Taming Thyroid: ಈ ಚಹಾ ಸೇವನೆಯಿಂದ ಥೈರಾಯಿಡ್ ಸಮಸ್ಯೆ ನಿವಾರಣೆಯ ಜೊತೆಗೆ ಈ ಕಾಯಿಲೆಗಳನ್ನು ಕೂಡ ಗುಣಪಡಿಸಬಹುದು
Taming Thyroid: ಥೈರಾಯಿಡ್ ಸಮಸ್ಯೆ ಇರುವವರಿಗೆ ಕೆಮೊಮೈಲ್ ಟೀ ಒಂದು ಆರೋಗ್ಯ ಸಂಜೀವನಿಯಾಗಿದೆ. ಅಷ್ಟೇ ಅಲ್ಲ ಇದರಿಂದ ಸ್ಥೂಲಕಾಯದಿಂದ ಹಿಡಿದು ಡಯಾಬಿಟಿಸ್ ಅನ್ನು ಕೂಡ ನಿಯಂತ್ರಣದಲ್ಲಿಡಬಹುದು.
Thyroid : ಥೈರಾಯ್ಡ್ ಸಮಸ್ಯೆ ಇರುವವರಿಗೆ ಕ್ಯಾಮೊಮೈಲ್ ಟೀ ಒಂದು ಆರೋಗ್ಯಕರ ವಿಕಲ್ಪವಾಗಿದೆ. ಅಷ್ಟೇ ಅಲ್ಲ ಈ ಚಹಾ ಸೇವನಯಿಂದ ಸ್ಥೂಲಕಾಯದಿಂದ ಹಿಡಿದು ಡಯಾಬಿಟಿಸ್ ಕಾಯಿಲೆವರೆಗೆ ಎಲ್ಲಾ ಕಾಯಿಲೆಗಳನ್ನು ನಿಯಂತ್ರಿಸಬಹುದು. ಇದರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ನಮ್ಮಲ್ಲಿ ಬಹುತೇಕ ಜನರು ಚಹಾ ಸೇವನೆಯ ಮೂಲಕ ತಮ್ಮ ದಿನದ ಆರಂಭವನ್ನು ಮಾಡುತ್ತಾರೆ. ಅಷ್ಟೇ ಅಲ್ಲ ಹೆಚ್ಚಿನವರು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾವನ್ನು ಸೇವಿಸುತ್ತಾರೆ. ಆದರೆ ಅನೇಕ ಜನರು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾ ಕುಡಿಯುವುದನ್ನು ನಿರಾಕರಿಸುತ್ತಾರೆ, ಏಕೆಂದರೆ ಇದು ದೇಹಕ್ಕೆ ಅನೇಕ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ. ಹಾಲು ಚಹಾ, ವಿಶೇಷವಾಗಿ ಥೈರಾಯ್ಡ್ ಸಮಸ್ಯೆ ಇರುವವರ ದೇಹಕ್ಕೆ ಹಾನಿ ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಒಂದು ಗಿಡಮೂಲಿಕೆ ಚಹಾವು ನಿಮ್ಮ ಆರೋಗ್ಯವನ್ನು ಉತ್ತಮವಾಗಿರಿಸಬಲ್ಲದು. ನಮ್ಮ ಸುತ್ತಲೂ ಅನೇಕ ಗಿಡಮೂಲಿಕೆ ಚಹಾಗಳಿವೆ, ಅವುಗಳಲ್ಲಿ ಕ್ಯಾಮೊಮೈಲ್ ಚಹಾವು ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಕ್ಯಾಮೊಮೈಲ್ ಚಹಾವನ್ನು ಕುಡಿಯುವುದರಿಂದ ಥೈರಾಯ್ಡ್ ನಲ್ಲಿ ನಿಮಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಕ್ಯಾಮೊಮೈಲ್ ಟೀ ಕುಡಿಯುವುದರಿಂದ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,
ಕ್ಯಾಮೊಮೈಲ್ ಟೀ ಕುಡಿಯುವ ಪ್ರಯೋಜನಗಳು
ಥೈರಾಯ್ಡ್ ಸಮಸ್ಯೆ ಇರುವವರಿಗೆ ಕ್ಯಾಮೊಮೈಲ್ ಟೀ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನೈಸರ್ಗಿಕ ರಾಸಾಯನಿಕಗಳು ಇದರಲ್ಲಿ ಕಂಡುಬರುತ್ತವೆ, ಅವುಗಳನ್ನು ಫ್ಲೇವನಾಯ್ಡ್ಗಳು ಎಂದು ಕರೆಯಲಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಥೈರಾಯ್ಡ್ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ.
ಥೈರಾಯ್ಡ್ ಗ್ರಂಥಿಯಲ್ಲಿ ಕ್ಯಾಮೊಮೈಲ್ ಚಹಾ ಹೇಗೆ ಪ್ರಯೋಜನಕಾರಿಯಾಗಿದೆ?
ಕೆಮೊಮೈಟ್ ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಥೈರಾಯ್ಡ್ ಗ್ರಂಥಿಯಿಂದ ಉಂಟಾಗುವ ಸಮಸ್ಯೆಗಳನ್ನು ಕಡಿಮೆ ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ. ಇದು ನಿಮಗೆ ಇತರ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಬನ್ನಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ
ಕೂದಲು ಉದುರುವಿಕೆಯಿಂದ ರಕ್ಷಣೆ
ಥೈರಾಯ್ಡ್ ಸಮಸ್ಯೆ ಇರುವವರಲ್ಲಿ ಕ್ಯಾಮೊಮೈಲ್ ಟೀ ಸೇವನೆಯಿಂದ ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಆದರೆ, ಇದರಿಂದ ನೀವು ನಿಮ್ಮ ಥೈರಾಯ್ಡ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ನೀವು ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರ ಮಾತ್ರ ಪಡೆಯಬಹುದು.
ಬೊಜ್ಜು ನಿಯಂತ್ರಣ
ಕ್ಯಾಮೊಮೈಟ್ ಟೀಯನ್ನು ಸೇವಿಸುವ ಮೂಲಕ ಸ್ಥೂಲಕಾಯದ ಸಮಸ್ಯೆಯನ್ನು ನಿಯಂತ್ರಿಸಬಹುದು. ಇದರಿಂದ ನಿಮ್ಮ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ನೀವು ಕಡಿಮೆ ಮಾಡಿಕೊಳ್ಳಬಹುದು. ಥೈರಾಯ್ಡ್‌ನಲ್ಲಿ ಬೊಜ್ಜು ಹೆಚ್ಚಾಗುವ ಸಮಸ್ಯೆಯನ್ನು ಕಡಿಮೆ ಮಾಡಲು ಈ ಚಹಾ ಪರಿಣಾಮಕಾರಿಯಾಗಿದೆ.
ಇದನ್ನೂ ಓದಿ-ಭಾರತಕ್ಕೆ ಕಾಲಿಟ್ಟ ಟೊಮೇಟೊ ಜ್ವರ..! ಇದೆಷ್ಟು ಅಪಾಯಕಾರಿ ಗೊತ್ತೇ?
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು
ಥೈರಾಯ್ಡ್ ಸಮಸ್ಯೆಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ಇಂತಹ ಪರಿಸ್ಥಿತಿಯಲ್ಲಿ, ಕ್ಯಾಮೊಮೈಲ್ ಚಹಾವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನೀವು ನಿಯಂತ್ರಿಸಬಹುದು.
ಇದನ್ನೂ ಓದಿ-Health Tips : ಮೂಲವ್ಯಾಧಿಗೆ ಮದ್ದು, ಮಧುಮೇಹಿಗಳಿಗೆ ವರದಾನ ಎಕ್ಕದ ಎಲೆ
ಒತ್ತಡವನ್ನು ಕಡಿಮೆ ಮಾಡುತ್ತದೆ
ಕ್ಯಾಮೊಮೈಲ್ ಚಹಾವು ಒತ್ತಡವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅದರಲ್ಲೂ ಥೈರಾಯ್ಡ್ ನಲ್ಲಿ ಹಲವರಿಗೆ ಸ್ಟ್ರೆಸ್ ಮತ್ತು ಟೆನ್ಶನ್ ಇರುತ್ತದೆ. ಹೀಗಿರುವಾಗ ಈ ಚಹಾ ಸೇವನೆಯು ನಿಮ್ಮಲ್ಲಿ ಉಲ್ಲಾಸ ಮತ್ತು ಚೈತನ್ಯವನ್ನು ತುಂಬಲಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.