Sun Transit January 2023 Date and Makar sankranti 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದಾಗ ಅದನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಜನವರಿಯಲ್ಲಿ, ಗ್ರಹಗಳ ರಾಜನಾದ ಸೂರ್ಯನು ತನ್ನ ಮಗನಾಗಿರುವ  ಶನಿಯ ಮಕರ ರಾಶಿಗೆ ಪ್ರವೇಶಿಸುತ್ತಾನೆ. ಈ ದಿನವನ್ನು ಮಕರ ಸಂಕ್ರಾಂತಿ ಹಬ್ಬದ ರೂಪದಲ್ಲಿ ಆಚರಿಸಲಾಗುತ್ತದೆ. ಶನಿಯ ಮಕರ ರಾಶಿಗೆ ಸೂರ್ಯನ ಪ್ರವೇಶವು ಈ ವರ್ಷ ತುಂಬಾ ಮಹತ್ವದ್ದಾಗಿದೆ ಏಕೆಂದರೆ ಶನಿಯು ಪ್ರಸ್ತುತ ತನ್ನದೇ ಆದ ಮಕರ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಈ ರೀತಿಯಾಗಿ ಶನಿ ಮತ್ತು ಸೂರ್ಯ ಒಂದೇ ರಾಶಿಯಲ್ಲಿ ಭೇಟಿಯಾಗಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯನ ಈ ಮಕರ ಸಂಕ್ರಮಣ ಎಲ್ಲಾ 12 ರಾಶಿಗಳ ಜನರ ಮೇಲೆ ಭಾರಿ ಪ್ರಭಾವ ಬೀರಲಿದೆ. ಮತ್ತೊಂದೆಡೆ, ಮಕರ ರಾಶಿಗೆ ಸೂರ್ಯನ ಪ್ರವೇಶವು ನಾಲ್ಕು ರಾಶಿಚಕ್ರ ರಾಶಿಗಳ ಜನರಿಗೆ ಅತ್ಯಂತ ಮಂಗಳ ಫಲದಾಯಿ ಸಾಬೀತಾಗಲಿದೆ.  ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,


COMMERCIAL BREAK
SCROLL TO CONTINUE READING

ಮಕರ ಸಂಕ್ರಾಂತಿಯಿಂದ ಈ ರಾಶಿಗಳ ಜನರ ಅದೃಷ್ಟ ಬೆಳಗಲಿದೆ
ವೃಷಭ ರಾಶಿ:
ಸೂರ್ಯನ ಈ ರಾಶಿ ಪರಿವರ್ತನೆ ವೃಷಭ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರಕ್ಕೆ ತುಂಬಾ ಶುಭವಾಗಲಿದೆ. ಈ ಜನರು ಪ್ರತಿ ಕೆಲಸದಲ್ಲಿ ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಉದ್ಯೋಗಿಗಳಿಗೆ ಬಡ್ತಿ ಮತ್ತು ಸಂಬಳದಲ್ಲಿ ಹೆಚ್ಚಳವಾಗಬಹುದು. ಇದೇ ವೇಳೆ, ವ್ಯಾಪಾರ ವರ್ಗದ ಜನರಿಗೆ ದೊಡ್ಡ ಆರ್ಡರ್ ಅಥವಾ ಬಿಸ್ನೆಸ್ ಸಿಗುವ  ಸಾಧ್ಯತೆ ಇದೆ. ಪ್ರಯಾಣದ ಸಾಧ್ಯತೆಗಳಿವೆ. ಜನರು ನಿಮ್ಮ ಕೆಲಸದಿಂದ ಸಂತೋಷಪಡುತ್ತಾರೆ ಮತ್ತು ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ.


ಮಿಥುನ ರಾಶಿ: ಸೂರ್ಯನ ಈ ಸಂಕ್ರಮವು ಮಿಥುನ ರಾಶಿಯವರಿಗೆ ಶುಭ ಫಲದಾಯಕವಾಗಿರುತ್ತದೆ. ಇವರು ತಮ್ಮ ಪ್ರತಿಯೊಂದು ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ವಿಶೇಷವಾಗಿ ಸಂಶೋಧನೆಗೆ ಸಂಬಂಧಿಸಿದ ಕೆಲಸಗಳಲ್ಲಿ ಸಕ್ರಿಯರಾಗಿರುವವರು ವಿಶೇಷ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯ ಉತ್ತಮವಾಗಿರುತ್ತದೆ. ಯಾವುದಾದರೊಂದು ಹಳೆಯ ಕಾಯಿಲೆಯಿಂದ ಪೀಡಿತರಾಗಿದ್ದರೆ, ಅದರಿಂದ ನಿಮಗೆ ಮುಕ್ತಿ ಸಿಗಲಿದೆ.


ಇದನ್ನೂ ಓದಿ-Baba Vanga Prediction: ಮುಂದಿನ ವರ್ಷ ಭೂಮಿಯ ಮೇಲೆ ಭಾರಿ ಹಾಹಾಕಾರ! 2023ರ ಬಾಬಾ ವಂಗಾ ಭವಿಷ್ಯವಾಣಿ ಇಲ್ಲಿದೆ
 
ಕರ್ಕ ರಾಶಿ: ಮಕರ ರಾಶಿಗೆ ಸೂರ್ಯನ ಪ್ರವೇಶವು ಕರ್ಕ ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಈ ಜನರು ತಮ್ಮ ಬಾಳ ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತಾರೆ. ಮತ್ತೊಂದೆಡೆ, ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ತೊಡಗಿರುವವರಿಗೆ ಉತ್ತಮ ಯಶಸ್ಸು ಪ್ರಾಪ್ತಿಯಾಗಲಿದೆ. ಆಮದು-ರಫ್ತಿಗೆ ಸಂಬಂಧಿಸಿದ ಕೆಲಸವನ್ನು ಮಾಡುವ ಜನರು ವ್ಯಾಪಾರದಲ್ಲಿ ಭಾರಿ ಲಾಭವನ್ನು ಗಳಿಸಬಹುದು. ಮತ್ತೊಂದೆಡೆ, ಅವಿವಾಹಿತರಿಗೆ ಕಂಕಣ ಬಲ ಕೂಡಿಬರುವ ಸಾಧ್ಯತೆ ಇದೆ.


ಇದನ್ನ ಓದಿ-Tulsi Plant: ಒಂದೇ ರಾತ್ರಿಯಲ್ಲಿ ಅದೃಷ್ಟ ಬದಲಾಗಬೇಕೇ? ತುಳಸಿ ಕುಂಡದ ಮೇಲೆ ಈ ಚಿಹ್ನೆಗಳನ್ನು ರಚಿಸಿ


ಮಕರ ರಾಶಿ: ಶನಿ ಅಧಿಪತ್ಯದ ರಾಶಿ ನಿಮ್ಮದಾಗಿದೆ ಮತ್ತು ಈಗಾಗಲೇ ಶನಿ ಮಹಾರಾಜ ತನ್ನ ಸ್ವರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಹೀಗಿರುವಾಗ ನಿಮ್ಮ ರಾಶಿಗೆ ಸೂರ್ಯನ ಪ್ರವೇಶ, ನಿಮಗೆ ಶನಿ ಮತ್ತು ಸೂರ್ಯನ ಸಂಯೋಜನೆಯಿಂದ ವಿಶೇಷ ಫಲಿತಾಂಶಗಳನ್ನು ನೀಡಲಿದೆ. ಈ ಅವಧಿಯಲ್ಲಿ ಮಕರ ಜಾತಕದವರ ಆರೋಗ್ಯ ಸುಧಾರಿಸಲಿದೆ. ಇಡೀ ಕುಟುಂಬದ ಬೆಂಬಲ ನಿಮಗೆ ಸಿಗಲಿದೆ. ಒಳ್ಳೆಯ ಸಮಯವನ್ನು ಕಳೆಯುವಿರಿ, ಹೊಸ ಕೆಲಸದ ಪ್ರಸ್ತಾಪ ಬರಬಹುದು. ಪ್ರಸ್ತುತ ಕೆಲಸದಲ್ಲಿ ನೀವು ಬಡ್ತಿ ಪಡೆಯಬಹುದು. ನೀವು ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.