ನವದೆಹಲಿ: ಗ್ರಹಗಳ ರಾಜ ಸೂರ್ಯ 1 ತಿಂಗಳಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತಾನೆ(Sun Transit 2022). ಸೂರ್ಯ ಯಶಸ್ಸು, ಆತ್ಮವಿಶ್ವಾಸ, ಆರೋಗ್ಯ, ಗೌರವ ಕಾರಕ ಗ್ರಹ. ಸೂರ್ಯನ ಸಂಚಾರವು ಎಲ್ಲಾ 12 ರಾಶಿಚಕ್ರಗಳ ಮೇಲೆ ಪರಿಣಾಮ ಬೀರುತ್ತದೆ. ಮುಂಬರುವ ಏಪ್ರಿಲ್ 14 ರಂದು ಸೂರ್ಯನು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಸೂರ್ಯನು ಪ್ರಸ್ತುತ ಮೀನ ರಾಶಿಯಲ್ಲಿದ್ದು, ಏಪ್ರಿಲ್ 14ರಂದು ತನ್ನ ಉತ್ಕೃಷ್ಟ ರಾಶಿಯನ್ನು ಪ್ರವೇಶಿಸುತ್ತಾನೆ(Surya Rashi Parivartan). ಸೂರ್ಯನ ಈ ರಾಶಿಚಕ್ರ ಬದಲಾವಣೆಯು 3 ರಾಶಿಚಕ್ರದ ಜನರಿಗೆ ತುಂಬಾ ಮಂಗಳಕರವೆಂದು ಸಾಬೀತುಪಡಿಸಲಿದೆ.


COMMERCIAL BREAK
SCROLL TO CONTINUE READING

ಮಿಥುನ ರಾಶಿ: ಮೇಷ ರಾಶಿಗೆ ಪ್ರವೇಶಿಸಿದ ನಂತರ ಸೂರ್ಯ(Surya Gochar 2022) ಮಿಥುನ ರಾಶಿಯ 11ನೇ ಮನೆಯಲ್ಲಿ ಸಾಗುತ್ತಾನೆ. ಇದು ಆದಾಯ ಮತ್ತು ಲಾಭದ ಸೂಚನೆಯಾಗಿರುತ್ತದೆ. ಇದರಿಂದ ಈ ರಾಶಿಚಕ್ರದ ಜನರ ಆದಾಯವನ್ನು ಹೆಚ್ಚಲಿದೆ. ಇವರು ಹಠಾತ್ ಹಣಕಾಸಿನ ಲಾಭವನ್ನು ಪಡೆಯುತ್ತಾರೆ. ವ್ಯಾಪಾರಸ್ಥರಿಗೆ ಲಾಭ ಹೆಚ್ಚಾಗಲಿದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರಿಗೆ ಲಾಭವಾಗಲಿದೆ. ಮಿಥುನ ರಾಶಿಯ ಅಧಿಪತಿ ಬುಧ ಮತ್ತು ಸೂರ್ಯ ಸೌಹಾರ್ದ ಗ್ರಹಗಳಾಗಿದ್ದು, ಈ ಸಂಕ್ರಮಣದ ವೇಳೆ ಸ್ಥಳೀಯರು ತಮ್ಮ ಅನೇಕ ಕೆಲಸಗಳನ್ನು ಮಾತಿನ ಆಧಾರದ ಮೇಲೆ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Chaitra Navratri 2022 : ಚಂದ್ರಘಂಟಾ ಪೂಜಾ ವಿಧಿ-ವಿಧಾನ, ಶುಭ ಮುಹೂರ್ತ, ಪ್ರಾಮುಖ್ಯತೆ ಇಲ್ಲಿದೆ


ಕರ್ಕ ರಾಶಿ: ಮೇಷ ರಾಶಿಯಲ್ಲಿ ಸೂರ್ಯನ ಸಂಚಾರ(Sun Transit Effects)ವು ಕರ್ಕ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡುತ್ತದೆ. ಇವರು ಹೊಸ ಉದ್ಯೋಗವನ್ನು ಪಡೆಯಬಹುದು. ಪ್ರಮೋಷನ್-ಇನ್ಕ್ರಿಮೆಂಟ್ ಸಹ ಸಾಧ್ಯವಾಗಬಹುದು. ವ್ಯಾಪಾರಸ್ಥರು ಲಾಭ ಪಡೆಯಬಹುದು. ಒಟ್ಟಿನಲ್ಲಿ ಈ ಸಮಯ ಅವರಿಗೆ ಎಲ್ಲ ರೀತಿಯಲ್ಲೂ ಅನುಕೂಲವಾಗಲಿದೆ. ಹೆಚ್ಚಿದ ಆದಾಯವು ಆರ್ಥಿಕ ಸ್ಥಿತಿಯನ್ನು ಬಲಪಡಿಸುತ್ತದೆ. ನೀವು ಹೊಸ ಕಾರು ಅಥವಾ ಮನೆಯನ್ನು ಸಹ ಖರೀದಿಸಬಹುದು.


ಮೀನ ರಾಶಿ: ಸೂರ್ಯನ ಸಂಚಾರ(Sun Transit)ವು ಮೀನ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಸಿಗುತ್ತದೆ. ಹೂಡಿಕೆಯೂ ಲಾಭದಾಯಕವಾಗಬಹುದು. ವ್ಯಾಪಾರಸ್ಥರಿಗೆ ಈ ಸಮಯ ತುಂಬಾ ಅನುಕೂಲಕರವಾಗಿರುತ್ತದೆ. ಒಟ್ಟಾರೆ ಈ ಸಮಯವು ನಿಮ್ಮ ಆರ್ಥಿಕ ಸ್ಥಿತಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು.


ಇದನ್ನೂ ಓದಿ: Astrology : ಉದ್ಯೋಗ ಮತ್ತು ಹಣ ಪಡೆಯಲು ಈ ಮಂತ್ರ ಪಠಿಸಿ, ನಿಮ್ಮ ಆಸೆಗಳು ಈಡೇರುತ್ತದೆ


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.