Surya Grahan 2022 effect on Zodiac Sign:30 ಏಪ್ರಿಲ್ 2022, ಶನಿವಾರ ಮಧ್ಯರಾತ್ರಿ ಸಂಭವಿಸುತ್ತಿರುವ ಸೂರ್ಯಗ್ರಹಣವು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಗ್ರಹಣವು ರಾತ್ರಿ 12 ಗಂಟೆಯ ಸುಮಾರಿಗೆ ಆರಂಭವಾಗಲಿದ್ದು, ಮೇ 1ರ ಬೆಳಗಿನ ಜಾವ 4 ಗಂಟೆಯವರೆಗೆ ಇರಲಿದೆ. ಈ ಗ್ರಹಣವು ಭಾಗಶಃ ಸೂರ್ಯಗ್ರಹಣವಾಗಿರಲಿದೆ. ಭಾರತದಲ್ಲಿ ಈ ಗ್ರಹಣ ಗೋಚರಿಸದಿದ್ದರೂ ಕೂಡ ಅದರ ಪ್ರಭಾವ ಕೆಲ ರಾಶಿಗಳ ಜನರ ಜೀವನದ ಮೇಲೆ ಉಂಟಾಗಲಿದೆ.  ಗ್ರಹಣದ ದಿನದಂದು ರಾಹು, ಶನಿ, ಸೂರ್ಯ ಮತ್ತು ಚಂದ್ರರ ಅಪರೂಪದ ಸಂಯೋಜನೆಯೇ ಇದರ ಹಿಂದಿನ ಪ್ರಮುಖ ಕಾರಣ.


COMMERCIAL BREAK
SCROLL TO CONTINUE READING


ಸೂರ್ಯಗ್ರಹಣದ ವೇಳೆ ಅಪರೂಪದ ಕಾಕತಾಳೀಯ
ಮೇಷ ಮತ್ತು ಭರಣಿ ನಕ್ಷತ್ರದಲ್ಲಿ ಈ ಸೂರ್ಯಗ್ರಹಣ ಸಂಭವಿಸುತ್ತಿದೆ. ಇದಲ್ಲದೆ, ಈ ದಿನ ವೈಶಾಖ ಅಮಾವಾಸ್ಯೆ ಕೂಡ ಇರಲಿದೆ, ಶನಿವಾರದ ದಿನ ಈ ಅಮಾವಾಸ್ಯೆ ಬಂದಿರುವುದರಿಂದ ಇದನ್ನು ಶನಿಶ್ಚರಿ ಅಮವಾಸ್ಯೆ ಎಂದೂ ಕೂಡ ಕರೆಯಲಾಗುತ್ತದೆ. ಇದಲ್ಲದೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಗ್ರಹಣದಲ್ಲಿ ಸೂರ್ಯ, ಚಂದ್ರ ಮತ್ತು ರಾಹುಗಳ ಸಂಯೋಜನೆ ಇರಲಿದೆ. ಹೀಗಾಗಿ ಅದರ ಮೇಲೆ ಶನಿಯ ದೃಷ್ಟಿಯೂ ಇರಲಿದೆ. ಈ ಪ್ರಮುಖ ಗ್ರಹಗಳ ಸಂಯೋಜನೆಯಿಂದಾಗಿ, ಅಶುಭ ಘಟನೆಗಳು ಸಂಭವಿಸುವ ಸಾಧ್ಯತೆ ಇದೆ. ಈ ಗ್ರಹಣದಿಂದ ಜಗತ್ತಿನಲ್ಲಿ ಯುದ್ಧಗಳು ಮತ್ತು ಸ್ಫೋಟಗಳು ಸಂಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದರಲ್ಲೂ ಭಾರತದ ಪೂರ್ವ ಭಾಗಗಳಲ್ಲಿ ಅಂದರೆ ಚೀನಾ, ಜಪಾನ್ ಮತ್ತು ಬಾಂಗ್ಲಾದೇಶದಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುವ ಸಾಧ್ಯತೆ ಇದೆ.



ಈ ರಾಶಿಗಳ ಜನರು ಎಚ್ಚರವಹಿಸಿ


ಮೇಷ - ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯಲ್ಲಿ ಸಂಭವಿಸುತ್ತಿರುವ ಕಾರಣ. ಈ ರಾಶಿಯ ಜನರ ಮನಸ್ಸು ಖಿನ್ನತೆಯಿಂದ ಕೂಡಿರುತ್ತದೆ. ಅಲ್ಲದೇ ಅಪಘಾತ ಸಂಭವಿಸುವ ಸಾಧ್ಯತೆಯೂ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ  - ಕಾರಣವೇ ಇರದ ಭಯ ವೃಷಭ ರಾಶಿಯವರಿಗೆ ತೊಂದರೆ ನೀಡಲಿದೆ. ಆರೋಗ್ಯ ಸಮಸ್ಯೆ ಎದುರಾಗಬಹುದು. ನಿಮ್ಮ ವ್ಯವಹಾರ ಮತ್ತು ವೈವಾಹಿಕ ಜೀವನದ ಮೇಲೆ ಗಮನ ಕೇಂದ್ರೀಕರಿಸಿ.

ಸಿಂಹ - ಗ್ರಹಣದ ಅವಧಿಯಲ್ಲಿ ಸಿಂಹ ರಾಶಿಯವರಿಗೆ ಆತ್ಮವಿಶ್ವಾಸ ಕಡಿಮೆಯಾಗಲಿದೆ. ಅನಗತ್ಯ ಚಿಂತೆ ಮಾಡಬೇಡಿ. ನೆಮ್ಮದಿಯಿಂದ ಕೆಲಸ ಮಾಡಿ, ಇಲ್ಲದಿದ್ದರೆ ವಿವಾದ ಎದುರಿಸಬೇಕಾಗಬಹುದು. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ತುಲಾ - ದುಃಖ ಎದುರಾಗಲಿದೆ. ಅಪಘಾತ ಸಂಭವಿಸುವ ಸಾಧ್ಯತೆ ಇದೆ, ಆದ್ದರಿಂದ ತಾಳ್ಮೆಯಿಂದಿರಿ. ಆದಷ್ಟು ವಹಿವಾಟು ಮಾಡುವುದನ್ನು ತಪ್ಪಿಸಿ. ನೀವು ಅದನ್ನು ಮಾಡಲೇಬೇಕು ಎಂದರೆ ಸಾಕಷ್ಟು ಎಚ್ಚರಿಕೆ ವಹಿಸಿ.


ಇದನ್ನೂ ಓದಿ-Chanakya Niti: ಈ ಮೂರು ಸಂಗತಿಗಳಿಂದ ಆದಷ್ಟು ದೂರವಿರಿ, ಜೀವನವೇ ಹಾಳು ಮಾಡುತ್ತವೆ

ಮಕರ - ಮಕರ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಅಡೆತಡೆ ಎದುರಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ವೃತ್ತಿಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.


ಇದನ್ನೂ ಓದಿ-ಉಡುಗೊರೆ ನೀಡುವಾಗ ಹೆಚ್ಚುವರಿ 1 ರೂ. ನಾಣ್ಯವನ್ನು ಏಕೆ ನೀಡುತ್ತೇವೆ?

(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.