ಸದಾ ಗೆಲ್ಲುವ ತವಕದಲ್ಲಿರುತ್ತಾರೆ ಈ ನಾಲ್ಕು ರಾಶಿಯವರು ..! ನಿಮ್ಮ ರಾಶಿ ಇದರಲ್ಲಿದೆಯೇ ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ , ಕೆಲವೊಂದು ರಾಶಿಯ ಜನರು, ಪ್ರತಿ ವಿಷಯದಲ್ಲೂ ಗೆಲ್ಲುವ ತವಕ ಹೊಂದಿರುತ್ತಾರೆ. ಎಂಥಹ ಪರಿಸ್ಥಿತಿಯಲ್ಲಿಯೂ ಇವರು ಸೋಲಲು ಇಷ್ಟಪಡುವುದಿಲ್ಲ.
ನವದೆಹಲಿ : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ (Astrology), ಕೆಲವೊಂದು ರಾಶಿಯ ಜನರು, ಪ್ರತಿ ವಿಷಯದಲ್ಲೂ ಗೆಲ್ಲುವ ತವಕ ಹೊಂದಿರುತ್ತಾರೆ. ಎಂಥಹ ಪರಿಸ್ಥಿತಿಯಲ್ಲಿಯೂ ಇವರು ಸೋಲಲು ಇಷ್ಟಪಡುವುದಿಲ್ಲ. ತಾವು ಯಾವ ಕೆಲಸವನ್ನು ಮಾಡಬೇಕೆಂದು ಬಯಸುತ್ತಾರೆಯೋ ಅವರು ಆ ಕಾರ್ಯವನ್ನು ಮಾಡಿಯೇ ತೀರುತ್ತಾರೆ. ಕೈಗೆತ್ತಿಕೊಂಡ ಕೆಲಸವನ್ನು ಇವರು ಅರ್ಧಕ್ಕೆ ನಿಲ್ಲಿಸುವುದಿಲ್ಲ. ಇವರಿಗೆ ಗೆಲ್ಲುವ ಉತ್ಸಾಹವಿರುತ್ತದೆ. ಪ್ರತಿಯೊಂದು ಸನ್ನಿವೇಶದಲ್ಲೂ ಯಶಸ್ಸನ್ನು ಪಡೆಯುವ ರಾಶಿಚಕ್ರ ಚಿಹ್ನೆಗಳ ಬಗ್ಗೆ ಜ್ಯೋತಿಷ್ಯದಲ್ಲಿ ಹೇಳಲಾಗಿದೆ.
ಮೇಷ: ಈ ರಾಶಿಯ (Zodiac sign) ಜನರು ತುಂಬಾ ಹಠಮಾರಿ. ಅವರ ಈ ಸ್ವಭಾವವು ವೃತ್ತಿಜೀವನದಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಅವರು ನಿಗದಿಪಡಿಸಿದ ಗುರಿಯನ್ನು ಸಾಧಿಸಿದ ನಂತರವೇ ನಿಟ್ಟುಸಿರು ಬಿಡುತ್ತಾರೆ. ಮಂಗಳನ ಪ್ರಭಾವವು ಅವರನ್ನು ನಿರ್ಭೀತ ಮತ್ತು ಧೈರ್ಯಶಾಲಿಗಳನ್ನಾಗಿ ಮಾಡುತ್ತದೆ (mars impat on zodiac) . ಇದು ಇವರು ಯಶಸ್ವಿಯಾಗಲು ಸಹಾಯ ಮಾಡುತ್ತದೆ.
ಇದನ್ನೂ ಓದಿ : ಭೂಮಿಗೆ ಭಾರ ಎನ್ನುವಂತಿರುತ್ತಾರೆ ಇಂಥಹ ಜನರು, ಇವರೊಂದಿಗೆ ಬೆರೆತರೆ ನಿಮ್ಮ ಜೀವನವು ಹಾಳಾದೀತು ..!
ತುಲಾ: ತುಲಾ ರಾಶಿಯವರಿಗೆ (Libra) ಗೆಲುವಿನ ಹಂಬಲವಿರುತ್ತದೆ. ಅವರು ಕಠಿಣ ಪರಿಶ್ರಮದ ಮೂಲಕ ಯಾವುದೇ ಗುರಿಯನ್ನು ಸಾಧಿಸುತ್ತಾರೆ. ಹಿಡಿದ ಕೆಲಸ ಸಾಧಿಸದ ಹೊರತು ಹೆಜ್ಜೆ ಹಿಂದೆ ಇಡುವುದಿಲ್ಲ. ಹಿಡಿದ ಕೆಲಸವನ್ನು ಸಂಪೂರ್ಣ ಶೃುದ್ದೆಯಿಂದ ಮಾಡಿ ಮುಗಿಸುತ್ತಾರೆ. ತಮ್ಮ ವೃತ್ತಿ ಜೀವನದಲ್ಲಿ ಬಹಳ ಎತ್ತರಕ್ಕೆ ಏರುತ್ತಾರೆ.
ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ (Scorpio) ಜನರು ನಿರ್ಭೀತರು, ಸಾಹಸಿಗಳು ಸ್ವಾರ್ಥಿಗಳು ಆಗಿರುತ್ತಾರೆ. ಅವರಿಗೆ ಗೆಲುವು ಸಾಧಿಸುವುದು ಮುಖ್ಯವಾಗಿರುತ್ತದೆ. ಇದಕ್ಕಾಗಿ ಅವರು ಯಾವುದೇ ಹಂತಕ್ಕೆ ಹೋಗುತ್ತಾರೆ. ಈ ಜನರೊಂದಿಗೆ ಸ್ಪರ್ಧಿಸುವುದು ಸುಲಭವಲ್ಲ. ಅವರು ತಮ್ಮ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ.
ಇದನ್ನೂ ಓದಿ : Maha Shivaratri: ಮಹಾಶಿವರಾತ್ರಿಯಂದು ಈ ವಿಶೇಷ ರೀತಿ ಶಿವನನ್ನು ಆರಾಧಿಸಿದರೆ, ನಿಮ್ಮೆಲ್ಲಾ ಆಸೆಗಳು ಈಡೇರುತ್ತವೆ
ಮಕರ ರಾಶಿ : ಮಕರ ರಾಶಿಯವರು (Capricorn) ಶ್ರಮಜೀವಿಗಳು, ತಾವು ನಿರ್ಧರಿಸಿದ ಕೆಲಸವನ್ನು ಮುಗಿಸಿಯೇ ಬಿಡುತ್ತಾರೆ. ಅವರ ಈ ಸ್ವಭಾವದಿಂದಾಗಿ ಅವರು ಹೋದ ಎಲ್ಲಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಾರೆ. ಅವರು ತಮ್ಮ ಕರ್ಮಗಳಿಗೆ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.