God's Favorite Sign: ಹಿಂದೂ ಪುರಾಣಗಳ ಪ್ರಕಾರ ಪ್ರತಿಯೊಂದು ರಾಶಿಯ ಮೇಲೆ ಒಂದೊಂದು ದೇವರ ಅನುಗ್ರಹ ಪ್ರಮುಖವಾಗಿರುತ್ತದೆ. ಹೀಗಾಗಿಯೇ ಯಾವ ರಾಶಿಯವರಿಗೆ ಸಮಸ್ಯೆಗಳಿರುತ್ತದೆಯೋ ಆ ಜನರು ಆಯಾ ದೇವರುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಇನ್ನು ಈ ದಿನ ಮಹಾವಿಷ್ಣು ದೇವರಿಗೆ ಪ್ರಿಯವಾದ ಮೂರು ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧನು ರಾಶಿಗೆ ಸೂರ್ಯನ ಪ್ರವೇಶ: ಈ 4 ರಾಶಿಯ ಜನರಿಗೆ ಸುವರ್ಣಕಾಲ..!


ಗುರುವಾರವನ್ನು ಮಹಾವಿಷ್ಣು ದೇವರಿಗೆ ಬಹಳ ಪ್ರಿಯವಾದ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣು ದೇವರನ್ನು ಪೂಜಿಸುವುದು ಮತ್ತು ಉಪವಾಸವನ್ನು ಆಚರಿಸುವುದು ಉತ್ತಮ ಎಂದು ಹೇಳಲಾಗುತ್ತದೆ. ಇನ್ನು ಗುರುವಾರದಂದು ವಿಷ್ಣು ಪೂಜೆ ಮಾಡುವುದರಿಂದ ಈ ಮೂರು ರಾಶಿಗಳಿಗೆ ಅತಿಯಾದ ಸಂಪತ್ತು ಒದಗಿ ಬರುತ್ತದೆ ಎಂಬುದು ನಂಬಿಕೆ.


ಸಿಂಹ, ಕಟಕ ಮತ್ತು ವೃಷಭ ರಾಶಿಯ ಜನರೆಂದರೆ ಮಹಾವಿಷ್ಣುವಿಗೆ ಬಹಳ ಪ್ರೀತಿ. ಈ ರಾಶಿಯ ಜನರ ಮೇಲೆ ಶ್ರೀದೇವರ ಅನುಗ್ರಹ ಹೆಚ್ಚಿರುತ್ತದೆ.


ಸಿಂಹ ರಾಶಿಯವರು ವಿಷ್ಣು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಯಾವಾಗಲೂ ಹೊಂದಿರುತ್ತಾರೆ. ಇದರಿಂದ ಈ ರಾಶಿಯವರಿಗೆ ಆರ್ಥಿಕವಾಗಿ ಯಾವ ಸಮಸ್ಯೆಗಳು ಇರುವುದಿಲ್ಲ. ಉದ್ಯೋಗ ಮತ್ತು ವ್ಯವಹಾರದಲ್ಲಿ ಯಶಸ್ಸು ಇವರನ್ನು ಹುಡುಕಿಕೊಂಡು ಬರುತ್ತದೆ.


ಇನ್ನು ಕರ್ಕಾಟಕ ರಾಶಿಯವರ ಮೇಲೆಯೂ ಸಹ ವಿಷ್ಣುವಿನ ಅನುಗ್ರಹ ಇರುತ್ತದೆ. ಈ ರಾಶಿಯವರು ಹಣಕಾಸಿನ ತೊಂದರೆ ಎದುರಿಸುವುದಿಲ್ಲ. ಅಷ್ಟೇ ಅಲ್ಲದೆ, ಮರಣದ ನಂತರ ಈ ರಾಶಿಯವರಿಗೆ ಸಂಪೂರ್ಣ ಮೋಕ್ಷ ಸಹ ಸಿಗುತ್ತದೆ.


ಮೂರನೇ ರಾಶಿ ವೃಷಭದವರಿಗೂ ಸಹ ಮಹಾವಿಷ್ಣು ಅಭಯ ಎಂದಿಗೂ ಇರುತ್ತದೆ. ಈ ರಾಶಿಯ ಜನರ ಮತ್ತು ಅವರು ಮಾಡುವ ಒಳ್ಳೆಯ ಕಾರ್ಯದ ಮೇಲೆ ವಿಷ್ಣುವಿನ ಆಶೀರ್ವಾದ ಇರುತ್ತದೆ. ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯಲು ಮಹಾವಿಷ್ಣುವಿಗೆ ಪ್ರತೀದಿನ ನಮಸ್ಕರಿಸಿ.


ಇದನ್ನೂ ಓದಿ:  Samudra Shastra: ಇಂತಹ ಕೂದಲು ಉಳ್ಳವರು ಗೆಳೆತನದಲ್ಲಿ ಚಿನ್ನದಂತಿರುತ್ತಾರೆ


ಇನ್ನು ಈ ಫಲಾಫಲಗಳನ್ನು ಪಡೆಯಲು ಸೂರ್ಯೋದಯಕ್ಕೆ ಮೊದಲು ಎದ್ದು ಸ್ನಾನ ಮಾಡಿ, ಬಳಿಕ ದೇವರ ಮನೆಯನ್ನು ಸ್ವಚ್ಛಗೊಳಿಸಿ ದೀಪ ಬೆಳಗಿಸಿ. ಹೀಗೆ ಮಾಡಿದರೆ ಮನೆಯಲ್ಲಿರುವ ದಾರಿದ್ರ್ಯ ದೂರವಾಗಿ ಸಕಲ ನೆಮ್ಮದಿ ನೆಲೆಸುವಂತೆ ಮಹಾವಿಷ್ಣು ಅನುಗ್ರಹಿಸುತ್ತಾರೆ.


(ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee News Kannada ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.