ನವದೆಹಲಿ: Surya Grahan 2022: ಧರ್ಮ ಹಾಗೂ ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣವನ್ನು ಅಶುಭ ಎಂದು ಪರಿಗಣಿಸಲಾಗಿದೆ. ಏಕೆಂದರೆ ಸೂರ್ಯ ಗ್ರಹಣದ ಅವಧಿಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಸೂರ್ಯ-ಚಂದ್ರಗ್ರಹಣದ ಅವಧಿಯಲ್ಲಿ ಕೆಲ ಕೆಲಸಗಳನ್ನು ವರ್ಜಿತ ಎಂದು ಪರಿಗಣಿಸಲಾಗಿದೆ. ಏಪ್ರಿಲ್ 30ರಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದೆ. ಇದೊಂದು ಭಾಗಶಃ ಸೂರ್ಯಗ್ರಹಣವಾಗಿದ್ದು, ಇದು ಜನರ ಜೀವನದ ಮೇಲೆ ಪ್ರಭಾವ ಬೀರಲಿದೆ. ಸೂರ್ಯ ಗ್ರಹಣ-ಚಂದ್ರ ಗ್ರಹಣದ ಅವಧಿಯಲ್ಲಿ ಗರ್ಭಿಣಿ ಮಹಿಳೆಯರು ಕೆಲ ವಿಶೇಷ ಮುನ್ನೆಚ್ಚರಿಕೆಗಳನ್ನು ವಹಿಸಬೇಕು ಎಂದು ಹೇಳಲಾಗುತ್ತದೆ. 

COMMERCIAL BREAK
SCROLL TO CONTINUE READING

ಗರ್ಭಿಣಿ ಮಹಿಳೆಯರ ಮೇಲೆ ಸೂರ್ಯ ಗ್ರಹಣ ಕೆಟ್ಟ ಪರಿಣಾಮ ಬೀರುತ್ತದೆ
ಗರ್ಭಿಣಿ ಮಹಿಳೆಯರು ಗ್ರಹಣದ ಅವಧಿಯಲ್ಲಿ ಮನೆಯಿಂದ ಹೊರಗೆ ಹೋಗಬಾರದು ಎಂದು ಮನೆಯಲ್ಲಿ ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಏಕೆಂದರೆ ಇದು ಅವರ ಹುಟ್ಟುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಧರ್ಮ ಮತ್ತು ಜ್ಯೋತಿಷ್ಯದ ಜೊತೆಗೆ ವಿಜ್ಞಾನದಲ್ಲಿಯೂ ಕೂಡ ಇದರ ಹಿಂದಿನ ಕಾರಣಗಳನ್ನು ವಿವರಿಸಲಾಗಿದೆ. ವಾಸ್ತವವಾಗಿ, ಸೂರ್ಯಗ್ರಹಣವು ಒಂದು ಖಗೋಳ ಘಟನೆಯಾಗಿದೆ ಮತ್ತು ಗ್ರಹಣ ಸಂಭವಿಸಿದಾಗ ಅನೇಕ ತರಂಗಗಳು ಹೊರಹೊಮ್ಮುತ್ತವೆ, ಈ ತರಂಗಗಳು ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತವೆ ಎನ್ನಲಾಗಿದೆ. ಈ ಹಾನಿಕಾರಕ ತರಂಗಗಳು ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತವೆ, ಅದರಲ್ಲಿಯೂ ವಿಶೇಷವಾಗಿ ಹುಟ್ಟುವ ಮಗುವಿನ ಮೇಲೆ ದೊಡ್ಡ ಪರಿಣಾಮವನ್ನೇ ಬೀರುತ್ತದೆ. ಇದಲ್ಲದೆ, ಗ್ರಹಣದ ಸಮಯದಲ್ಲಿ, ಬ್ರಹ್ಮಾಂಡದಲ್ಲಿ ನಕಾರಾತ್ಮಕ ಶಕ್ತಿಗಳ ಸಂಚಾರ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ, ಈ ನಕಾರಾತ್ಮಕ ಶಕ್ತಿಗಳು ಗರ್ಭಿಣಿ ಮಹಿಳೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತವೆ ಎನ್ನಲಾಗಿದೆ. 


ಇದನ್ನೂ ಓದಿ-Akshaya Tritiya 2022: ಅಕ್ಷಯ ತೃತಿಯಾ ದಿನ ಈ ತಪ್ಪುಗಳನ್ನು ಮಾಡಬೇಡಿ, ಜೀವನದಲ್ಲಿ ಸುಖ ಸಮೃದ್ಧಿ ಹಾಳಾಗುತ್ತದೆ

ಗರ್ಭಿಣಿ ಮಹಿಳೆಯರು ಈ ಸಂಗತಿಗಳನ್ನು ನೆನಪಿನಲ್ಲಿಡಬೇಕು
>> ಗ್ರಹಣದ ಸಮಯದಲ್ಲಿ ಸಂಭವಿಸುವ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ತಪ್ಪಿಸಲು, ಗರ್ಭಿಣಿಯರು ಗ್ರಹಣ ಅವಧಿಯಲ್ಲಿ ಮನೆಯೊಳಗಿರುವ ಶುಚಿಯಾಗಿರುವ ಜಾಗದಲ್ಲಿ ಕುಳಿತುಕೊಂಡು ಮಂತ್ರ ಜಪಿಸಬೇಕು. ಇದರಿಂದ ಅವರ ಸುತ್ತಮುತ್ತ ಸಕಾರಾತ್ಮಕತೆಯ ಸಂಚಾರ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ಅದರಲ್ಲಿಯೂ ವಿಶೇಷವಾಗಿ ಓಂ ಜಪ ಮಾಡುವುದು ಉತ್ತಮ.
>> ಸೂರ್ಯಗ್ರಹಣದ ಅವ್ಬಧಿಯಲ್ಲಿ ಯಾವುದೇ ಹರಿತವಾದ ಅಥವಾ ಚೂಪಾದ ವಸ್ತುವಿನ ಬಳಕೆಯಿಂದ ದೂರ ಉಳಿಯಿರಿ. ಇದು ಹುಟ್ಟುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದಷ್ಟು ಗ್ರಹಣ ಕಾಲದಲ್ಲಿ ಏನನ್ನೂ ಸೇವಿಸಬೇಡಿ. ಸೇವಿಸುವುದು ಮತ್ತು ಕುಡಿಯುವುದು ಅನಿವಾರ್ಯವಾದಲ್ಲಿ, ಆಹಾರ ಪದಾರ್ಥಗಳಲ್ಲಿ ಹಾಗೂ ನೀರಿನಲ್ಲಿ ತುಳಸಿ ದಳಗಳನ್ನು ಹಾಕಿ. 


ಇದನ್ನೂ ಓದಿ-ಇಂಗು ಆರೋಗ್ಯದ ಸಂಪತ್ತು, ಈ ಸಮಸ್ಯೆಗಳಿಗೆ ಸಿಗುತ್ತೆ ಪರಿಹಾರ



(Desclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ