ನವದೆಹಲಿ: ಅಂಗೈಯ ವಿನ್ಯಾಸ ಮತ್ತು ಗೆರೆಗಳನ್ನು ನೋಡುವ ಮೂಲಕ ಭವಿಷ್ಯದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಪಡೆಯಬಹುದು. ಒಬ್ಬ ವ್ಯಕ್ತಿಯು ಜೀವನದಲ್ಲಿ ಎಷ್ಟು ಅದೃಷ್ಟಶಾಲಿಯಾಗಿರುತ್ತಾನೆಂಬುದು ಆತನ ಅದೃಷ್ಟ ರೇಖೆ(Auspicious Symbol On Palm)ಯಿಂದ ತಿಳಿಯುತ್ತದೆ. ಜೀವನದಲ್ಲಿ ಎಷ್ಟು ಅದೃಷ್ಟ ಇರುತ್ತದೆ ಅನ್ನೋದು ಅಂಗೈಯಲ್ಲಿರುವ ಕೆಲ ವಿಶೇಷ ಚಿಹ್ನೆಗಳಿಂದಲೂ ತಿಳಿಯುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯು ವ್ಯವಹಾರದಲ್ಲಿ ಯಶಸ್ವಿಯಾಗುತ್ತಾನೆಯೇ ಅಥವಾ ಆತ ಕೆಲಸದಲ್ಲಿ ಪ್ರಗತಿ ಹೊಂದುತ್ತಾನೆಯೇ ಎಂಬುದರ ಕುರಿತು ತಾಳೆ ರೇಖೆಗಳು ಹೇಳುತ್ತವೆ. ಒಬ್ಬ ವ್ಯಕ್ತಿ ಎಷ್ಟು ಅದೃಷ್ಟಶಾಲಿ ಅನ್ನೋದರ ಬಗ್ಗೆ ಹಸ್ತಸಾಮುದ್ರಿಕ ಶಾಸ್ತ್ರ ಏನು ಹೇಳಿದೆ ತಿಳಿಯಿರಿ.  


COMMERCIAL BREAK
SCROLL TO CONTINUE READING

ಅದೃಷ್ಟ ರೇಖೆ (Fate Line)


ಹಸ್ತಸಾಮುದ್ರಿಕ ಶಾಸ್ತ್ರ(Palmistry)ದ ಪ್ರಕಾರ ಮಣಿಕಟ್ಟಿನಿಂದ ಶನಿ ಪರ್ವತದವರೆಗೆ ಹೋಗುವ ರೇಖೆಯನ್ನು ಅದೃಷ್ಟ ರೇಖೆ(Fate Line) ಎಂದು ಕರೆಯಲಾಗುತ್ತದೆ. ವಿಧಿಯ ರೇಖೆಯು ಕಂಕಣದಿಂದ ನೇರವಾಗಿ ಶನಿಯ ಪರ್ವತಕ್ಕೆ ಹೋದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಅಂಗೈಯಲ್ಲಿರುವ ಅದೃಷ್ಟ ರೇಖೆಯು ಶನಿ ಪರ್ವತವನ್ನು ತಲುಪಿ ಎರಡು ಭಾಗಗಳಾಗಿ ವಿಭಜನೆಗೊಂಡು ಗುರು ಪರ್ವತದ ಮೇಲೆ ಒಂದು ಭಾಗವನ್ನು ಸಂಧಿಸಿದರೆ ಅಂತಹವರಿಗೆ ಉನ್ನತ ಸ್ಥಾನ ಮತ್ತು ಗೌರವ ಸಿಗುತ್ತದೆ. ಮತ್ತೊಂದೆಡೆ ವಿಧಿ ರೇಖೆಯು ಕಂಕಣದಿಂದ ಹೊರಬಂದು ಶನಿ ಪರ್ವತವನ್ನು ಕತ್ತರಿಸದೆ ತಲುಪಿದರೆ, ಅಂತಹ ಜನರ ಜೀವನಲದ್ಲಿ ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲವಂತೆ. ಇಂತವರ ಜೀವನವು ನಿರಾಳವಾಗಿ ಸಾಗುತ್ತದೆ ಅಂತಾ ಹೇಳಲಾಗಿದೆ.


ಇದನ್ನೂ ಓದಿ: ನೀವು ಅನುಸರಿಸುವ ಈ ಅಭ್ಯಾಸಗಳು ಜೀವನದಲ್ಲಿ ಶನಿಯ ಪ್ರಕೋಪ ಹೆಚ್ಚಿಸುತ್ತದೆ


ತಲೆ ರೇಖೆ (Brain Line)


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಸೂರ್ಯನ ರೇಖೆಯ ಉದ್ದಕ್ಕೂ ತಲೆ ರೇಖೆ(Brain Line)ಯನ್ನು ಹೊಂದುವುದು ತುಂಬಾ ಮಂಗಳಕರವಾಗಿದೆ. ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ತಮ್ಮ ಅಂಗೈಯಲ್ಲಿ ಇಂತಹ ರೇಖೆಗಳ ಸಂಯೋಜನೆಯನ್ನು ಹೊಂದಿರುವವರಿಗೆ ಹಣ ಮತ್ತು ಸಂಪತ್ತಿನ ಕೊರತೆಯಿರುವುದಿಲ್ಲ. ಇದಲ್ಲದೆ ಇಂತಹ ಜನರು ಎಲ್ಲಾ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಅದೇ ರೀತಿ ಯಾರ ಅಂಗೈಯಲ್ಲಿ ಸೂರ್ಯನ ಎರಡು ನೇರ ರೇಖೆಗಳು ರೂಪುಗೊಳ್ಳುತ್ತವೆಯೋ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾರ ಕೈಯಲ್ಲಿ ಈ ರೇಖೆ ಇರುತ್ತದೋ ಅಂತಹವರಿಗೆ ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆ ಸಿಗುತ್ತದೆ. ಅಲ್ಲದೆ ಇಂತಹ ಜನರು ಅದೃಷ್ಟದಲ್ಲಿ ಕೂಡ ಶ್ರೀಮಂತ(Wealth Line)ರಾಗಿರುತ್ತಾರೆ.


ಸೂರ್ಯನ ರೇಖೆಯ ಮೇಲೆ ಮಂಗಳಕರ ಗುರುತು


ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಯಾರ ಅಂಗೈ ಬಲವಾಗಿಲ್ಲವೋ ಅಥವಾ ಸೂರ್ಯನ ರೇಖೆಯಿಲ್ಲವೋ, ಅಂತವರು ತಡವಾಗಿ ಕೆಲವು ಕೆಲಸಗಳಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಂದೆಡೆ ಸೂರ್ಯನ ರೇಖೆಯ ಮೇಲೆ ತ್ರಿಕೋನ, ಶಂಖ, ಬಾರ್ಲಿ ಮುಂತಾದ ಮಂಗಳಕರ ಚಿಹ್ನೆಗಳು ಇದ್ದರೆ ವ್ಯಕ್ತಿಯು ಬಹಳಷ್ಟು ಯಶಸ್ಸನ್ನು ಪಡೆಯುತ್ತಾನೆಂದು ನಂಬಲಾಗಿದೆ.


ಇದನ್ನೂ ಓದಿ: Astrology : ಈ ಅಕ್ಷರದ ಹೆಸರಿನ ಹುಡುಗಿಯರಿಗೆ ಇರಲ್ಲ ಹಣದ ಕೊರತೆ : ಇವರಿಗಿರುತ್ತೆ ಲಕ್ಷ್ಮಿದೇವಿಯ ವಿಶೇಷ ಅನುಗ್ರಹ!


(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.