ನವದೆಹಲಿ : ಮದುವೆ ಸಮಯದಲ್ಲಿ ಹುಡುಗ-ಹುಡುಗಿಯರ ಜಾತಕ ನೋಡಲಾಗುತ್ತದೆ. ಹಾಗಿದ್ದರೂ ಎಷ್ಟೋ ಬಾರಿ, ಹುಡುಗ ಹುಡುಗಿಯ ಮಧ್ಯೆ ಹೊಂದಾಣಿಕೆ ಕಾಣಿಸುವುದೇ ಇಲ್ಲ. ಇದರ ಹಿಂದಿನ ಕಾರಣ ಆ ವ್ಯಕ್ತಿಯ ಸ್ವಭಾವದ ಕೆಲವು ನ್ಯೂನತೆಗಳು ಮತ್ತು ಗುಣಗಳಾಗಿರುತ್ತವೆ. ಜ್ಯೋತಿಷ್ಯದಲ್ಲಿ (Astrology), ಪ್ರತಿಯೊಂದು ರಾಶಿಚಕ್ರ ಚಿಹ್ನೆಯ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೇಳಲಾಗಿದೆ. ಅಂದರೆ, ವ್ಯಕ್ತಿಯ ಸ್ವಭಾವದ ಹಿಂದೆ, ಅವನ ರಾಶಿಚಕ್ರದ ಚಿಹ್ನೆಯು (Zodiac sign) ಸಹ ಕಾರಣವಾಗಿರುತ್ತದೆ. ಬಹಳ ಬೇಗ ಕೋಪಗೊಳ್ಳುವ ಮತ್ತು ಯಾವಾಗಲೂ ತಮ್ಮ ಗಂಡ ತಾನು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಹಠ ಮಾಡುವ ಹೆಣ್ಣು ಮಕ್ಕಳನ್ನು ನೋಡಿರಬಹುದು. 


COMMERCIAL BREAK
SCROLL TO CONTINUE READING

ಈ ರಾಶಿಚಕ್ರದ ಹುಡುಗಿಯರು ಪ್ರಾಬಲ್ಯದ ಸ್ವಭಾವವನ್ನು ಹೊಂದಿರುತ್ತಾರೆ  :
ಮೇಷ ರಾಶಿ : ಮೇಷ ರಾಶಿಯ (Aries) ಹುಡುಗಿಯರು ನಿರ್ಭಯ ಮತ್ತು ಧೈರ್ಯಶಾಲಿಗಳು. ಆದರೆ ಬಹಾ ಬೇಗನೇ  ಕೋಪಗೊಳ್ಳುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳ ಮುಂದೆ ಯಾರ ಮಾತೂ ನಡೆಯುವುದಿಲ್ಲ. ಅವರು ಯಾರ ಮಾತನ್ನೂ ಕೇಳುವುದಿಲ್ಲ. ಈ ರಾಶಿಯ (Zodiac Sign) ಹೆಣ್ಣು ಮಕ್ಕಳು ತನ್ನ ಜೀವನ ಸಂಗಾತಿಯನ್ನು ತನ್ನ ಜೀವನದುದ್ದಕ್ಕೂ ಆಳುತ್ತಾರೆ.  


ಇದನ್ನೂ ಓದಿ : Gemology: ಬೆರಳಿನಲ್ಲಲ್ಲ, ದೇಹದ ಈ ಭಾಗದಲ್ಲಿ ರತ್ನ ಧರಿಸುವುದರಿಂದ ಸಿಗುತ್ತೆ ಅಧಿಕ ಲಾಭ


ಸಿಂಹ : ಸಿಂಹ ರಾಶಿಯ (Leo) ಜನರು ತುಂಬಾ ಶಕ್ತಿಶಾಲಿ ಮತ್ತು ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ. ಈ ಜನರು ತಮ್ಮ ಅಭಿಪ್ರಾಯವನ್ನು ಬಹಳ ಬಲವಾಗಿ ಇತರರ ಮುಂದೆ ಇಡಬಲ್ಲರು. ಈ ರಾಶಿಚಕ್ರದ ಹುಡುಗಿಯರ ಈ ಸ್ವಭಾವವು ಅವರ ಗಂಡನಿಗೆ ತಲೆನೋವಾಗಿ ಪರಿಣಮಿಸುತ್ತದೆ. ಈ ರಾಶಿಯವರು ಎಲ್ಲಾ ವಿಚಾರದಲ್ಲೂ ತಮ್ಮ ಆಸೆಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. 


ಕನ್ಯಾ ರಾಶಿ : ಅಂದಹಾಗೆ , ಕನ್ಯಾ ರಾಶಿಯ (Virgo) ಹುಡುಗಿಯರು ಉತ್ತಮ ಜೀವನ ಸಂಗಾತಿ ಎಂದು ಸಾಬೀತುಪಡಿಸುತ್ತಾರೆ. ಈ ರಾಶಿಯ ಹೆಣ್ಣು ಮಕ್ಕಳು ತನ್ನ ಗಂಡನ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ  ತನ್ನ ಗಂಡನ ಇಚ್ಛೆಗೆ ಬದಲು ತನಗೆ ಏನು ಬೇಕು ಎನ್ನುವುದಕ್ಕೆ ಆದ್ಯತೆ ನೀಡುತ್ತಾರೆ. 


ಇದನ್ನೂ ಓದಿ : ಮನೆಯ ಸುಖ ಶಾಂತಿ ಸಮೃದ್ದಿಯನ್ನೇ ಕಸಿದುಕೊಳ್ಳುತ್ತದೆ ಈ ಒಂದು ಸಣ್ಣ ತಪ್ಪು, ನೀವು ಮಾಡುತ್ತಿದ್ದರೆ ಇಂದೇ ತಿದ್ದಿಕೊಳ್ಳಿ


ಮಕರ: ಮಕರ ರಾಶಿಯ (Capricorn) ಹುಡುಗಿಯರು ಗಂಡನನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಅವರು ಯಾವಾಗಲೂ ತಮ್ಮ ಸ್ವಂತ ಇಚ್ಛೆಯಂತೆಯೇ ನಡೆದುಕೊಳ್ಳುತ್ತಾರೆ. ಎಲ್ಲವೂ ತಾನು ಅಂದು ಕೊಂಡಂತೆ ನಡೆಯಬೇಕು ಎಂದು ಬಯಸುತ್ತಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.