Weight lose : ಮೈ ಕೈ ಪೂರ್ತಿ ಸಣ್ಣಗಿದ್ದು ಹೊಟ್ಟೆ ಭಾಗದಲ್ಲಿ ಮಾತ್ರ ಕೊಬ್ಬು ಸೇರಿಕೊಂಡಿದೆಯೇ? ತಕ್ಷಣದಿಂದಲೇ ಈ ಪಾನೀಯ ಸೇವಿಸಿ !
Fat reducing easy tips : ವ್ಯಾಯಾಮದ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
Fat burning Tips : ಇತ್ತಿಚೀನ ದಿನಗಳಲ್ಲಿ ದೇಹ ತೂಕ ಹೆಚ್ಚುತ್ತಿದೆ ಎನ್ನುವುದೇ ಬಹಳಷ್ಟು ಮಂದಿಯ ಸಮಸ್ಯೆ. ದೇಹ ತೂಕ ಇಳಿಸಿಕೊಳ್ಳಲು ವ್ಯಾಯಾಮ, ವಾಕಿಂಗ್ ಹೀಗೆ ಏನೇ ಮಾಡಿದರೂ ಕೆಲವೊಮ್ಮೆ ಏನೂ ಪ್ರಯೋಜನವಾಗುವುದಿಲ್ಲ. ಒಂದು ವೇಳೆ ನೀವು ಸತತ ವ್ಯಾಯಾಮ, ವಾಕಿಂಗ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ದೇಹ ದಂಡಿಸಿ ದೇಹದ ಉಳಿದ ಭಾಗದ ಕೊಬ್ಬು ಕರಗಿಸಬಹುದು. ಆದರೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಹೀಗಿರುವಾಗ ವ್ಯಾಯಾಮದ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ದೇಹದ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.
ಹೊಟ್ಟೆಯ ಕೊಬನ್ನು ಕರಗಿಸಬೇಕೆ? :
ಅನೇಕ ಜನರಲ್ಲಿ ದೇಹದ ಇತರ ಭಾಗಗಳು ತೆಳ್ಳಗೆ ಇರುತ್ತವೆ. ಆದರೆ, ಹೊಟ್ಟೆ ಮತ್ತು ಸೊಂಟದ ಭಾಗ ಮಾತ್ರ ದಪ್ಪಗಿರುತ್ತದೆ. ಅನಾರೋಗ್ಯಕರ ಆಹಾರ ಸೇವನೆ ಕೂಡಾ ಇದಕ್ಕೆ ಕಾರಣ. ಇನ್ಸ್ಟಂಟ್ ಆಹಾರ ಸೇವನೆಯಿಂದ ಹೊಟ್ಟೆಯ ಭಾಗ ದಪ್ಪಾಗಾಗಲು ಆರಂಭವಾಗುತ್ತದೆ. ಒಮ್ಮೆ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸಂಗ್ರಹವಾದರೆ ಅದನ್ನು ಕಳೆದುಕೊಳ್ಳುವುದು ಅಷ್ಟು ಸುಲಭವಲ್ಲ.
ಇಲ್ಲಿ ಹೇಳಲಾದ ಕೆಲವು ಮನೆಮದ್ದುಗಳು ಹೊಟ್ಟೆಯಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ನೇರವಾಗಿ ಹೊಟ್ಟೆಯ ಭಾಗದ ಕೊಬ್ಬನ್ನು ಕರಗಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇವುಗಳನ್ನು ಬಳಸುವುದರಿಂದ ಖಂಡಿತವಾಗಿಯೂ ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬನ್ನು ಕಡಿಮೆ ಮಾಡಬಹುದು.
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮನೆಮದ್ದುಗಳು:
ನೆಲ್ಲಿಕಾಯಿ ರಸ:
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ನೆಲ್ಲಿಕಾಯಿ ರಸವು ಪರಿಣಾಮಕಾರಿಯಾಗಿದೆ. ನೆಲ್ಲಿಕಾಯಿಯಲ್ಲಿ ಫೈಬರ್ ಅಂಶ ಹೆಚ್ಚಿನ ಪ್ರಮಾ ಣದಲ್ಲಿ ಇರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ನೆಲ್ಲಿಕಾಯಿ ಜ್ಯೂಸ್ ಸೇವನೆ ಮೂಲಕ ಹೊಟ್ಟೆಯ ಕೊಬ್ಬನ್ನು ಬಹಳ ಬೇಗನೆ ಕಡಿಮೆ ಮಾಡಿಕೊಳ್ಳಬಹುದು.
ಮೆಂತ್ಯೆ :
ಫೈಬರ್ನಲ್ಲಿ ಸಮೃದ್ಧವಾಗಿರುವ ಮೆಂತ್ಯೆ ಕೂಡಾ ತೂಕ ಇಳಿಸಿಕೊಳ್ಳುವ ವಿಧಾನದಲ್ಲಿ ಪ್ರಮುಖ ಸ್ಥಾನ ಪಡೆಯುತ್ತದೆ. ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಬಿಸಿ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಹೀಗೆ ಪ್ರತಿದಿನ ಈ ನೀರನ್ನು ಕುಡಿಯುತ್ತಾ ಬಂದರೆ ಹೊಟ್ಟೆ ಭಾಗದ ಕೊಬ್ಬು ಸುಲಭವಾಗಿ ಕರಗುವುದು. ಅಲ್ಲದೆ ಈ ನೀರು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಕೂಡಾ ಸಹಾಯ ಮಾಡುತ್ತದೆ.
ನಿಂಬೆ ರಸ :
ನಿಂಬೆ ರಸ ಕೂಡಾ ಉಬ್ಬಿರುವ ಹೊಟ್ಟೆಯನ್ನು ಚಪ್ಪಟೆ ಮಾಡಿಬಿಡುತ್ತದೆ. ನಿಂಬೆ ರಸವು ಚಯಾಪಚಯವನ್ನು ಸುಧಾರಿಸಿ, ಕೊಬ್ಬನ್ನು ಕರಗಿಸುತ್ತದೆ. ಅದರಲ್ಲೂ ಹೊಟ್ಟೆಯ ಭಾಗದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ತ್ವರಿತ ಪರಿಣಾಮವನ್ನು ಬೀರುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯಬೇಕು. ಹೀಗೆ ಮಾಡುತ್ತಾ ಬಂದಲ್ಲಿ ಹೊಟ್ಟೆ, ಸೊಂಟದ ಭಾಗದ ಕೊಬ್ಬು ಸಂಪೂರ್ಣವಾಗಿ ಕರಗುತ್ತದೆ.
ಓಮ ಕಾಳಿನ ನೀರು :
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಓಮ ಕಾಳಿನ ನೀರನ್ನು ಕುಡಿಯುತ್ತಿದ್ದರೆ, ಹೊಟ್ಟೆಯ ಗಾತ್ರದಲ್ಲಿ ವ್ಯತ್ಯಾಸ ಕಂಡು ಬರುವುದು ಗ್ಯಾರಂಟಿ. ಒಂದು ಚಮಚ ಓಮ ಕಾಳನ್ನು 3 ಗ್ಲಾಸ್ ನೀರಿನಲ್ಲಿ ಹಾಕಿ ಕುದಿಸಿ. ಈ ನೀರು 3 ಲೋಟದಿಂದ 2 ಲೋಟಕ್ಕೆ ಇಳಿಯುವವರೆಗೆ ಕುದಿಸಬೇಕು. ರಾತ್ರಿ ಊಟವಾದ ಅರ್ಧ ಗಂಟೆಯ ನಂತರ ಈ ನೀರನ್ನು ಕುಡಿಯಬೇಕು. ಹಾಗೆಯೇ ಮರುದಿನ ಬೆಳಿಗ್ಗೆ ಕೂಡಾ ಈ ನೀರನ್ನು ಸೇವಿಸೇಕು. ಹೀಗೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಪರಿಣಾಮ ಕಂಡು ಬರುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.