ನವದೆಹಲಿ : ಕೊರೊನಾದಿಂದ 2 ವರ್ಷಗಳಿಂದ ಉದ್ಯೋಗದ ಚಿಂತೆಯಲ್ಲಿದ್ದ ಜನರು ಹೊಸ ವರ್ಷದಿಂದ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕೆಲವರು ಉದ್ಯೋಗದ ನಿರೀಕ್ಷೆಯಲ್ಲಿದ್ದರೆ, ಇನ್ನು ಕೆಲವರು ಉದ್ಯೋಗವನ್ನು ಬದಲಾಯಿಸಲು ಕಾಯುತ್ತಿದ್ದಾರೆ. ಬಡ್ತಿ-ಇನ್‌ಕ್ರಿಮೆಂಟ್‌ ಪಡೆಯಲು ಹಲವರು ಕಾಯುತ್ತಿದ್ದಾರೆ. ಒಟ್ಟಾರೆಯಾಗಿ, 2022 ರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, 2022 ಸಾಕಷ್ಟು ನಿರೀಕ್ಷೆ ಭರವಸೆಗಳನ್ನೂ ಮೂಡಿಸಿದೆ. ಈ  4 ರಾಶಿಯ ಜನರಿಗೆ (Zodiac sign), 2022 ನೇ  ವರ್ಷವು ಬಹಳಷ್ಟು ಶುಭ ಫಲಗಳನ್ನು ನೀಡಲಿದೆ. 


COMMERCIAL BREAK
SCROLL TO CONTINUE READING

ಹೊಳೆಯಲಿದೆ ಈ ರಾಶಿಚಕ್ರದ ಚಿಹ್ನೆಗಳ ವೃತ್ತಿಜೀವನ  : 
ವೃಷಭ ರಾಶಿ: 
2022 ರ ವರ್ಷವು ವೃಷಭ ರಾಶಿಯ (Taurus) ಜನರ ವೃತ್ತಿಜೀವನಕ್ಕೆ ವರದಾನವಾಗಲಿದೆ. ವೃತ್ತಿಜೀವನದಲ್ಲಿ ಒಂದರ ನಂತರ ಒಂದರಂತೆ ಉತ್ತಮ ಅವಕಾಶಗಳು ಬರಲಿವೆ. ಅದು ಅವರ ಅದೃಷ್ಟವನ್ನು ತೆರೆಯಲಿದೆ. ಸಂದರ್ಶನ-ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ. ಗುರುವಿನ ಕೃಪೆಯಿಂದ ಬಡ್ತಿ ಸಿಗಲಿದೆ. ಒಟ್ಟಾರೆಯಾಗಿ, ಈ ವರ್ಷವು ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. 


ಇದನ್ನೂ ಓದಿ : ಶನಿ ಅಮಾವಾಸ್ಯೆಯ ದಿನವೇ ಸಂಭವಿಸಲಿದೆ ಸೂರ್ಯ ಗ್ರಹಣ, ಯಾರ ಮೇಲಾಗಲಿದೆ ಪರಿಣಾಮ ?


ಕರ್ಕ ರಾಶಿ :
ಕರ್ಕಾಟಕ ರಾಶಿಯ (Cancer) ಜನರು 2022 ರ ಆರಂಭದಲ್ಲಿ ವೃತ್ತಿಜೀವನದ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಸಮಯ ಕಳೆದಂತೆ ಪರಿಸ್ಥಿತಿಯು ಅನುಕೂಲಕರವಾಗಿರುತ್ತದೆ. ಸರ್ಕಾರಿ ನೌಕರಿ ಬಯಸುವ ಜನರ ಕನಸು ಈ ವರ್ಷ ಈಡೇರಲಿದೆ. ಇತರರು ತಮ್ಮ ಆಯ್ಕೆಯ ಕೆಲಸವನ್ನು ಪಡೆಯುತ್ತಾರೆ.  


ಧನು ರಾಶಿ: 
ಧನು ರಾಶಿಯ (Sagittarius) ಜನರು ಉದ್ಯೋಗ ಮತ್ತು ವೃತ್ತಿಯಲ್ಲಿ ಸಾಕಷ್ಟು ಲಾಭವನ್ನು ಗಳಿಸುತ್ತಾರೆ. ದೀರ್ಘಕಾಲದವರೆಗೆ ಉದ್ಯೋಗ ಸಂದರ್ಶನಕ್ಕೆ ತಯಾರಿ ನಡೆಸುತ್ತಿರುವ ಜನರು, ಈ ವರ್ಷ (New year horoscope) ಯಶಸ್ಸು ಪಡೆಯುತ್ತಾರೆ. ಉತ್ತಮ ಸ್ಥಾನಮಾನ ಸಿಗಲಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸುವ ಜನರು ಕೂಡಾ ಯಶಸ್ಸನ್ನು ಪಡೆಯಲಿದ್ದಾರೆ. ವಿಶೇಷವಾಗಿ ವರ್ಷದ ಕೊನೆಯ ತ್ರೈಮಾಸಿಕವು ತುಂಬಾ ಮಂಗಳಕರವಾಗಿರುತ್ತದೆ.


ಇದನ್ನೂ ಓದಿ : Surya Grahan 2021 : ಡಿ. 4 ರಂದು ವರ್ಷದ ಕೊನೆಯ ಸೂರ್ಯಗ್ರಹಣ : ಅಂದು ಏನು ಮಾಡಬೇಕು, ಮಾಡಬಾರದು?


ಕುಂಭ:
2022 ರ ವರ್ಷವು ಕುಂಭ ರಾಶಿಯವರಿಗೆ  (Aquarius) ತಮ್ಮ ವೃತ್ತಿಜೀವನದಲ್ಲಿ ಅಪಾರ ಪ್ರಯೋಜನಗಳನ್ನು ನೀಡುತ್ತದೆ. ಅಲ್ಲದೆ, ಆದಾಯವು (Money horoscope) ಹೆಚ್ಚಾಗಲಿದೆ. ಸ್ಥಾನ ಮತ್ತು ಹಣ ಎರಡನ್ನೂ ಪಡೆಯುತ್ತೀರಿ. ಉದ್ಯಮಿಗಳು ದೊಡ್ಡ ಲಾಭಪಡೆಯಲಿದ್ದಾರೆ. ಒಟ್ಟಾರೆಯಾಗಿ, ಈ ವರ್ಷವು ವೃತ್ತಿಜೀವನದ ವಿಷಯದಲ್ಲಿ ಬಹಳ ಫಲಪ್ರದವಾಗಿರಲಿದೆ.  

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.