ನವದೆಹಲಿ: ಗ್ರಹವು ತನ್ನ ಚಲನೆಯನ್ನು ಬದಲಾಯಿಸಿದಾಗ ಖಂಡಿತ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಎಲ್ಲಾ 12 ರಾಶಿಗಳು ಗ್ರಹಗಳ ಸಂಚಾರದಿಂದ ಪ್ರಭಾವಿತವಾಗಿರುತ್ತವೆ. ಪ್ರತಿಯೊಂದು ಗ್ರಹವು ಮತ್ತೊಂದು ರಾಶಿಯಲ್ಲಿ ಸಾಗುವಾಗ ನಿಗದಿತ ಸಮಯ ಹೊಂದಿರುತ್ತದೆ. ಗ್ರಹಗಳ ರಾಜನಾದ ಭಗವಾನ್ ಸೂರ್ಯ ಪ್ರತಿ ತಿಂಗಳು ತನ್ನ ರಾಶಿ ಬದಲಾಯಿಸುತ್ತಾನೆ. ಮಾರ್ಚ್ 15ರಂದು ಸೂರ್ಯನು ಮೀನ ರಾಶಿಯಲ್ಲಿ ಸಾಗುತ್ತಾನೆ. ಇದನ್ನು ಮೀನ ಸಂಕ್ರಮಣವೆಂದು ಕರೆಯಲಾಗುವುದು. ಸೂರ್ಯನ ಈ ರಾಶಿ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಮೀನ ರಾಶಿಯಲ್ಲಿ ಗುರು, ದೇವತೆಗಳ ಗುರು ಮತ್ತು ಸೂರ್ಯ ದೇವರ ಸಂಯೋಜನೆ ಇರುತ್ತದೆ. ಈ ಮೈತ್ರಿಯಿಂದ ಯಾವ ರಾಶಿಗಳು ಪ್ರಯೋಜನ ಪಡೆಯುತ್ತವೆ ಎಂಬುದನ್ನು ತಿಳಿಯಿರಿ.  


COMMERCIAL BREAK
SCROLL TO CONTINUE READING

ವೃಷಭ ರಾಶಿ: ಸೂರ್ಯನ ಈ ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳ ಶುಭ ಫಲವನ್ನು ನೀಡುತ್ತದೆ. ಈ ರಾಶಿಯ ಜನರ ಆರ್ಥಿಕ ಸ್ಥಿತಿಯು ತುಂಬಾ ಬಲವಾಗಿರುತ್ತದೆ. ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಇದರೊಂದಿಗೆ ಬಡ್ತಿ ಅಥವಾ ಇನ್ಕ್ರಿಮೆಂಟ್ ಸಹ ಕಾಣಬಹುದು. ಈ ಸಂಚಾರವು ಉದ್ಯಮಿಗಳಿಗೂ ಪ್ರಯೋಜನವನ್ನು ನೀಡುತ್ತದೆ. ಅವರು ದೊಡ್ಡ ಒಪ್ಪಂದ ಪಡೆಯಬಹುದು. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗುತ್ತದೆ.


ಇದನ್ನೂ ಓದಿ: Vastu Tips : ದೇವರ ಕೋಣೆಯಲ್ಲಿ ಈ ವಸ್ತುಗಳಿದ್ದರೆ ಸಿಗುವುದೇ ಇಲ್ಲ ಪೂಜಾಫಲ


ಮಿಥುನ ರಾಶಿ: ಮಿಥುನ ರಾಶಿಯವರಿಗೆ ಸೂರ್ಯನ ಸಂಚಾರವು ಫಲಕಾರಿಯಾಗಲಿದೆ. ಅವರು ಪ್ರತಿಯೊಂದು ಕೆಲಸದಲ್ಲಿ ಅದೃಷ್ಟದ ಬೆಂಬಲ ಪಡೆಯುತ್ತಾರೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಅವರ ಪಾದಗಳನ್ನು ಚುಂಬಿಸುತ್ತದೆ. ಮನೆಯಲ್ಲಿ ಶುಭ ಕಾರ್ಯಕ್ರಮ ಆಯೋಜಿಸಬಹುದು. ವಿದೇಶ ಪ್ರವಾಸದ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಲಾಭ ಇರುತ್ತದೆ.


ಕರ್ಕಾಟಕ ರಾಶಿ: ಗುರು ಮತ್ತು ಸೂರ್ಯನ ಸಂಯೋಜನೆ ಮತ್ತು ಸೂರ್ಯನ ರಾಶಿಯಲ್ಲಿ ಬದಲಾವಣೆಯಿಂದ ಕರ್ಕಾಟಕ ರಾಶಿಯವರಿಗೆ ಅದೃಷ್ಟವೂ ತೆರೆದುಕೊಳ್ಳುತ್ತದೆ. ಈ ಸಂಚಾರದಿಂದ ಅವರು ಸಾಕಷ್ಟು ಪ್ರಯೋಜನ ಪಡೆಯುತ್ತಾರೆ. ಸೂರ್ಯನ ರಾಶಿ ಬದಲಾವಣೆಯಿಂದ ಕರ್ಕಾಟಕ ರಾಶಿಯವರು ಬಹಳಷ್ಟು ಹಣ ಪಡೆಯಬಹುದು. ಅವರ ಆದಾಯ ಹೆಚ್ಚಾಗುತ್ತದೆ. ಈ ಸಂಚಾರವು ನಿಮಗೆ ಬಹಳ ಮಂಗಳಕರವಾಗಿರುವುದರಲ್ಲಿ ಸಂದೇಹವಿಲ್ಲ. ಹೂಡಿಕೆಯಿಂದ ಲಾಭ ಪಡೆಯುವುದರ ಜೊತೆಗೆ ನೀವು ಹೊಸ ಉದ್ಯೋಗಾವಕಾಶಗಳನ್ನು ಸಹ ಪಡೆಯುತ್ತೀರಿ.


ಇದನ್ನೂ ಓದಿ: Mangal Gochar 2023 : ಮುಂದಿನ 69 ದಿನಗಳವರೆಗೆ ಈ 5 ರಾಶಿಯವರಿಗೆ ಒಲಿಯಲಿದೆ ಶ್ರೀಮಂತಿಕೆ! 


(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.