ನವದೆಹಲಿ : ಸೂರ್ಯ ದೇವರನ್ನು (Sun) ಒಂಭತ್ತು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ತಮ್ಮ ರಾಶಿಚಕ್ರವನ್ನು (Sun Transit) ಕಾಲಕಾಲಕ್ಕೆ ಬದಲಾಯಿಸುತ್ತಲೇ ಇರುತ್ತಾನೆ. ರಾಶಿಚಕ್ರದ ಈ ಬದಲಾವಣೆಯನ್ನು ಪರಿವರ್ತನೆಯ ಗೋಚರ ಕಾಲ ಎಂದು ಕರೆಯಲಾಗುತ್ತದೆ. 


COMMERCIAL BREAK
SCROLL TO CONTINUE READING

ಅಕ್ಟೋಬರ್ 17 ರಂದು ತುಲಾ ರಾಶಿಗೆ ಸೂರ್ಯನ ಪ್ರವೇಶ : 
ಅಕ್ಟೋಬರ್ 17 ರಂದು ಸೂರ್ಯ, ತುಲಾ ರಾಶಿಗೆ (Libra) ಪ್ರವೇಶಿಸಲಿದ್ದಾನೆ. ನಂತರ ಈ ರಾಶಿಯಲ್ಲಿ ನವೆಂಬರ್ 16 ರವರೆಗೆ ಇರಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯು (Sun Transit) ಕೆಲವು ರಾಶಿಚಕ್ರ ಚಿಹ್ನೆಗಳ ಭಾಗ್ಯವನ್ನೇ ಬದಲಾಯಿಸಲಿದೆ.ಇನ್ನು ಕೆಲವು ರಾಶಿಚಕ್ರ (Zodic sign) ಚಿಹ್ನೆಗಳಿಗೆ ಸವಾಲಾಗಿರುತ್ತದೆ. 


ಇದನ್ನೂ ಓದಿ : ದಸರಾದಲ್ಲಿ ಪಾನ್ ತಿನ್ನುವುದು ಏಕೆ ಮುಖ್ಯ? ಮಹತ್ವ ಮತ್ತು ಕಾರಣಗಳನ್ನು ತಿಳಿಯಿರಿ


ಧನು ರಾಶಿ  (Sagittarius): 
ಕೌಟುಂಬಿಕ ಜೀವನ ಉತ್ತಮವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವ ಅವಕಾಶ ಸಿಗಬಹುದು. ಈ ಸಮಯದಲ್ಲಿ, ಮನೆಯ ಹಿರಿಯರು ಜೀವನದಲ್ಲಿ ಮುಂದೆ ಸಾಗಲು ಮಾರ್ಗದರ್ಶನ ನೀಡುತ್ತಾರೆ. ವ್ಯಾಪಾರವನ್ನು ಹೆಚ್ಚಿಸಲು ಮಾಡಿದ ಯೋಜನೆಗಳು ಈ ಅವಧಿಯಲ್ಲಿ ಯಶಸ್ವಿಯಾಗಬಹುದು. ಉದ್ಯೋಗಾಕಾಂಕ್ಷಿಗಳು ಈ ಅವಧಿಯಲ್ಲಿ ಹಿಂದಿನ ಶ್ರಮದ ಫಲವನ್ನು ಪಡೆಯುವ ಸಾಧ್ಯತೆಯಿದೆ.


ಮಕರ ರಾಶಿ (Capricorn):
ಕೆಲಸದ ಸ್ಥಳದಲ್ಲಿ ಮೆಚ್ಚುಗೆಯನ್ನು ಪಡೆಯಬಹುದು. ಜೀವನದಲ್ಲಿ ಮುಂದೆ ಸಾಗಲು ನೀವು ಅರೆಕಾಲಿಕ ಅಥವಾ ಆನ್‌ಲೈನ್ ಕೋರ್ಸ್ (Online course) ಮಾಡಲು ಯೋಜಿಸಬಹುದು. ಈ ರಾಶಿಚಕ್ರದ ಜನರು ಸೂರ್ಯ ಸ್ಥಾನ ಪಲ್ಲಟ ಅವಧಿಯಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಸಹಾಯವನ್ನು ಪಡೆಯುತ್ತಾರೆ.


ಇದನ್ನೂ ಓದಿ : Dussehra 2021: ಸುಖ-ಶಾಂತಿ, ಲಕ್ಷ್ಮೀ ಕೃಪೆಗಾಗಿ ದಸರಾ ದಿನದಂದು ಈ ಸುಲಭ ಉಪಾಯ ಮಾಡಿ


ಸಿಂಹ (Leo):
ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಆರೋಗ್ಯ ಸಮಸ್ಯೆ ದೂರವಾಗುತ್ತದೆ ಆದರೆ ಕೆಲವು ಆರೋಗ್ಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಟ್ರಾನ್ಸಿಟ್ ಅವಧಿಯಲ್ಲಿ ವ್ಯಾಪಾರಿಗಳಿಗೆ ಸಮಯ ಅನುಕೂಲಕರವಾಗಿರುತ್ತದೆ. ಸರ್ಕಾರಿ ನೌಕರರ ಆದಾಯ ಹೆಚ್ಚಾಗುತ್ತದೆ ಮತ್ತು ಅವರು ಆದಾಯದ ಇತರ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಈ ಅವಧಿಯಲ್ಲಿ ಶತ್ರುಗಳೊಂದಿಗೆ ಜಾಗರೂಕರಾಗಿರಿ. ನಿಮ್ಮ ಸಂಗಾತಿಯೊಂದಿಗೆ ನೀವು ಬಲವಾದ ಸಂಬಂಧವನ್ನು ಹೊಂದಿರುತ್ತೀರಿ.


ಮೀನ ರಾಶಿ (Pisces):
ಈ ಅವಧಿಯಲ್ಲಿ ಪೂರ್ವಜರ ಆಸ್ತಿ ಮತ್ತು ಹೂಡಿಕೆಯ ಲಾಭ ಪಡೆಯುವ ಸಾಧ್ಯತೆ ಇದೆ. ಮದುವೆಯ ಪ್ರಸ್ತಾಪ ಬರಬಹುದು. ಮನೆಯಲ್ಲಿ  ಸಂತೋಷ ಇರಲಿದೆ. ಈ ರಾಶಿಚಕ್ರದ (Zodiac sign) ಜನರು ಎಲ್ಲಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲಿದ್ದಾರೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ಉದ್ಯೋಗದಲ್ಲಿರುವ ಜನರ ಆದಾಯ ಹೆಚ್ಚಾಗಬಹುದು.


ಇದನ್ನೂ ಓದಿ : Dussehra 2021: ದಸರಾ ದಿನದಂದು ಈ ವಿಶೇಷ ಕೆಲಸ ಮಾಡಿದರೆ, ಸಾಡೇಸಾತಿ ಶನಿ ಕಾಟದಿಂದ ಸಿಗುತ್ತೆ ಮುಕ್ತಿ


ತುಲಾ (Libra):
ಉದ್ಯಮಿಗಳು ಉತ್ತಮ ಲಾಭ ಪಡೆಯಲು ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಪಡೆಯುತ್ತಾರೆ. ನೀವು ಜೀವನದಲ್ಲಿ ಮುಂದೆ ಸಾಗಲು ಹಲವು ಹೊಸ ಅವಕಾಶಗಳನ್ನು ಪಡೆಯುತ್ತೀರಿ  ನಿಮ್ಮ ಯೋಜನೆಗಳು ಪೂರ್ಣಗೊಳ್ಳುತ್ತವೆ. ವಿದೇಶಗಳಲ್ಲಿಯೂ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬಹುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸಲು ನಿಮಗೆ ಅವಕಾಶ ಸಿಗುತ್ತದೆ.


ಮಿಥುನ (Gemini):
ಈ ಅವಧಿಯಲ್ಲಿ ಆತ್ಮವಿಶ್ವಾಸದ ಕೊರತೆ ಇರಬಹುದು. ಆದರೂ ಅವರ ಅಧ್ಯಯನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಯೋಗವನ್ನು ವಿದೇಶದಲ್ಲಿ ಅಧ್ಯಯನ ಮಾಡಲು ಕೂಡ ಮಾಡಬಹುದು. ಪ್ರೇಮ ವ್ಯವಹಾರಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಕಾಲ ಕಳೆಯುವ ಅವಕಾಶ ಸಿಗಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.