Surya Grahan 2022 Upay: ಜೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣವನ್ನು ಒಂದು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಈ ದಿನ, ಪೂಜೆ ಮತ್ತು ಯಾವುದೇ ರೀತಿಯ ಶುಭ ಕಾರ್ಯಗಳಿಗೆ ನಿಷಿದ್ಧ ಇರುತ್ತದೆ. ಸೂರ್ಯಗ್ರಹಣದ ಸಮಯದಲ್ಲಿ ದೇವರನ್ನು ಮಾತ್ರ ಸ್ಮರಿಸಬೇಕೆಂದು ಹೇಳಲಾಗುತ್ತದೆ. 2022 ರ ಈ ಸೂರ್ಯಗ್ರಹಣವು ವರ್ಷದ ಕೊನೆಯ ಮತ್ತು ಎರಡನೇ ಗ್ರಹಣವಾಗಿದೆ ಮತ್ತು ಅಕ್ಟೋಬರ್ 25 ರಂದು ಸಂಜೆ 4:22 ರಿಂದ ಈ ಗ್ರಹಣ ಆರಂಭಗೊಂಡಿದೆ.


COMMERCIAL BREAK
SCROLL TO CONTINUE READING

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸೂರ್ಯಗ್ರಹಣದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಎನ್ನಲಾಗಿದೆ, ಇದರ ಜೊತೆಗೆ ಗ್ರಹಣದ ಅವಧಿ ಮುಗಿತ ತಕ್ಷಣ ಕೆಲವು ಕೆಲಸಗಳನ್ನು ಮಾಡುವುದು ದ್ತುಮ್ಬಾ ಮುಖ್ಯ. ಸೂರ್ಯಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿಯು ಹರಿಯುತ್ತದೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸೂರ್ಯಗ್ರಹಣದ ನಂತರ ಅದನ್ನು ಮುಕ್ತಾಯಗೊಳಿಸಲು ಮತ್ತು ಅದರ ನಕಾರಾತ್ಮಕ ಪರಿಣಾಮಗಳನ್ನು ತಪ್ಪಿಸಲು ಕೆಲ ಕೆಲಸಗಳನ್ನು ಮಾಡಬೇಕು.


ಸೂರ್ಯಗ್ರಹಣದ ನಂತರ ಈ ಕೆಲಸವನ್ನು ಮಾಡಬೇಕು


>> ಸೂರ್ಯಗ್ರಹಣ ಮುಗಿದ ನಂತರ ತುಳಸಿ ಗಿಡಕ್ಕೆ ಗಂಗಾಜಲವನ್ನು ಚಿಮುಕಿಸಿ ಶುದ್ಧೀಕರಿಸಿ.


>> ಗ್ರಹಣ ಮುಕ್ತಾಯದ ನಂತರ, ಗಂಗಾಜಲವನ್ನು ಮನೆಯ ಪೂಜಾ ಸ್ಥಳದಲ್ಲಿ ಅಥವಾ ಪೂಜೆಯ ಸ್ಥಳದಲ್ಲಿ ಸಿಂಪಡಿಸಿ. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.


>> ಈ ಅವಧಿಯಲ್ಲಿ, ಗರ್ಭಿಣಿಯರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗ್ರಹಣದ ಸಮಯದಲ್ಲಿ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯು ಗರ್ಭಿಣಿ ಮಹಿಳೆಯ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಗ್ರಹಣದ ನಂತರ ಸ್ನಾನ ಮಾಡಿ.


>> ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ನಂತರ ಎಳ್ಳು, ಬೇಳೆಕಾಳುಗಳನ್ನು ದಾನ ಮಾಡಲಾಗುತ್ತದೆ. ಹೀಗೆ ಮಾಡುವುದರಿಂದ ಜೀವನದಲ್ಲಿನ ಎಲ್ಲಾ ತೊಂದರೆಗಳು ದೂರಾಗುತ್ತವೆ ಎಂದು ಹೇಳಲಾಗುತ್ತದೆ.


>> ಸೂರ್ಯ ಗ್ರಹಣ ಮುಗಿದ ನಂತರ, ನೀವು ಪೊರಕೆಯಿಂದ ಮನೆಯನ್ನು ಸ್ವಚ್ಚಗೊಳಿಸಬೇಕು. ಹೀಗೆ ಮಾಡುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ.


ಇದನ್ನೂ ಓದಿ-Surya ಮತ್ತು ಚಂದ್ರರು ಪ್ರೇಮಿಗಳಿದ್ದಂತೆ, ಗ್ರಹಣದ ವೇಳೆ ಪ್ರಪಂಚದಿಂದ ಮರೆಮಾಚಿ ಪ್ರೇಮಲೀಲೆ ನಡೆಸುತ್ತಾರಂತೆ!


>> ಗ್ರಹಣದ ನಂತರ ಸ್ನಾನದ ಜೊತೆಗೆ ದಾನಕ್ಕೂ ವಿಶೇಷ ಪ್ರಾಮುಖ್ಯತೆ ಇದೆ. ಆದ್ದರಿಂದ ನಿಮ್ಮ ಕೈಲಾದಷ್ಟು ದಾನ ಮಾಡಿ.


>> ಸ್ನಾನ ಮಾಡುವಾಗ ನೀರಿನಲ್ಲಿ ಗಂಗಾಜಲವನ್ನು ಬೆರೆಸುವುದರಿಂದ ಗ್ರಹಣದ ಋಣಾತ್ಮಕ ಪರಿಣಾಮಗಳು ನಾಶವಾಗುತ್ತವೆ.


>> ಈ ದಿನ ದೇವಾನುದೇವತೆಗಳ ದರ್ಶನ ಪಡೆಯುವುದು ಮಂಗಳಕರವೆಂದು ನಂಬಲಾಗಿದೆ. ಆದ್ದರಿಂದ ಗ್ರಹಣ ಮುಗಿದ ನಂತರ ಸ್ನಾನ ಮಾಡಿ ದೇವರ ದರ್ಶನ ಮಾಡಿ.


ಇದನ್ನೂ ಓದಿ-ಈ ರಾಶಿಯವರ ವೃತ್ತಿ-ವ್ಯವಹಾರದಲ್ಲಿ ಅದ್ಭುತ ಯಶಸ್ಸು ನೀಡಲಿದ್ದಾನೆ ಸೂರ್ಯ ದೇವ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.