ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಸೂರ್ಯನು ಪ್ರತಿ ತಿಂಗಳು ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಸೂರ್ಯನು ಆತ್ಮವಿಶ್ವಾಸ, ಯಶಸ್ಸು,  ಮಾರ್ಗದರ್ಶಕ ಮತ್ತು ಶಕ್ತಿಯ ಪ್ರತೀಕ. ಸೂರ್ಯ ಸಂಕ್ರಮಣವು ಎಲ್ಲಾ 12 ರಾಶಿಯವರ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ. ಅಕ್ಟೋಬರ್ 17 ರಂದು, ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ತುಲಾ ರಾಶಿಯ ಅಧಿಪತಿ ಶುಕ್ರ. ಇದು ಐಷಾರಾಮಿ, ಸಂತೋಷ ಮತ್ತು ಪ್ರೀತಿಯ ಗ್ರಹವಾಗಿದೆ. ಶುಕ್ರನ ಚಿಹ್ನೆಯಲ್ಲಿ ಸೂರ್ಯನ ಪ್ರವೇಶವು 5 ರಾಶಿಚಕ್ರದ ಜನರಿಗೆ ಮಂಗಳಕರವಾಗಿ ಸಾಬೀತಾಗಲಿದೆ. 


COMMERCIAL BREAK
SCROLL TO CONTINUE READING

ಸೂರ್ಯನ ಸಂಚಾರವು ಈ ರಾಶಿಯವರಿಗೆ ನೀಡಲಿದೆ ಶುಭ ಫಲ : 
ವೃಷಭ ರಾಶಿ :  ಸೂರ್ಯನು ತುಲಾ ರಾಶಿಯನ್ನು ಪ್ರವೇಶಿಸುತ್ತಿರುವುದು  ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ವೃಷಭ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.  ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಉದ್ಯೋಗ ಮತ್ತು ಬಡ್ತಿ ಸಿಗಲಿದೆ. 


ಇದನ್ನೂ ಓದಿ : ಮನೆಯಲ್ಲಿ ಈ ರೀತಿಯ ಕನ್ನಡಿ ಇಟ್ಟಿದ್ದರೆ ಎದುರಾಗುವುದು ಆರ್ಥಿಕ ಸಮಸ್ಯೆ, ಕಾಡುವುದು ದಟ್ಟ ದಾರಿದ್ರ್ಯ


ಸಿಂಹ ರಾಶಿ : ಸೂರ್ಯನ ರಾಶಿ ಬದಲಾವಣೆಯು ಸಿಂಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಲಾಭ ತಂದು ಕೊಡಲಿದೆ. ನಿಂತು ಹೋಗಿದ್ದ ಕೆಲಸಗಳು ಚುರುಕು ಪಡೆಯಲಿವೆ. ಆರೋಗ್ಯ ಚೆನ್ನಾಗಿರುತ್ತದೆ. ಕೆಲಸದ ಒತ್ತಡ ನಿಮ್ಮನ್ನು ಕಾಡುತ್ತದೆಯಾದರೂ, ಕೆಲಸದಲ್ಲಿ ಸಿಗುವ ಯಶಸ್ಸಿನಿಂದ ಸಂತೋಷ ಹೆಚ್ಚುವುದು.  


ಧನು ರಾಶಿ :  ಸೂರ್ಯನ ಸಂಚಾರವು ಧನು ರಾಶಿಯವರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಗೆ ಸಂಬಂಧಿಸಿದ ಕೆಲವು ಉತ್ತಮ ಮಾಹಿತಿಯನ್ನು ಪಡೆಯಬಹುದು. ಬಡ್ತಿ ಅಥವಾ ಹೊಸ ಜವಾಬ್ದಾರಿಯನ್ನು ಪಡೆಯಬಹುದು. ಸಂಬಳ ಹೆಚ್ಚಾಗುವ ಸಾಧ್ಯತೆಗಳಿವೆ. ಹಠಾತ್ ಹಣದ ಲಾಭವೂ ಆಗಬಹುದು. ವ್ಯಾಪಾರದಲ್ಲಿಯೂ ಲಾಭವಾಗಲಿದೆ. 


ಇದನ್ನೂ ಓದಿ : Name Astrology: ಈ ಹೆಸರಿನವರು ಜೀವನದಲ್ಲಿ ಖ್ಯಾತಿ ಗಳಿಸುತ್ತಾರೆ, ಇದ್ದಕ್ಕಿದ್ದಂತೆ ಅದೃಷ್ಟ ಹೊಳೆಯುತ್ತದೆ!


ಮಕರ ರಾಶಿ : ತುಲಾ ರಾಶಿಗೆ ಸೂರ್ಯನ ಪ್ರವೇಶದಿಂದ ಮಕರ ರಾಶಿಯವರಿಗೆ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ. ನೀವು ಧಾರ್ಮಿಕ ಪ್ರವಾಸಕ್ಕೆ ಹೋಗಬಹುದು. ಆರ್ಥಿಕ ಲಾಭವಾಗಲಿದೆ.  ಗೌರವ ಹೆಚ್ಚಾಗಲಿದೆ. 


ಮೀನ ರಾಶಿ : ಸೂರ್ಯನ ರಾಶಿಚಕ್ರದ ಬದಲಾವಣೆಯು ಮೀನ ರಾಶಿಯವರಿಗೆ ಬಹಳ ಮಂಗಳಕರ ಸಮಯವನ್ನು ತರುತ್ತದೆ. ಈ ಜನರು ಅದೃಷ್ಟದ ಬೆಂಬಲವನ್ನು ಪಡೆಯುತ್ತಾರೆ. ಕೈ ಹಾಕುವ ಎಲ್ಲಾ ಕೆಲಸಗಲ್ಲಿಯೂ ಯಶಸ್ಸು ಸಿಗಲಿದೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.