ಕೆಟ್ಟ ಕೊಲೆಸ್ಟ್ರಾಲ್ ನಿರ್ಮೂಲನೆಗೆ, ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ!
taming bad cholesterol: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ತೊಂದರೆಗೀಡಾಗಿದ್ದಾರೆ. ಆದಾಗ್ಯೂ, ಆಹಾರದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಸೇರಿಸುವ ಮೂಲಕ ಅದನ್ನು ಕಡಿಮೆ ಮಾಡಬಹುದು. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು, ಹೆಚ್ಚು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು.(Lifestyle News In Kannada)
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿನ ಬದಲಾವಣೆ ಮತ್ತು ಕೆಟ್ಟ ಆಹಾರ ಪದ್ಧತಿಯಿಂದಾಗಿ ಹೆಚ್ಚಿನ ಜನರು ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಅದರಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಸಮಸ್ಯೆಯೂ ಒಂದು. ಅಧಿಕ ಕೊಲೆಸ್ಟ್ರಾಲ್ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಹೈ ಕೊಲೆಸ್ಟ್ರಾಲ್ ಅನ್ನು ನಿಯತ್ರಿಸುವುದು ಬಹಳ ಮುಖ್ಯವಾಗುತ್ತದೆ.(Lifestyle News In Kannada)
ಮೂಲತಃ ದೇಹದಲ್ಲಿ ಒಟ್ಟು ಎರಡು ರೀತಿಯ ಕೊಲೆಸ್ಟ್ರಾಲ್ಗಳಿವೆ - ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಟ್ಟ ಕೊಲೆಸ್ಟ್ರಾಲ್. ಒಳ್ಳೆಯ ಕೊಲೆಸ್ಟ್ರಾಲ್ ದೇಹದ ಚಯಾಪಚಯ ಕ್ರಿಯೆಯನ್ನು ಸರಿಯಾಗಿಡುತ್ತದೆ, ಹಾಗೆಯೇ ಇದು ಅನೇಕ ರೋಗಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ, ಆದರೆ ಕೆಟ್ಟ ಕೊಲೆಸ್ಟ್ರಾಲ್ ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಾದರೆ ಬೇಸಿಗೆಯಲ್ಲಿ ಕೊಲೆಸ್ಟ್ರಾಲ್ ಅನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಯಾವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಸೂಕ್ತ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
1. ಬೆಂಡೆಕಾಯಿ ಸೇವಿಸಿ
ಬೆಂಡೆಕಾಯಿ ಕರ್ರಿ ತಯಾರಿಸುವುದು ಅತ್ಯಂತ ಸುಲಭವಾಗಿದೆ ಮತ್ತು ಇದನ್ನು ತಿನ್ನುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. ವಿಟಮಿನ್-ಕೆ, ವಿಟಮಿನ್-ಸಿ, ವಿಟಮಿನ್-ಎ, ಮೆಗ್ನೀಸಿಯಮ್, ಫೋಲೇಟ್ ಮತ್ತು ಫೈಬರ್ ನಂತಹ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಇದು ಸಹಕಾರಿಯಾಗಿದೆ, ಜೊತೆಗೆ ಜೀರ್ಣಿಸಿಕೊಳ್ಳಲು ಇದು ತುಂಬಾ ಸುಲಭವಾಗಿದೆ.
2. ಪಡವಳಕಾಯಿ ಸೇವಿಸಿ
ವಿಟಮಿನ್-ಸಿ, ವಿಟಮಿನ್-ಎ, ವಿಟಮಿನ್-ಬಿ1, ವಿಟಮಿನ್-ಬಿ2 ಮುಂತಾದ ಪೋಷಕಾಂಶಗಳು ಪಡವಳಕಾಯಿಯಲ್ಲಿ ಕಂಡುಬರುತ್ತವೆ. ಇದು ತುಂಬಾ ರುಚಿಕರವಾದ ತರಕಾರಿಯಾಗಿದ್ದು, ಪ್ರತಿಯೊಬ್ಬರೂ ತಿನ್ನಲು ಇಷ್ಟಪಡುತ್ತಾರೆ. ಇದು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ತೂಕವನ್ನು ಕಳೆದುಕೊಳ್ಳಲೂ ಕೂಡ ನೀವು ಈ ತರಕಾರಿಯನ್ನು ಸೇವಿಸಬಹುದು.
3. ಹಾಗಲಕಾಯಿ ಸೇವಿಸಿ
ಹಾಗೆ ನೋಡಿದರೆ ಹಾಗಲಕಾಯಿಯ ರುಚಿ ಕಹಿಯಾಗಿರುತ್ತದೆ. ಆದರೆ ಈ ತರಕಾರಿ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಂಡುಬರುತ್ತವೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
4. ಸೌತೆಕಾಯಿ ಸೇವಿಸಿ
ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಅಧಿಕವಾಗಿದ್ದು, ಇದು ಬೇಸಿಗೆಯಲ್ಲಿ ನಿಮ್ಮ ದೇಹಕ್ಕೆ ನೀರು ಪೂರೈಕೆಯ ಕೆಲಸ ಮಾಡುತ್ತದೆ. ಇದು ಫೈಟೊಸ್ಟೆರಾಲ್ಗಳನ್ನು ಹೊಂದಿರುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಪೆಕ್ಟಿನ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-ರಕ್ತದೊತ್ತಡ ನಿಯಂತ್ರಣಕ್ಕೆ ಇಂಗು ರಾಮಬಾಣ ಉಪಾಯ, ಈ ರೀತಿ ಬಳಸಿ!
5. ಕಲ್ಲಂಗಡಿ ಸೇವಿಸಿ
ಬೇಸಿಗೆಯಲ್ಲಿ, ಜನರು ಕಲ್ಲಂಗಡಿ ತಿನ್ನಲು ತುಂಬಾ ಇಷ್ಟಪಡುತ್ತಾರೆ. ಇದು ದೇಹವನ್ನು ತಂಪಾಗಿಸುವುದರೊಂದಿಗೆ ಹಲವು ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ. ಇದು ಪೋಷಕಾಂಶಗಳ ಖಜಾನೆಯಾಗಿದೆ. ಇದರಲ್ಲಿರುವ ಲೈಕೋಪೀನ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ನಿಮ್ಮ ಆಹಾರದಲ್ಲಿ ನೀವು ಕಲ್ಲಂಗಡಿ ಅಥವಾ ಅದರ ರಸವನ್ನು ಸೇರಿಸಿಕೊಳ್ಳಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.