ಸೂರ್ಯ ಗೋಚರ 2023: ಜ್ಯೋತಿಷ್ಯದ ಪ್ರಕಾರ ಗ್ರಹಗಳ ರಾಜ ಸೂರ್ಯನು ಪ್ರತಿ ತಿಂಗಳು ತನ್ನ ರಾಶಿ ಬದಲಾಯಿಸುತ್ತಾನೆ. ಸೂರ್ಯನು ಒಂದು ರಾಶಿಯಲ್ಲಿ 1 ತಿಂಗಳು ಇರುತ್ತಾನೆ. ಸೂರ್ಯ ಸಂಕ್ರಮಿಸಿದಾಗಲೆಲ್ಲ ಸೂರ್ಯ ಸಂಕ್ರಮಣವೆಂದು ಹೇಳುತ್ತಾರೆ. ಈ ತಿಂಗಳು ಮಾರ್ಚ್ 15ರಂದು ಸೂರ್ಯನು ಮೀನ ರಾಶಿಗೆ ಸಂಚರಿಸುತ್ತಾನೆ, ಇದನ್ನು ಮೀನ ಸಂಕ್ರಮಣವೆಂದು ಕರೆಯಲಾಗುತ್ತದೆ. ಸೂರ್ಯ ರಾಶಿ ಬದಲಾಯಿಸುವುದು ಮತ್ತು ಮೀನ ರಾಶಿ ಪ್ರವೇಶಿಸುವುದರಿಂದ ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಂದಿಗೆ ಮೀನ ರಾಶಿಯಲ್ಲಿ ಸೂರ್ಯ ಮತ್ತು ಗುರುಗಳ ಸಂಯೋಗವೂ ಇರುತ್ತದೆ. ಇದರ ಪರಿಣಾಮವು ಎಲ್ಲಾ ರಾಶಿಯ ಜನರ ಮೇಲೂ ಇರುತ್ತದೆ. ಮಾರ್ಚ್ 15ರಂದು ಸಂಭವಿಸಲಿರುವ ಸೂರ್ಯನ ಸಂಚಾರವು ಕೆಲವು ರಾಶಿಗಳಿಗೆ ಮಂಗಳಕರವಾಗಿರುತ್ತದೆ.


COMMERCIAL BREAK
SCROLL TO CONTINUE READING

ಸೂರ್ಯನ ಸಂಚಾರವು ಈ ರಾಶಿಯವರ ಅದೃಷ್ಟ ಬೆಳಗಲಿದೆ


ವೃಷಭ ರಾಶಿ: ವೃಷಭ ರಾಶಿಯವರಿಗೆ ಸೂರ್ಯನ ಸಂಚಾರವು ತುಂಬಾ ಶುಭಕರವಾಗಿರುತ್ತದೆ. ಈ ಜನರ ಆದಾಯದಲ್ಲಿ ಹೆಚ್ಚಳ ಇರುತ್ತದೆ. ಹೂಡಿಕೆಯಿಂದ ಲಾಭವಾಗಲಿದೆ. ವೃತ್ತಿಯಲ್ಲಿ ಉನ್ನತಿ ಕಂಡುಬರಲಿದೆ. ಬಡ್ತಿ-ಹೆಚ್ಚಳ ಸಿಗಲಿದೆ. ಅಪಾಯಕಾರಿ ಹೂಡಿಕೆ ಕೂಡ ಉತ್ತಮ ಆದಾಯ ನೀಡುತ್ತದೆ. ಆರ್ಥಿಕ ಪರಿಸ್ಥಿತಿಯಲ್ಲಿ ಬಲವಿರುತ್ತದೆ.


ಇದನ್ನೂ ಓದಿ: Saturn Transit 2023: ಶತಭಿಷಾ ನಕ್ಷತ್ರದಲ್ಲಿ ಶನಿಯ ಗೋಚರ, 7 ತಿಂಗಳು ಈ 5 ರಾಶಿಗಳ ಜನರು ಮುಟ್ಟಿದ್ದೆಲ್ಲ ಚಿನ್ನ!


ಮಿಥುನ ರಾಶಿ: ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಅನುಕೂಲಕರ ಫಲಿತಾಂಶ ನೀಡುತ್ತದೆ. ಹೊಸ ಉದ್ಯೋಗಕ್ಕಾಗಿ ಹುಡುಕಾಟವು ಪೂರ್ಣಗೊಳ್ಳುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಬಡ್ತಿ-ಮುಂಬಡ್ತಿ ದೊರೆಯಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.


ಕರ್ಕಾಟಕ ರಾಶಿ: ಸೂರ್ಯನ ರಾಶಿಯ ಬದಲಾವಣೆ, ಸೂರ್ಯ ಮತ್ತು ಗುರುಗಳ ಸಂಯೋಗವು ಕರ್ಕಾಟಕ ರಾಶಿಯವರಿಗೆ ಸಾಕಷ್ಟು ಪ್ರಯೋಜನ ನೀಡುತ್ತದೆ. ಸ್ಥಗಿತಗೊಂಡಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ನೀವು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯುತ್ತೀರಿ, ಇದರಿಂದ ನೀವು ಯಶಸ್ಸನ್ನು ಗಳಿಸುವಿರಿ. ವೃತ್ತಿಜೀವನಕ್ಕೆ ಇದು ಉತ್ತಮ ಸಮಯವಾಗಿರುತ್ತದೆ. ನೀವು ಪ್ರವಾಸಕ್ಕೆ ಹೋಗಬಹುದು. ಲಾಭದ ಬಲವಾದ ಅವಕಾಶಗಳಿವೆ.


ಇದನ್ನೂ ಓದಿ: Shukra Gochar 2023: ಈ ರಾಶಿಯವರ ಮೇಲೆ ಬಿದ್ದಿದೆ ಶುಕ್ರನ ಕಣ್ಣು: ಭಾರೀ ಅಪರೂಪದ ಸರ್ಪೈಸ್ ಕಾದಿದೆ!


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.