Sunday Remedies: ಖುಷಿಗಳಿಂದ ತುಂಬಿದ ಹಾಗೂ ಪ್ರಗತಿಪರ ಜೀವನಕ್ಕಾಗಿ ಭಾನುವಾರ ಈ ಉಪಾಯಗಳನ್ನು ಅನುಸರಿಸಲು ಮರೆಯಬೇಡಿ
Sunday Remedies For Happiness: ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಮನುಷ್ಯನ ಜೀವನದಲ್ಲಿ ಸೂರ್ಯನ ಕಾರಣ ಘನತೆ-ಗೌರವಗಳು ಬರುತ್ತವೆ. ಇದಲ್ಲದೆ ನೌಕರಿ ಹಾಗೂ ವ್ಯಾಪಾರದ ಅಭಿವೃದ್ದಿಯಲ್ಲಿಯೂ ಕೂಡ ಸೂರ್ಯ ಪ್ರಮುಖ ಪಾತ್ರ ವಹಿಸುತ್ತಾನೆ.
ನವದೆಹಲಿ: Sunday Remedies For Success - ಸಾಮಾನ್ಯವಾಗಿ ಸೂರ್ಯನನ್ನು ಆರಾಧಿಸಲು ಭಾನುವಾರ ಅತ್ಯುತ್ತಮ ದಿನ ಎಂದು ಪರಿಗಣಿಸಲಾಗಿದೆ. ಏಕೆಂದರೆ ಈ ದಿನವನ್ನು ಸೂರ್ಯ (Soorya Dev) ದೇವರಿಗೆ ಸಮರ್ಪಿಸಲಾಗಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜೀವನದಲ್ಲಿ ಘನತೆ ಮತ್ತು ಗೌರವವು ಸೂರ್ಯನಿಂದ ಪಡೆಯುತ್ತಾನೆ ಎನ್ನಲಾಗಿದೆ. ಇದಲ್ಲದೇ ಉದ್ಯೋಗ-ವ್ಯವಹಾರದ ಬೆಳವಣಿಗೆಯಲ್ಲಿ ಸೂರ್ಯನ ಪಾತ್ರವೂ ಪ್ರಮುಖವಾಗಿದೆ. ಜಾತಕದಲ್ಲಿ ಸೂರ್ಯನು ದುರ್ಬಲನಾಗಿದ್ದಾಗ ಜೀವನದಲ್ಲಿ ಪ್ರಗತಿಯು ನಿಲ್ಲುತ್ತದೆ. ಇದೇ ವೇಳೆ ಜೀವನದ ಸಂತೋಷವು ನಿಧಾನವಾಗಿ ಹೋಗಲಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಭಾನುವಾರದ ಪರಿಹಾರವು ಜೀವನದಲ್ಲಿ ಪ್ರಗತಿ ಮತ್ತು ಸಂತೋಷವನ್ನು ತರಲು ರಾಮಬಾಣವೆಂದು ಸಾಬೀತಾಗಬಹುದು.
ಶುದ್ಧ ತುಪ್ಪದ ದೀಪ ಉರಿಸಿ
ಭಾನುವಾರ ಸಂಜೆ, ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಶುದ್ಧ ಹಸುವಿನ ತುಪ್ಪದ ದೀಪವನ್ನು ಬೆಳಗಿ, ದೇವಿ ಲಕ್ಷ್ಮಿಯ ಆಗಮನವಾಗುತ್ತದೆ. ಇದಲ್ಲದೆ, ಭಾನುವಾರದಂದು ಶಿವ ದೇವಾಲಯದಲ್ಲಿ ಮಾತೆ ಗೌರಿ ಹಾಗೂ ಶಿವನಿಗೆ ರುದ್ರಾಕ್ಷಿಯನ್ನು ಅರ್ಪಿಸುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ. ಇದು ಜೀವನದಲ್ಲಿ ಸಂತೋಷವನ್ನು ತರುತ್ತದೆ.
ಶುಭ್ರ ಅಕ್ಕಿ, ಹಾಲು ಮತ್ತು ಬೆಲ್ಲ
ಭಾನುವಾರದಂದು ಶುಭ್ರ ಅಕ್ಕಿಯ ಅನ್ನವನ್ನು ಹಾಲು ಮತ್ತು ಬೆಲ್ಲದೊಂದಿಗೆ ಬೆರೆಸಿ ತಿನ್ನಬೇಕು. ಇದು ಜೀವನದಲ್ಲಿ ಪ್ರಗತಿಗೆ ಕಾರಣವಾಗುತ್ತದೆ. ಇದಲ್ಲದೆ, ಈ ದಿನ ಗೋಧಿ ಮತ್ತು ಬೆಲ್ಲವನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಅಗತ್ಯವಿರುವವರಿಗೆ ದಾನ ಮಾಡಬೇಕು.
ತುಳಸಿಯ ಪ್ರದಕ್ಷಿಣೆ
ಭಾನುವಾರದಂದು ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ಮಂತ್ರವನ್ನು ಪಠಿಸುತ್ತಾ ತುಳಸಿ ಗಿಡಕ್ಕೆ 11 ಬಾರಿ ಪ್ರದಕ್ಷಿಣೆ ಹಾಕಿ. ಹಾಗೆಯೇ ಪ್ರದಕ್ಷಿಣೆ ಮಾಡುವಾಗ ನೀರನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಲಭಿಸುತ್ತದೆ. ಜೊತೆಗೆ ಹಣದ ಸಮಸ್ಯೆಯೂ ನಿವಾರಣೆಯಾಗುತ್ತದೆ.
ಇದನ್ನೂ ಓದಿ-Vastu Tips - ನಿಮ್ಮ ಮನೆಯಲ್ಲಿಯೂ ಇರಲಿ ಈ ನಾಲ್ಕು ಸಸಿಗಳು, ಹಣಕಾಸಿನ ಮುಗ್ಗಟ್ಟು ದೂರಾಗುತ್ತದೆ
ಆದಿತ್ಯ ಹೃದಯ ಮೂಲ ಸ್ತೋತ್ರ
ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಗಾಗಿ ಭಾನುವಾರದಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಬೇಕು. ಭಾನುವಾರದಂದು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಸಿಹಿತಿಂಡಿ ಮತ್ತು ನೀರು ಕುಡಿಯುವುದು ಒಳ್ಳೆಯದು ಎಂದು ನಂಬಲಾಗಿದೆ.
ಇದನ್ನೂ ಓದಿ-30 ವರ್ಷಗಳ ನಂತರ ಶನಿ ಬದಲಾವಣೆ: ಈ ರಾಶಿಯವರಿಗೆ ಅದೃಷ್ಟ, ಈ 2 ರಾಶಿಯವರಿಗೆ ಅಪಾಯ
(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-ಮಧುಮೇಹದಲ್ಲಿ ಕಡಲೆಕಾಯಿ ಸೇವನೆ: ಎಷ್ಟು ಪ್ರಯೋಜನಕಾರಿ ಮತ್ತು ಎಷ್ಟು ಹಾನಿಕಾರಕ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.