪರ್ಕಿಸಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )
ಇದನ್ನೂ ಓದಿ-Mauni Amavasya: ‘ಕಾಳಸರ್ಪ ದೋಷ’ ನಿವಾರಣೆಗೆ ಇಲ್ಲಿದೆ ನೋಡಿ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.