ನಾಳೆಯಿಂದ 5 ದಿನಗಳ ಸಮಯ ಅಪಾಯಕಾರಿ: ಈ ಕೆಲಸ ಮಾಡಲು ಮರೆಯದಿರಿ, ಕಾರಣ ತಿಳಿಯಿರಿ
2022ರ ಮೊದಲ ಪಂಚಕ ನಾಳೆಯಿಂದ ಅಂದರೆ ಜನವರಿ 5ರಂದು ಬುಧವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುತ್ತದೆ ಮತ್ತು ಜನವರಿ 10ರಂದು ಬೆಳಿಗ್ಗೆ 8 ರವರೆಗೆ ಮುಂದುವರಿಯುತ್ತದೆ.
ನವದೆಹಲಿ: ಹೊಸ ವರ್ಷ ಆರಂಭವಾಗಿದ್ದು ಇದರೊಂದಿಗೆ ಈ ವರ್ಷದ ವ್ರತ-ಹಬ್ಬಗಳು, ವಿಶೇಷ ಸಂದರ್ಭಗಳು, ಶುಭ ಮತ್ತು ಅಶುಭ ಮುಹೂರ್ತಗಳ ಸರಣಿಯೂ ಆರಂಭವಾಗಿದೆ. ಮಾಸಿಕ ಶಿವರಾತ್ರಿ(Maha Shivratri)ಯಿಂದ ವರ್ಷವು ಪ್ರಾರಂಭವಾಯಿತು ಮತ್ತು ಈಗ ಪಂಚಕವು ಮೊದಲ ವಾರದಲ್ಲಿಯೇ ಪ್ರಾರಂಭವಾಗಲಿದೆ. ಪಂಚಕಗಳನ್ನು ಧರ್ಮಗ್ರಂಥಗಳಲ್ಲಿ ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ ಮತ್ತು ಈ ಕಾರಣದಿಂದ ಈ ಅವಧಿಯಲ್ಲಿ ಕೆಲವು ಕೆಲಸಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಲ್ಲದಿದ್ದರೆ ಅವು ಜೀವನಕ್ಕೆ ತೊಂದರೆ ತರಬಹುದು.
ಪಂಚಕ ಕಾಲ ಎಂದರೇನು..?
2022ರ ಮೊದಲ ಪಂಚಕ(Panchak) ನಾಳೆಯಿಂದ ಅಂದರೆ ಜನವರಿ 5ರಂದು ಬುಧವಾರ ಸಂಜೆ 7 ಗಂಟೆಗೆ ಪ್ರಾರಂಭ(Panchak January 2022)ವಾಗುತ್ತದೆ ಮತ್ತು ಜನವರಿ 10ರಂದು ಬೆಳಿಗ್ಗೆ 8 ರವರೆಗೆ ಮುಂದುವರಿಯುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಕುಂಭ ಮತ್ತು ಮೀನ ರಾಶಿಯಲ್ಲಿ ಇರುವಾಗ ಆ ಸಮಯವನ್ನು ಪಂಚಕ ಕಾಲ ಎನ್ನುತ್ತಾರೆ. ಈ 5 ದಿನಗಳಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಇದಲ್ಲದೇ ಕೆಲವು ವಿಶೇಷ ಕೆಲಸಗಳೂ ಆಗುವುದಿಲ್ಲ. ಪಂಚಕ ಕಾಲದಲ್ಲಿ ಲಂಕಾಧಿಪತಿಯಾಗಿದ್ದ ರಾವಣನೂ ಸತ್ತ. ಒಬ್ಬ ವ್ಯಕ್ತಿಯು ಪಂಚಕದಲ್ಲಿ ಸತ್ತರ ಆತನ ಕುಟುಂಬದ 5 ಸದಸ್ಯರು ಸಾಯುತ್ತಾರೆ ಅಥವಾ ಅವರು ಮರಣವನ್ನು ಅನುಭವಿಸುತ್ತಾರೆಂದು ನಂಬಲಾಗಿದೆ.
ಇದನ್ನೂ ಓದಿ: Money Plant Tips : ಮನೆಯಲ್ಲಿ ಮರೆತು ಕೂಡ ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ನೆಡಬೇಡಿ! ಇಲ್ಲದಿದ್ದರೆ ತಪ್ಪಿದಲ್ಲ ಸಮಸ್ಯೆ
5 ದಿನಗಳವರೆಗೆ ಈ ಕೆಲಸವನ್ನು ಮಾಡಬೇಡಿ
ಪಂಚಕ ಸಮಯದಲ್ಲಿ ಕುಟುಂಬದ ಸದಸ್ಯರು ಮರಣಹೊಂದಿದರೆ ಅವರ ಅಂತಿಮ ವಿಧಿಗಳನ್ನು ವಿಶೇಷ ರೀತಿಯಲ್ಲಿ ನಡೆಸಬೇಕು. 4 ಮೋತಿಚೂರು ಲಡ್ಡು ಅಥವಾ ತೆಂಗಿನಕಾಯಿಯನ್ನು ಸಾವನ್ನಪ್ಪಿದ ವ್ಯಕ್ತಿಯೊಂದಿಗೆ ಇಡಬೇಕು. ಇದರಿಂದ ಕೌಟುಂಬಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ.
ಪಂಚಕದಲ್ಲಿ ಬಂಕ್ ಬೆಡ್(Bunk Beds)ಗಳನ್ನು ತಯಾರಿಸಬೇಡಿ ಅಥವಾ ಖರೀದಿಸಬೇಡಿ.
ನೀವು ಮನೆಯನ್ನು ನಿರ್ಮಿಸುತ್ತಿದ್ದರೆ ಮೇಲ್ಛಾವಣಿಯನ್ನು ಹಾಕಬೇಡಿ ಅಥವಾ ಬಾಗಿಲು ಚೌಕಟ್ಟನ್ನು ಮಾಡಬೇಡಿ. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಪಂಚಕ ಕಾಲ(Panchak Time)ದಲ್ಲಿ ದಕ್ಷಿಣ ದಿಕ್ಕಿಗೆ ಪ್ರಯಾಣಿಸಬಾರದು. ಹೀಗೆ ಮಾಡುವುದು ಅಶುಭ. ವಾಸ್ತವವಾಗಿ ದಕ್ಷಿಣವನ್ನು ಯಮನ ದಿಕ್ಕು ಎಂದು ಪರಿಗಣಿಸಲಾಗುತ್ತದೆ.
ಪಂಚಕ ಕಾಲದಲ್ಲಿ ಹುಲ್ಲು, ಕಟ್ಟಿಗೆ ಇತ್ಯಾದಿಗಳನ್ನು ಕೂಡ ಸಂಗ್ರಹಿಸಬಾರದು.
ಇದನ್ನೂ ಓದಿ: Financial Crisis: ಆರ್ಥಿಕ ಬಿಕ್ಕಟ್ಟನ್ನು ಕೊನೆಗೊಳಿಸುತ್ತದೆ ವೀಳ್ಯದೆಲೆಯ ಒಂದು ಸಣ್ಣ ಪರಿಹಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.