ಈ 2 ರತ್ನಗಳು ತುಂಬಾ ಪರಿಣಾಮಕಾರಿ ಮತ್ತು ಅಪಾಯಕಾರಿ!: ಧರಿಸುವ ಮುನ್ನ ಇದನ್ನು ತಿಳಿದುಕೊಳ್ಳಿ
ಜ್ಯೋತಿಷ್ಯಶಾಸ್ತ್ರದ ಪ್ರಕಾರ ರತ್ನದ ಅಲೆಗಳಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಆದರೆ ಎಲ್ಲರೂ ರತ್ನವನ್ನು ಧರಿಸಲು ಸಾಧ್ಯವಿಲ್ಲ. ರತ್ನಗಳನ್ನು ಬಹಳ ಎಚ್ಚರಿಕೆಯಿಂದ ಧರಿಸಬೇಕು.
ನವದೆಹಲಿ: ರತ್ನ ಶಾಸ್ತ್ರ(Ratna Shastra)ದಲ್ಲಿ ಒಂದೊಂದು ಗ್ರಹಕ್ಕೂ ಬೇರೆ ಬೇರೆ ರತ್ನಗಳ ಬಗ್ಗೆ ತಿಳಿಸಲಾಗಿದೆ. ಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸಲು ಜ್ಯೋತಿಷಿಗಳು ಶಿಫಾರಸು ಮಾಡುತ್ತಾರೆ. ರತ್ನದ ಅಲೆಗಳಿಂದ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಪರಿಹರಿಸಲಾಗುತ್ತದೆ. ಆದರೆ ಎಲ್ಲರೂ ರತ್ನವನ್ನು ಧರಿಸಲು ಸಾಧ್ಯವಿಲ್ಲ. ರತ್ನಗಳನ್ನು ಬಹಳ ಎಚ್ಚರಿಕೆಯಿಂದ ಧರಿಸಬೇಕು. ಜ್ಯೋತಿಷ್ಯದಲ್ಲಿ 2 ರತ್ನಗಳನ್ನು ಅತ್ಯಂತ ಶಕ್ತಿಯುತ ಮತ್ತು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಈ ಎರಡು ರತ್ನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ವಜ್ರ ರತ್ನ (Diamond Gemstone)
ವಜ್ರ(Diamond Gemstone)ವನ್ನು 9 ರತ್ನಗಳಲ್ಲಿ ಅತ್ಯಂತ ಅಮೂಲ್ಯ ಮತ್ತು ಕಠಿಣವೆಂದು ಪರಿಗಣಿಸಲಾಗಿದೆ. ಇದನ್ನು ಶುಕ್ರನ ರತ್ನವೆಂದು ಪರಿಗಣಿಸಲಾಗಿದೆ. ಇದನ್ನು ಧರಿಸುವುದರಿಂದ ಸಂಪತ್ತು ಮತ್ತು ಸಂತೋಷವು ಹೆಚ್ಚಾಗುತ್ತದೆ. ಇದಲ್ಲದೆ ಈ ರತ್ನದಿಂದ ವೈವಾಹಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ ಈ ರತ್ನ ಬದುಕಿನಲ್ಲಿ ಗ್ಲಾಮರ್ ಹೆಚ್ಚಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಆದರೆ ವಜ್ರವನ್ನು ಪ್ರದರ್ಶನಕ್ಕೆ ಧರಿಸಬಾರದು. ಮಧುಮೇಹ ಮತ್ತು ರಕ್ತ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ವಜ್ರವನ್ನು ಧರಿಸಬಾರದು. ವೈವಾಹಿಕ ಜೀವನದಲ್ಲಿ ಈಗಾಗಲೇ ಯಾವುದೇ ಸಮಸ್ಯೆ ಇದ್ದರೆ, ಇದನ್ನು ಧರಿಸಬಾರದು. ಮತ್ತೊಂದೆಡೆ ವಜ್ರದೊಂದಿಗೆ ಓನಿಕ್ಸ್ ಅಥವಾ ಹವಳವನ್ನು ಧರಿಸುವುದು ಅಪಾಯಕಾರಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: Oicron Variant: ರೋಗನಿರೋಧಕ ಶಕ್ತಿ ಹೆಚ್ಚಿಸಲು ಹೋಗಿ ಲಿವರ್ ಡ್ಯಾಮೇಜ್ ಮಾಡಿಕೊಳ್ಳಬೇಡಿ..!
ನೀಲಮಣಿ ರತ್ನ (Sapphire Gemstone)
ಇದು ಶನಿಯ ರತ್ನ. ಶನಿ ಗ್ರಹದ ದುಷ್ಪರಿಣಾಮಗಳನ್ನು ನಿವಾರಿಸಲು ನೀಲಮಣಿ ರತ್ನ(Sapphire Gemstone)ವನ್ನು ಧರಿಸಲಾಗುತ್ತದೆ. ಅದನ್ನು ಧರಿಸುವಾಗ ವಿಶೇಷ ಕಾಳಜಿ ವಹಿಸಬೇಕು. ಈ ರತ್ನವನ್ನು ಪರೀಕ್ಷೆ ಮಾಡದೆ ಧರಿಸಿದರೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ತಪ್ಪು ಸಲಹೆಯೊಂದಿಗೆ ಧರಿಸುವುದು ನಿಮ್ಮ ಜೀವನವನ್ನು ಹಾಳುಮಾಡುತ್ತದೆ. ನೀಲಮಣಿ ಧರಿಸುವ ಮೊದಲು ಅದನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಕಬ್ಬಿಣ ಅಥವಾ ಬೆಳ್ಳಿಯ ಲೋಹದಲ್ಲಿ ನೀಲಮಣಿಯನ್ನು ಧರಿಸುವುದು ಒಳ್ಳೆಯದು. ಶನಿವಾರದಂದು ಎಡಗೈಯಲ್ಲಿ ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಚೌಕಾಕಾರದ ನೀಲಮಣಿಯನ್ನು ಧರಿಸುವುದು ಹೆಚ್ಚು ಮಂಗಳಕರವೆಂದು ಸಾಬೀತುಪಡಿಸುತ್ತದೆ. ನೀಲಮಣಿಯನ್ನು ಧರಿಸುವ ಮೊದಲು ಅದನ್ನು ಶನಿದೇವ ಮತ್ತು ಶಿವನಿಗೆ ಅರ್ಪಿಸಬೇಕು.
ಇದನ್ನೂ ಓದಿ: ಈ 4 ಅಭ್ಯಾಸಗಳಿಂದಾಗಿ ಸಂಗಾತಿಯನ್ನು ದ್ವೇಷಿಸಲು ಪ್ರಾರಂಭಿಸುತ್ತಾರೆ ಮಹಿಳೆಯರು!
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.