ನವದೆಹಲಿ: ವೈದಿಕ ಜ್ಯೋತಿಷ್ಯದ ಪ್ರಕಾರ ಸೂರ್ಯನನ್ನು ಎಲ್ಲಾ 12 ಗ್ರಹಗಳ ರಾಜನೆಂದು ಪರಿಗಣಿಸಲಾಗುತ್ತದೆ. ಸೂರ್ಯನು ಪ್ರತಿ ತಿಂಗಳು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮಾಘ ಮಾಸದಲ್ಲಿ ಸೂರ್ಯನು ಜನವರಿ 14ರಂದು ಮಕರ ರಾಶಿ ಪ್ರವೇಶಿಸುತ್ತಾನೆ. ಕೆಲವು ರಾಶಿಗಳ ಸ್ಥಳೀಯರಿಗೆ ಈ ಬಾರಿ ಈ ಸಂಕ್ರಮವು ತುಂಬಾ ಮಂಗಳಕರ ಮತ್ತು ಫಲಪ್ರದವಾಗಲಿದೆ. ಇಂದು ರಾತ್ರಿ 8:22ಕ್ಕೆ ಸೂರ್ಯನು ಶನಿದೇವನ ಚಿಹ್ನೆ ಮಕರ ರಾಶಿಯನ್ನು ಪ್ರವೇಶಿಸಲಿದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸೂರ್ಯನನ್ನು ಸಾಧನೆ, ಆತ್ಮಗೌರವ, ಘನತೆ, ಅಹಂಕಾರ ಮತ್ತು ವೃತ್ತಿಯ ಅಂಶವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅನೇಕ ರಾಶಿಗಳ ಜನರು ಸೂರ್ಯನ ಸಂಚಾರದಿಂದ ವಿಶೇಷ ಲಾಭವನ್ನು ಪಡೆಯಲಿದ್ದಾರೆ. ಈ ಅವಧಿಯಲ್ಲಿ ಯಾವ ರಾಶಿಯವರಿಗೆ ಲಾಟರಿ ಹೊಡೆಯಲಿದೆ ಎಂದು ತಿಳಿಯಿರಿ.


ಇದನ್ನೂ ಓದಿ: Vastu Tips : ಅಪ್ಪಿತಪ್ಪಿಯೂ ಈ ದಿಕ್ಕಿನಲ್ಲಿ ಔಷಧಿಗಳನ್ನು ಇಡಬೇಡಿ! ರೋಗಗಳು ಮನೆ ಮಾಡುತ್ತವೆ


ಮೇಷ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ 5ನೇ ಮನೆಯ ಅಧಿಪತಿ ಮತ್ತು ಸೂರ್ಯನು 10ನೇ ಮನೆಯಲ್ಲಿ ಕುಳಿತುಕೊಳ್ಳಲಿದ್ದಾರೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ವೃತ್ತಿಪರ ಜೀವನದಲ್ಲಿ ಧನಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ಕೆಲಸದ ಸ್ಥಳದಲ್ಲಿ ಮಾಡಿದ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳು ಕಂಡುಬರುತ್ತವೆ. ಉದ್ಯೋಗವನ್ನು ಹುಡುಕುತ್ತಿರುವ ಜನರು ಈ ಅವಧಿಯಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೂ ಈ ಸಮಯ ಅನುಕೂಲಕರವಾಗಲಿದೆ. ಪರೀಕ್ಷೆಯ ಫಲಿತಾಂಶವು ಮಂಗಳಕರವಾಗಿರುತ್ತದೆ.


ಕನ್ಯಾ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕನ್ಯಾ ರಾಶಿಯವರಿಗೆ ಸೂರ್ಯನು 12ನೇ ಮನೆಯ ಅಧಿಪತಿ. ಮತ್ತೊಂದೆಡೆ ಈ ರಾಶಿಯ ಸ್ಥಳೀಯರ ಸಂಕ್ರಮಣ ಜಾತಕದಲ್ಲಿ ಸೂರ್ಯನ 5ನೇ ಮನೆಯಲ್ಲಿ ಸಾಗುತ್ತಾನೆ. ಈ ಅವಧಿಯಲ್ಲಿ ನಿಮ್ಮ ಸಾಮಾಜಿಕ ಸ್ಥಾನಮಾನವು ಹೆಚ್ಚಾಗುತ್ತದೆ. ಆರ್ಥಿಕ ಲಾಭ ದೊರೆಯಲಿದೆ. ಇದಲ್ಲದೆ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಾರೆ. ವಿದೇಶದಲ್ಲಿ ಕಲಿಯಲು ಯೋಜಿಸುತ್ತಿರುವ ವಿದ್ಯಾರ್ಥಿಗಳು ಸೂರ್ಯ ದೇವರ ಆಶೀರ್ವಾದದಿಂದ ಯಶಸ್ಸನ್ನು ಪಡೆಯುತ್ತಾರೆ. 


ಇದನ್ನೂ ಓದಿ: Today Horoscope 14-01-2023: ಮಕರ ಸಂಕ್ರಾಂತಿ ಶುಭದಿನದಂದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ…!


ಧನು ರಾಶಿ: ಈ ರಾಶಿಯ ಸ್ಥಳೀಯರ 9ನೇ ಮನೆಗೆ ಸೂರ್ಯನು ಅಧಿಪತಿ. ಈ ರಾಶಿಯ ಸಂಕ್ರಮಣದ ಜಾತಕದ 2ನೇ ಮನೆಯಲ್ಲಿ ಸೂರ್ಯನು ಸಾಗಲಿದ್ದಾನೆ. ಈ ಅವಧಿಯಲ್ಲಿ ನೀವು ನಿಮ್ಮ ಕುಟುಂಬದೊಂದಿಗೆ ತೀರ್ಥಯಾತ್ರೆಗೆ ಹೋಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಇದಲ್ಲದೆ ನೀವು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಕುಟುಂಬದ ಬೆಂಬಲ ಸಿಗುತ್ತದೆ.


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.