Tea Tree Oil Benefits For Hair: ಬದಲಾದ ಕಳಪೆ  ಜೀವನಶೈಲಿಯಿಂದಾಗಿ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳು ಬಾಧಿಸುತ್ತಿರಬಹುದು. ಇದರಲ್ಲಿ ತಲೆಹೊಟ್ಟು, ಜಡ ಕೂದಲು, ಕೂದಲು ಉದುರುವಿಕೆಯಂತಹ ಹಲವು ಸಮಸ್ಯೆಗಳಿರಬಹುದು. ಆದರೆ, ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೂ ಒಂದೇ ಒಂದು ಎಣ್ಣೆ ಅತ್ಯುತ್ತಮ ಮದ್ದು ಎಂದು ಸಾಬೀತುಪಡಿಸಬಹುದು. ಅದುವೇ ಟೀ ಟ್ರೀ ಆಯಿಲ್. 


COMMERCIAL BREAK
SCROLL TO CONTINUE READING

ಟೀ ಟ್ರೀ ಆಯಿಲ್ ಪ್ರಯೋಜನ (Benefits of Tea Tree Oil): 
ಟೀ ಟ್ರೀ ಆಯಿಲ್ ನಲ್ಲಿ ಆಂಟಿ-ಸೆಪ್ಟಿಕ್, ಆಂಟಿಫಂಗಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇವುಗಳು ಕೂದಲಿನ ಸಮಸ್ಯೆಗಳನ್ನು ನಿವಾರಿಸಿ ಕೂದಲ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಹೇಳಲಾಗುತ್ತದೆ. ಕೂದಲಿನ ಯಾವ ಸಮಸ್ಯೆಗಳಿಗೆ ಟೀ ಟ್ರೀ ಆಯಿಲ್ ಅನ್ನು ಹೇಗೆ ಬಳಸಬೇಕು ಬಳಸಬೇಕು ಎಂದು ತಿಳಿಯೋಣ... 


ತಲೆಹೊಟ್ಟಿನ ಸಮಸ್ಯೆ (Dandruff problem): 
ಟೀ ಟ್ರೀ ಆಯಿಲ್ (Tea Tree Oil) ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಬಳಸುವುದರಿಂದ ಇದರಲ್ಲಿರುವ ಆ್ಯಂಟಿ ಫಂಗಲ್ ಗುಣಗಳು ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಸಹಾಯಕವಾಗಿದೆ. 


ಇದನ್ನೂ ಓದಿ- ಸನ್‌ಬರ್ನ್‌ನಿಂದ ಮುಕ್ತಿ ಹೊಂದಿ ಬೇಸಿಗೆಯಲ್ಲಿ ಕಾಂತಿಯುತ ಚರ್ಮ ಪಡೆಯಲು ಸಿಂಪಲ್ ಟಿಪ್ಸ್


ಕೂದಲಿನ ಜಿಗುಟುತನ (Stickiness of hair): 
ಟೀ ಟ್ರೀ ಆಯಿಲ್ ಅನ್ನು ಬಳಸುವುದರಿಂದ ಇದರಲ್ಲಿರುವ ಆಂಟಿ-ಡ್ಯಾಂಡ್ರಫ್  ಗುಣಗಳು ನೆತ್ತಿಯನ್ನು ತೇವಗೊಳಿಸುವ ಮೂಲಕ ಕೂದಲಿನ ಜಿಗುಟುತನವನ್ನು ನಿವಾರಿಸುವಲ್ಲಿ ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. 


ಕೂದಲುದುರುವ ಸಮಸ್ಯೆ (Hair Loss problem): 
ಟೀ ಟ್ರೀ ಆಯಿಲ್‌ನಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೂದಲು ಉದುರುವ ಸಮಸ್ಯೆಯನ್ನು ನಿವಾರಿಸಿ ಕೂದಲಿನ ಬೆಳವಣಿಗೆಗೆ ಸಹಕಾರಿ ಆಗಿದೆ. 


ನೆತ್ತಿಯ ತುರಿಕೆಗೆ ಪರಿಹಾರ (Remedy for itchy scalp): 
ಟೀ ಟ್ರೀ ಆಯಿಲ್ ಅನ್ನು ನಿಯಮಿತವಾಗಿ ಬಳಸುವುದರಿಂದ, ಈ ಎಣ್ಣೆಯಿಂದ ತಯಾರಿಸಿದ ಹೇರ್ ಮಾಸ್ಕ್ ಬಳಸುವುದರಿಂದ  ನೆತ್ತಿಯಲ್ಲಿ ತುರಿಕೆ ಮತ್ತು ಶುಷ್ಕತೆಯ ಸಮಸ್ಯೆಯನ್ನು ನಿವಾರಿಸಬಹುದು. 


ಇದನ್ನೂ ಓದಿ- White Hair Remedies: ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸರಳ ಮದ್ದುಗಳು


ಕೂದಲಿನ ಬೆಳವಣಿಗೆ (Hair Growth): 
ಟೀ ಟ್ರೀ ಆಯಿಲ್ ಬಳಕೆಯು  ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರಲ್ಲಿರುವ ನಂಜುನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತದೆ. 


ಹೇನಿನ ಸಮಸ್ಯೆಯಿಂದ ಮುಕ್ತಿ (Free from lice problem): 
ಟೀ ಟ್ರೀ ಆಯಿಲ್ ಅನ್ನು ಕೂದಲಿಗೆ ಹಚ್ಚುವುದರಿಂದ ಇದರ ಕೀಟ ನಾಶಕ ಪರಿಣಾಮವು ಹೇನಿನ ಮೊಟ್ಟೆಗಳನ್ನು ನಾಶಪಡಿಸುತ್ತದೆ. ಹಾಗಾಗಿ, ಟೀ ಟ್ರೀ ಆಯಿಲ್ ಕೂದಲಿನಿಂದ ಪರೋಪಜೀವಿಗಳನ್ನು (ಹೇನು) ತೆಗೆದುಹಾಕಲು ತುಂಬಾ ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.