ಹಣಕಾಸಿನ ಮುಗ್ಗಟ್ಟಿನಿಂದ ಬೇಸತ್ತಿದ್ದೀರಾ? ಶಿವರಾತ್ರಿಯಂದು ಈ ಪರಿಹಾರ ಕೈಗೊಳ್ಳುವುದರಿಂದ ಸಿಗುತ್ತೆ ಖಚಿತ ಪರಿಹಾರ
ಮನುಷ್ಯ ಎಂದ ಮೇಲೆ ಕಷ್ಟ-ಸುಖ ಎರಡೂ ಕೂಡ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಆದರೆ, ಮೇಲಿಂದ ಮೇಲೆ ಬರುವ ಕಷ್ಟಗಳು ಮನುಷ್ಯನಿಗೆ ಜೀವನವೇ ಸಾಕಪ್ಪ ಎನ್ನುವಂತೆ ಮಾಡುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾಶಿವರಾತ್ರಿ ದಿನದಂದು ಕೈಗೊಳ್ಳುವ ಕೆಲವು ಸುಲಭ ಪರಿಹಾರಗಳು ವ್ಯಕ್ತಿಯು ಆರ್ಥಿಕ ಸಂಕಷ್ಟದಿಂದ ಹೊರಬರಲು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಬೆಂಗಳೂರು: ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕದಂದು ಮಹಾಶಿವರಾತ್ರಿಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18, 2023 ರ ಶನಿವಾರದಂದು ಮಹಾ ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ವಿಶೇಷವೆಂದರೆ ಶನಿ ಪ್ರದೋಷ, ಸರ್ವಾರ್ಥ ಸಿದ್ಧಿ ಯೋಗದಂತಹ ಹಲವು ಶುಭ ಯೋಗಗಳು ಕೂಡ ಈ ದಿನ ನಿರ್ಮಾಣವಾಗುತ್ತಿದೆ. ಹಾಗಾಗಿ, ಈ ಬಾರಿಯ ಶಿವರಾತ್ರಿ ಮತ್ತಷ್ಟು ವಿಶೇಷವಾಗಿದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಾ ಶಿವರಾತ್ರಿಯಂದು ನೇಮ-ನಿಷ್ಠೆಯಿಂದ ಶಿವ ಮತ್ತು ತಾಯಿ ಪಾರ್ವತಿಯನ್ನು ಪೂಜಿಸುವುದರಿಂದ ಮತ್ತು ಕೆಲವು ವಿಶೇಷ ಪರಿಹಾರಗಳನ್ನು ಕೈಗೊಳ್ಳುವುದರಿಂದ ವ್ಯಕ್ತಿಯು ಜೀವನದಲ್ಲಿ ಎದುರಾಗಿರುವ ನಾನಾ ರೀತಿಯ ಕಷ್ಟಗಳಿಂದ ಹೊರಬರಬಹುದು. ಅದರಲ್ಲೂ, ಸಾಲಬಾಧೆ, ಆರ್ಥಿಕ ಸಂಕಷ್ಟದಂತಹ ಸಮಸ್ಯೆಗಳಿಂದ ಸುಲಭ ಪರಿಹಾರವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ.
ಹಣಕಾಸಿನ ಮುಗ್ಗಟ್ಟಿನಿಂದ ಹೊರಬರಲು ಮಹಾಶಿವರಾತ್ರಿಯಂದು ಈ ಪರಿಹಾರಗಳನ್ನು ಕೈಗೊಳ್ಳಿ:
ವಾಸ್ತವವಾಗಿ, ಸಾಲಬಾಧೆಯಿಂದ ಪಾರಾಗಲು ಶಿವಪುರಾಣದಲ್ಲಿ ಕೆಲವು ವಿಶೇಷ ಕ್ರಮಗಳನ್ನು ಸೂಚಿಸಲಾಗಿದೆ. ಭಕ್ತಿಯಿಂದ ಒಂದು ದಳ ಬಿಲ್ವಪತ್ರೆಯನ್ನು ಹಾಕಿದರೆ ಸಾಕು ಭಕ್ತರ ಕೂಗಿಗೆ ಕಿವಿಗೊಡುವ ಭೋಲೇನಾಥನ ಆಶೀರ್ವಾದ ಪಡೆಯಲು ಮಹಾಶಿವರಾತ್ರಿಯ ದಿನ ತುಂಬಾ ವಿಶೇಷ.
ಇದನ್ನೂ ಓದಿ- Mahashivratri: 2023ರಲ್ಲಿ ಮಹಾಶಿವರಾತ್ರಿ ಯಾವಾಗ? ದಿನಾಂಕ, ಪೂಜಾ ಮುಹೂರ್ತ & ಶುಭ ಸಮಯ ತಿಳಿಯಿರಿ
* ಉದ್ಯೋಗದಲ್ಲಿ ಪ್ರಗತಿಗಾಗಿ ಪರಿಹಾರ:
ಶಿವಪುರಾಣದ ಪ್ರಕಾರ, ಮಹಾಶಿವರಾತ್ರಿಯ ದಿನದಂದು ಶಿವ ದೇವಾಲಯಕ್ಕೆ ಹೋಗಿ ಶಿವಲಿಂಗಕ್ಕೆ ತುಪ್ಪ ಮತ್ತು ಎಳ್ಳನ್ನು ಅರ್ಪಿಸಿ. ಇದಕ್ಕಾಗಿ, ಕಪ್ಪು ಎಳ್ಳಿನಲ್ಲಿ ತುಪ್ಪವನ್ನು ಬೆರೆಸಿ ಮತ್ತು ನಂತರ ಶಿವಲಿಂಗದ ಮೇಲೆ ತುಪ್ಪವನ್ನು ಬೆರೆಸಿದ ಎಳ್ಳನ್ನು 1100 ಬಾರಿ ಅರ್ಪಿಸಿ. ಈ ಸಮಯದಲ್ಲಿ 'ಓಂ ನಮಃ ಶಿವಾಯ' ಮಂತ್ರವನ್ನು ಜಪಿಸಿ. ಹೀಗೆ ಮಾಡುವುದರಿಂದ ವೃತ್ತಿಯಲ್ಲಿ ಪ್ರಗತಿಯ ಅವಕಾಶಗಳು ಸೃಷ್ಟಿಯಾಗುತ್ತವೆ ಎಂಬ ನಂಬಿಕೆ ಇದೆ.
* ಧನ ಲಾಭಕ್ಕಾಗಿ:
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿ ಪ್ರದೋಷದ ದಿನದಂದು ಬರುವ ಮಹಾಶಿವರಾತ್ರಿಯ ದಿನ ಅದರಲ್ಲೂ ಶನಿವಾರದಂದೇ ಬರುವ ಮಹಾಶಿವರಾತ್ರಿಯಲ್ಲಿ ಶಿವಲಿಂಗದ ಮೇಲೆ ಬೇಲ್ಪತ್ರವನ್ನು ಅರ್ಪಿಸಿ ಭಕ್ತಿಯಿಂದ ನಮಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಖಾಲಿ ಇರುವ ಖಜಾನೆ ತುಂಬಲಿದೆ ಎಂದು ಹೇಳಲಾಗುತ್ತದೆ.
* ಸಾಲದಿಂದ ಮುಕ್ತಿ ಹೊಂದಲು:
ಸಾಲದಿಂದ ಮುಕ್ತಿ ಹೊಂದಲು ಮಹಾಶಿವರಾತ್ರಿಯ ದಿನದಂದು ಉಜ್ಜಯಿನಿಯ ರುಣ್ಮುಕ್ತೇಶ್ವರ ಮಹಾದೇವ ದೇವಸ್ಥಾನದಲ್ಲಿ ಪೂಜೆ ಮಾಡುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ, ಉಜ್ಜಯಿನಿಗೆ ಹೋಗಲು ಸಾಧ್ಯವಾಗದವರು, ನಿಮಗೆ ಹತ್ತಿರವಿರುವ ಶಿವ ಕ್ಷೇತ್ರದಲ್ಲಿ ಮಹಾದೇವನನ್ನು ಭಕ್ತಿಯಿಂದ ಆರಾಧಿಸುವುದರಿಂದಲೂ ಸಾಲದಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಇದನ್ನೂ ಓದಿ- ಕುಂಭ ರಾಶಿಯಲ್ಲಿ ಶನಿ-ಸೂರ್ಯ, 30 ವರ್ಷಗಳ ಬಳಿಕ ಶಿವರಾತ್ರಿ ದಿನ ದುಗ್ಧ ಶರ್ಕರಾ ಯೋಗ ನಿರ್ಮಾಣ, 3 ರಾಶಿಯವರಿಗೆ ಭಾಗ್ಯೋದಯ!
* ಮಧುರ ದಾಂಪತ್ಯ ಜೀವನಕ್ಕಾಗಿ:
ಮಹಾಶಿವರಾತ್ರಿಯ ದಿನ ಶಿವಲಿಂಗಕ್ಕೆ ಕಬ್ಬಿನ ರಸದಿಂದ ಅಭಿಷೇಕ ಮಾಡಿ. ಹೀಗೆ ಮಾಡುವುದರಿಂದ ದಾಂಪತ್ಯ ಜೀವನಕ್ಕೆ ಮಧುರವಾಗಿರಲಿದೆ.
* ಆರ್ಥಿಕ ಸ್ಥಿತಿ ಬಲಗೊಳಿಸಲು:
ಈ ಬಾರಿಯ ಮಹಾ ಶಿವರಾತ್ರಿ ದಿನದಂದು ಸರ್ವಾರ್ಥ ಸಿದ್ಧಿ ಯೋಗವೂ ರೂಪುಗೊಳ್ಳುತ್ತಿದೆ. ಈ ಸಮಯದಲ್ಲಿ ‘ಓಂ ರಿಂ ಮುಕ್ತೇಶ್ವರ ಮಹಾದೇವಾಯ ನಮಃ’ ಎಂಬ ಮಂತ್ರವನ್ನು 108 ಬಾರಿ ಜಪಿಸುತ್ತಾ ಶಿವಲಿಂಗದ ಮೇಲೆ ಬಿಲ್ವಪತ್ರೆಯನ್ನು ಅರ್ಪಿಸಿ. ಈ ರೀತಿ ಮಾಡುವುದರಿಂದ ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿ ಬಲಗೊಳ್ಳುತ್ತದೆ ಎಂಬುದು ನಂಬಿಕೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.