Puneeth Rajkumar Fan: ಪ್ರೀತಿ-ಅಭಿಮಾನಕ್ಕೆ ಜಾತಿ, ಧರ್ಮ, ವರ್ಣ, ಭಾಷೆ, ಗಡಿಯ ಭೇಧವಿಲ್ಲ ಅಂತ ಹೇಳ್ತಾರೆ. ಹೌದು, ಇದಕ್ಕೆ ಸಾಕ್ಷಿ ಎನ್ನುವಂತೆ ಕರ್ನಾಟಕ ರತ್ನ ನಟಸಾರ್ವಭೌಮ ದಿವಂಗತ ಡಾಕ್ಟರ್ ಪುನೀತ್ ರಾಜಕುಮಾರ್ (Dr. Puneeth Rajakumar) ಅವರ ತಮಿಳುನಾಡು ಮೂಲದ ಅಭಿಮಾನಿಯೊಬ್ಬರು ಸೈಕಲ್ ಮೇಲೆ ವಿಶ್ವ ಪರ್ಯಟನೆ ಮಾಡುತ್ತ  ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ಸಸಿಗಳನ್ನು ನೆಡುತ್ತಾ, ಪರಿಸರದ ಜಾಗೃತಿ ಮೂಡಿಸುತ್ತ ಅಭಿಮಾನ ಮೆರೆಯುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಹೌದು, ಮೂಲತಃ ತಮಿಳುನಾಡು ರಾಜ್ಯದ ಕೊಯ್ಯಮುತ್ತೂರು ಮೂಲದ ಮುತ್ತು ಸೆಲ್ವಂ (Muthu Selvam) ಎನ್ನುವ ಅಭಿಮಾನಿ  ದಿವಂಗತ ಪುನೀತ್ ರಾಜಕುಮಾರ್ ಅವರ ಕಟ್ಟ ಅಭಿಮಾನಿಯಾಗಿದ್ದು, 122 ಕೆಜಿ ತೂಕದ ವಿಶೇಷ ಸೈಕಲ್ ಅನ್ನು ತಯಾರಿಸಿಕೊಂಡಿದ್ದಾರೆ‌. ಸೈಕಲ್ ಮೇಲೆ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಜೊತೆಗೆ ಕನ್ನಡದ ಬಾವುಟದ ಮೇಲೆ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಹಾಗೂ ರಾಷ್ಟ್ರ ಧ್ವಜದ ಸಹಿತ ವಿಶ್ವ ಪರ್ಯಟನೆಯಲ್ಲಿ ತೊಡಗಿದ್ದಾರೆ.


ಪುನೀತ್ ರಾಜ್ ಕುಮಾರ್ ಅಭಿಮಾನಿ ಮುತ್ತು ಸೆಲ್ವಂ (Puneeth Rajkumar Fan Muthu Selvam) ಕಳೆದ ಡಿಸೆಂಬರ್ 21 ,2021 ರಿಂದ ತಮ್ಮ ಪ್ರಯಾಣವನ್ನ ಆರಂಭಿಸಿದ್ದಾರೆ. ಮೂರು ವರ್ಷಗಳ ಕಾಲ ದೇಶ ವಿದೇಶ ಪರ್ಯಟನೆ ಮಾಡುವ ಗುರಿ ಹೊಂದಿರುವ ಇವರು ಈಗ ಎರಡು ವರ್ಷ ನಾಲ್ಕು ತಿಂಗಳುಗಳನ್ನ ಪೂರೈಸಿದ್ದು, ಸೈಕಲ್ ಮೂಲಕವೇ ಪರ್ಯಟನೆಯಲ್ಲಿ ತೊಡಗಿದ್ದಾರೆ. 


ಇದನ್ನೂ ಓದಿ- ಅಪ್ಪು ತಮ್ಮ ಹೆಂಡತಿ & ಮಕ್ಕಳಿಗೆ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ..?


ಮೊದಲು ತಮಿಳುನಾಡಿನಿಂದ (Tamil Nadu)  ತಮ್ಮ ಪ್ರಯಾಣವನ್ನ ಆರಂಭಿಸಿ ಲಡಾಖ್, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ್, ಗೋವಾ, ಬಿಹಾರ್, ಅಸ್ಸಾಂ ಮೊದಲಾದ ರಾಜ್ಯಗಳನ್ನು ಸಂಚರಿಸಿ ಈಗ ಕರ್ನಾಟಕದ ಬಾಗಲಕೋಟೆಗೆ ಆಗಮಿಸಿದ್ದಾರೆ. ಬಾಗಲಕೋಟೆ ಮಾರ್ಗವಾಗಿ ಕೇರಳ, ಪಾಂಡಿಚೇರಿ, ಛತ್ತೀಸ್ಗಡ್, ನೇಪಾಳ, ವಿಯೆಟ್ನಾಂ, ನಾಗಾಲ್ಯಾಂಡ್  ಹಾಗೂ ಬಾಂಗ್ಲಾದೇಶಕ್ಕೆ ತೆರಳಿ ಎಲ್ಲ ಕಡೆ ಸಸಿಯನ್ನ ನೆಟ್ಟು ಬರುವ ಇವರು  2025 ಜನವರಿ 5ರಂದು ದೆಹಲಿಯ ಇಂಡಿಯಾ ಗೇಟ್ ಬಳಿ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಲಿದ್ದಾರೆ. ನಂತರ ಅದೇ 2025ರ ಜನವರಿ 15ರಂದು ಬೆಂಗಳೂರಿನಲ್ಲಿರುವ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಆಗಮಿಸಿ ಅಲ್ಲಿ ಬಾವುಟವನ್ನ ನೆಟ್ಟು ಅವರ ಕುರಿತು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. 


ಪುನೀತ್ ಅವರ ಅಭಿಮಾನಿ ಮುತ್ತು ಸೆಲ್ವಮ್ ಅವರು ಇದುವರೆಗೂ ತಾವು ಭೇಟಿ ನೀಡಿದ ಸ್ಥಳಗಳಲ್ಲಿ 3,51,000 ಸಸಿಗಳನ್ನು ನೆಟ್ಟಿದ್ದಾರೆ. ಅವರು ಇನ್ನು 1,49,000 ಸಸಿಗಳನ್ನು ನೆಡುವ ಗುರಿಯನ್ನು ಹೊಂದಿದ್ದಾರೆ. ಒಟ್ಟು 5 ಲಕ್ಷ ಸಸಿಗಳನ್ನು ನೆಟ್ಟು ಸೈಕಲ್ ಮೇಲೆ ದೇಶ ವಿದೇಶ ಸುತ್ತಿ 34,000 ಕಿಲೋಮೀಟರ್ ಪ್ರಯಾಣದ ಮೂಲಕ ಗಿನ್ನಿಸಿ ದಾಖಲೆ (Guinness Record) ನಿರ್ಮಿಸಲು ಮುಂದಾಗಿದ್ದಾರೆ. 


ಇದನ್ನೂ ಓದಿ- ಪುನೀತ್‌ ರಾಜ್‌ಕುಮಾರ್‌ ಅವರ ಸಾವಿಗೆ ಕಾರಣವಾಯ್ತಾ ಕೋವಿಡ್‌ ಲಸಿಕೆ..? ಮುನ್ನೆಲೆಗೆ ಬಂತು ಹೊಸ ವಿಚಾರ


ಡಾಕ್ಟರ್ ಪುನೀತ್ ರಾಜಕುಮಾರ್ ಅಭಿಮಾನಿಯಾಗಿ ಪರಿಸರದ ಕಾಳಜಿ ಹೊಂದಿದ್ದು ವಿಶ್ವದೆಲ್ಲೆಡೆ ಪರಿಸರದ ಕುರಿತು ಕೂಡ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ. ಬಾಗಲಕೋಟೆ ನಗರದ ಜಿಲ್ಲಾಡಳಿತಭವನಕ್ಕೆ ಭೇಟಿ ನೀಡಿದ ಅವರನ್ನು ಸ್ಥಳೀಯ ಯುವಕರು ಸ್ವಾಗತಿಸಿ ಅಭಿನಂದಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.