Sun Transit 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳ ರಾಜ ಸೂರ್ಯನ ರಾಶಿ ಪರಿವರ್ತನೆಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಮತ್ತು ಸೂರ್ಯನ ಈ ಸ್ಥಾನ ಪಲ್ಲಟ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಗ್ರಹಗಳ ರಾಜನಾದ ಸೂರ್ಯನು ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ನಂತರ ಸುಮಾರು ಒಂದು ತಿಂಗಳ ಕಾಲ ಅದೇ ರಾಶಿಯಲ್ಲಿ ವಿರಾಜಮಾನನಾಗುತ್ತಾನೆ. ಈ ಬಾರಿ ದೀಪಾವಳಿಗೆ ಸುಮಾರು ಒಂದು ವಾರ ಮುಂಚಿತವಾಗಿ ಅಂದರೆ ಅಕ್ಟೋಬರ್ 17 ರಂದು ಸೂರ್ಯದೇವ ತುಲಾ ರಾಶಿಗೆ ಪ್ರವೇಶಿಸಲಿದ್ದಾರೆ. ಸೂರ್ಯನು ತುಲಾ ರಾಶಿಯಲ್ಲಿ ಪ್ರವೇಶ ಮಾಡುವುದರಿಂದ ಕುಂಭ ರಾಶಿ ಮತ್ತು ಲಗ್ನ ಜಾತಕದವರ ಮೇಲೆ ಏನೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಬಾರಿಯ ಸೂರ್ಯನ ಈ ರಾಶಿ ಪರಿವರ್ತನೆ ಕುಂಭ ಜಾತಕದ ಜನ ಅದರಲ್ಲಿಯೂ ವಿಶೇಷವಾಗಿ ನವ ದಂಪತಿಗಳು ಅಥವಾ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವವರ ಭಾಗ್ಯವೇ ಬದಲಾಯಿಸಲಿದೆ. ಇಬ್ಬರಲ್ಲಿ ಯಾರಿಗಾದರು ಒಬ್ಬರಿಗೆ ನೌಕರಿ ಭಾಗ್ಯ ಅಥವಾ ಬಡ್ತಿ ಭಾಗ್ಯ ಸಿಗಲಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರಿಗೆ ಉತ್ತಮ ಸಮಾಚಾರ ಪ್ರಾಪ್ತಿಯಾಗಲಿದೆ, ನಿರುದ್ಯೋಗಿ ಯುವಕರು ಆತಂಕ ಪಡುವ ಅವಶ್ಯಕತೆ ಇಲ್ಲ, ಶೀಘ್ರದಲ್ಲೇ ಅವರ ವಿದ್ಯಾರ್ಹತೆಗೆ ತಕ್ಕಂತೆ ಅವರಿಗೆಉದ್ಯೋಗ ಸಿಗಲಿದೆ.


ದೂರದ ಗುಡ್ಡ ಕಣ್ಣಿಗೆ ನುಣ್ಣನೆ, ಹೀಗಾಗಿ ದೊಡ್ಡ ಲಾಭದ ದುರಾಶೆಯಲ್ಲಿರಬೇಡಿ, ನಿಮ್ಮ ವಿವೇಚನೆಯನ್ನು ಬಳಸಿ, ಇಲ್ಲದಿದ್ದರೆ ನೀವು ಹಣವನ್ನು ಕಳೆದುಕೊಳ್ಳಬಹುದು. ವ್ಯವಹಾರವು ಉತ್ತಮವಾಗಿ ನಡೆಯದ ಕಾರಣ ಅಥವಾ ಮೋಸ ಹೋಗುವುದರಿಂದ ವ್ಯಕ್ತಿಯು ಅವಮಾನವನ್ನು ಅನುಭವಿಸಬೇಕಾಗಬಹುದು, ಆದರೆ ನಿರಾಶೆಗೊಳ್ಳುವ ಅವಶ್ಯಕತೆ ಇಲ್ಲ, ಈ ಎಡವಟ್ಟುಗಳು ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಗಟ್ಟಿಗೊಳಿಸುತ್ತದೆ.


ದೂರ ಪ್ರಯಾಣ ತಪ್ಪಿಸಿ
ಕುಟುಂಬದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮಗು ಹದಿಹರೆಯದವರಾಗಿದ್ದರೆ, ಅವನೊಂದಿಗೆ ಸ್ನೇಹಪರವಾಗಿ ವರ್ತಿಸಿ, ಇದರಿಂದ ಅವನು ಯಾವುದೇ ರೀತಿಯ ಕೆಟ್ಟ ಸಹವಾಸಕ್ಕೆ ಬೀಳುವುದಿಲ್ಲ ಮತ್ತು ಅವನು ಚಿಕ್ಕವನಾಗಿದ್ದರೆ ಅವನ ದಿನಚರಿ ಮತ್ತು ಆರೋಗ್ಯಕ್ಕೆ ಗಮನ ಕೊಡಿ. ಈ ಸಮಯದಲ್ಲಿ ದೂರದ ಪ್ರಯಾಣ ಆದಷ್ಟು ತಪ್ಪಿಸಿ. ದೀರ್ಘ ಪ್ರಯಾಣದ ಸಮಯದಲ್ಲಿ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿರಿ. ಅಪಘಾತವಾಗುವ ಸಂಭವವಿರುವುದರಿಂದ ರಸ್ತೆಯಲ್ಲಿ ನಡೆಯುವಾಗ ಮೊಬೈಲ್ ಅಥವಾ ಹೆಡ್‌ಫೋನ್‌ ಹಾಕಿಕೊಂಡು ಚಲಿಸಬೇಡಿ.


ಇದನ್ನೂ ಓದಿ-Mangal Gochar 2022: ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಿತು.! ಇನ್ನು ನಿಮ್ಮನ್ನು ತಡೆಯುವವರಿಲ್ಲ


ವಿವಾದಗಳಿಂದ ದೂರವಿರಿ
ಬದಲಾಗುತ್ತಿರುವ ಹವಾಮಾನವು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಈ ಸಮಯದಲ್ಲಿ ಸ್ವಲ್ಪ ಮಿತಿಯಲ್ಲಿಯೇ ಇರುವುದು ಉತ್ತಮ. ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ, ಇದರಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇನ್ನೂ ನೀವು ನಿಮ್ಮ ವೃತ್ತಿಜೀವನದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಬೇಕಾಗಿದೆ, ಆದ್ದರಿಂದ ದೀರ್ಘ ಓಟದ ಕುದುರೆಯಾಗಿ ನಿಮ್ಮನ್ನು ನೀವು ಬಲಪಡಿಸಿಕೊಳ್ಳಿ. ಅನಗತ್ಯ ಜಗಳಕ್ಕೆ ಇಳಿಯುವುದು ಒಳ್ಳೆಯದಲ್ಲ. ಹೆಚ್ಚು ಮಾತನಾಡಬೇಡಿ ಅಥವಾ ಅದು ಸೂಕ್ತವಲ್ಲದ ಕಡೆಗೆ ಹೋಗಬೇಡಿ, ಇಲ್ಲದಿದ್ದರೆ ನೀವು ತೊಂದರೆಯನ್ನು ಎಳೆದುಕೊಳ್ಳುವಿರಿ. ಈ ಸಮಯದಲ್ಲಿ ನಿಮ್ಮ ಮನಸ್ಸಿನಲ್ಲಿ ಅನೇಕ ನಕಾರಾತ್ಮಕ ವಿಷಯಗಳು ಉದ್ಭವಿಸಬಹುದು, ಇಂತಹ ಪರಿಸ್ಥಿತಿಯಲ್ಲಿ ಯಾರಾದರೂ ನಿಮ್ಮಿಂದ ಈ ಅವಕಾಶವನ್ನು ಬಳಸಿಕೊಳ್ಳಬಹುದು.


ಇದನ್ನೂ ಓದಿ-Narak Chaturdashi 2022: ನರಕ ಚತುರ್ದಶಿಯ ದಿನ ಈ ಒಂದು ಕೆಲಸ ಮಾಡಿ ನರಕ ಯಾತನೆಯಿಂದ ಮುಕ್ತಿ ಪಡೆಯಿರಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.