Sun Transit 2022: ಜೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಒಂದು ಗ್ರಹದ ಪರಿಚಲನೆಯಲ್ಲಿನ ಬದಲಾವಣೆ ಎಲ್ಲಾ 12 ರಾಶಿಗಳ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಈ ಪರಿಣಾಮಗಳು ಶುಭ ಹಾಗೂ ಅಶುಭ ಪರಿಣಾಮ ಎರಡನ್ನೂ ಕೂಡ ಒಳಗೊಂಡಿವೆ. ಜೂನ್ 15 ರಂದು ಸೂರ್ಯನ ಮಿಥುನ ರಾಶಿ ಪ್ರವೇಶ ಸಂಭವಿಸಿದೆ. ಈ ಗೋಚರ ಕೆಲ ರಾಶಿಗಳ ಪಾಲಿಗೆ ಶುಭ ಪರಿಣಾಮಗಳನ್ನು ನೀಡಿದರೆ ಕೆಲ ರಾಶಿಗಳ ಪಾಲಿಗೆ ಅಶುಭ ಸಾಬೀತಾಗಲಿದೆ. ಸಾಮಾನ್ಯವಾಗಿ ಸೂರ್ಯ ಪ್ರತಿ ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಹೀಗಾಗಿ ಮುಂದಿನ ಒಂದು ತಿಂಗಳ ಅವಧಿಗೆ ಮೂರು ರಾಶಿಯ ಜಾತಕದವರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಯಾವ ರಾಶಿಯ ಜಾತಕದವರು ಎಚ್ಚರದಿಂದಿರಬೇಕು ನೋಡೋಣ ಬನ್ನಿ, 

COMMERCIAL BREAK
SCROLL TO CONTINUE READING

ಮೇಷ ರಾಶಿ: ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಈ ರಾಶಿ ಪರಿವರ್ತನೆಯ ಪ್ರಭಾವ ಮೇಷ ರಾಶಿಯ ಜಾತಕದವರ ಮೇಲೆ ಸ್ಪಷ್ಟವಾಗಿ ಗೋಚರಿಸಲಿದೆ. ಈ ಅವಧಿಯಲ್ಲಿ ಈ ಜಾತಕದವರು ಎಚ್ಚರದಿಂದ ಇರಬೇಕಾದ ಅವಶ್ಯಕತೆ ಇದೆ. ಕೋಪದ ಮೇಲೆ ನಿಯಂತ್ರಣವಿರಲಿ. ನಿಮ್ಮ ಕೋಪ ನಿಮ್ಮ ಸಂಬಂಧದಲ್ಲಿ ಹುಳಿ ಹಿಂಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲ ಮನೆಯ ಸದಸ್ಯರ ಆರೋಗ್ಯದ ಬಗ್ಗೆಯೂ ಕೂಡ ಈ ಜಾತಕದವರು ವಿಶೇಷ ಕಾಳಜಿವಹಿಸಬೇಕಾಗಲಿದೆ. 


ವೃಷಭ ರಾಶಿ: ಸೂರ್ಯನ ಈ ಮಿಥುನ ಗೊಚಾರದ ಪ್ರಭಾವ ವೃಷಭ ರಾಶಿಯ ಜಾತಕದವರ ಮೇಲೂ ಕೂಡ ಸ್ಪಷ್ಟ ಗೋಚರಿಸಲಿದೆ. ತಂದೆ-ತಾಯಿಯರ ಆರೋಗ್ಯದ ವಿಶೇಷ ಕಾಳಜಿವಹಿಸಿ. ಮನೆಯಲ್ಲಿನ ವಾತಾವರಣ ಒತ್ತಡದಿಂದ ಕೂದಿರಲಿದೆ. ಹೀಗಿರುವಾಗ ಕುಟುಂಬ ಸದಸ್ಯರ ಜೊತೆಗಿರುವುದು ಉತ್ತಮ. ಸಂಪೂರ್ಣ ಕುಟುಂಬದ ಸಾಥ್ ಸಿಗುವಂತಹ ಕೆಲಸಗಳನ್ನು ಮಾಡಿ. ಸಂಬಂಧಗಳಲ್ಲಿ ಗಾಢತೆ ಹೆಚ್ಚಾಗಲಿದೆ.


ಧನು ರಾಶಿ: ಧನು ರಾಶಿಯ ಜಾತಕದವರಿ ಈ ಅವಧಿಯಲ್ಲಿ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ಇದು ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ವಾದ-ವಿವಾದಗಳಿಂದ ದೂರ ಉಳಿಯಿರಿ. ನಿಮ್ಮ ಮಾತಿನಿಂದ ತಪ್ಪು ತಿಳುವಳಿಕೆಗಳು ಮೂಡುವ ಸಾಧ್ಯತೆ ಇದೆ. ಹೀಗಾಗಿ ಮಾತನಾಡುವಾಗ ತುಂಬಾ ಯೋಚಿಸಿ ಮಾತನಾಡಿದರೆ ಒಳ್ಳೆಯದು, ಉತ್ತಮ ಎಂದರೆ, ಕಡಿಮೆ ಮಾತನಾಡುವುದು ಒಳ್ಳೆಯದು. 


ಇದನ್ನೂ ಓದಿ-ಹಸ್ತದಲ್ಲಿ ಈ ಚಿಹ್ನೆ ಇದ್ದರೆ ಜೀವನಪೂರ್ತಿ ನಡೆಸುತ್ತಾರೆ ಐಶಾರಾಮಿ ಜೀವನ


ಮಕರ ರಾಶಿ: ಮಕರ ರಾಶಿಯ ಜಾತಕದವರೂ ಕೂಡ ಈ ಅವಧಿಯಲ್ಲಿ ತುಂಬಾ ಎಚ್ಚರಿಕೆಯಿಂದ ಇರುವ ಅವಶ್ಯಕತೆ ಇದೆ. ಸೂರ್ಯ ಗೋಚರ ಈ ಅವಧಿಯಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡಚಣೆ ಉಂಟುಮಾಡಲಿದೆ. ಕಚೇರಿಯಲ್ಲಿ ನಿಮ್ಮ ಶತ್ರುಗಳಿಂದ ದೂರ ಉಳಿಯಿರಿ. ಅವರು ನಿಮ್ಮ ಕೆಲಸ ಕಾರ್ಯಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ ನಿಮ್ಮ ಕಾರ್ಯವನ್ನು ನೀವೇ ಪೂರ್ಣಗೊಳಿಸಿ. ಇತರರಿಗೆ ವಹಿಸದೆ ಇರಲು ಸಲಹೆ ನೀಡಲಾಗುತ್ತದೆ.


ಇದನ್ನೂ ಓದಿ-ಸರ್ವಾರ್ಥ ಸಿದ್ಧಿಗೆ ಸಂಕಷ್ಟ ಚತುರ್ಥಿಯಂದು ಈ ರೀತಿ ಪೂಜೆ ಮಾಡಿ


ಮೀನ ರಾಶಿ: ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯ ಜನರ ಜೀವನದ ಮೇಲೆ ಈ ಸೂರ್ಯ ಗೋಚರ ಭಾರಿ ಪ್ರಭಾವ ಬೀರಲಿದೆ. ಕುಟುಂಬದಲ್ಲಿ ಯಾವುದೇ ರೀತಿಯ  ವಾದ ವಿವಾದಗಳಿಂದ ದೂರ ಉಳಿಯಿರಿ. ಕಚೇರಿ ಕೆಲಸಕ್ಕೆ ಹೋಗುವವರಿಗೆ ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆಗೆ ಇರಿಸು-ಮುರಿಸು ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಈ ಅವಧಿಯಲ್ಲಿ ಜಾಗ್ರತೆಯಿಂದ ಇರುವುದು ಒಳ್ಳೆಯದು. 


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.