Astrology: ಸ್ವಭಾವತಃ ಕೋಪಿಷ್ಠರಾದರೂ ನಿಷ್ಕಲ್ಮಶ ಹೃದಯವಂತರು ಈ ಅಕ್ಷರದ ಜನ
Astrology: ನಿಮ್ಮ ರಾಶಿಚಕ್ರ ಚಿಹ್ನೆ ಮಾತ್ರವಲ್ಲದೆ ನಿಮ್ಮ ಹೆಸರಿನ ಮೊದಲ ಅಕ್ಷರವೂ ನಿಮ್ಮ ಸ್ವಭಾವದ ಬಗ್ಗೆ ಹೇಳುತ್ತದೆ. ಇದರೊಂದಿಗೆ, ನೀವು ಎಷ್ಟು ಬೇಗ ಕೋಪಿಸಿಕೊಳ್ಳುತ್ತೀರಿ ಎಂಬುದನ್ನು ಕೂಡ ಇದರಿಂದಲೇ ತಿಳಿಯಬಹುದು.
Astrology: ವಿವಿಧ ರಾಶಿಗಳ ಜನರ ಸ್ವಭಾವವು ಹೇಗೆ ಭಿನ್ನವಾಗಿರುತ್ತದೆಯೋ ಅದೇ ರೀತಿ ವಿವಿಧ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನ ಜನರ ಸ್ವಭಾವವೂ ವಿಭಿನ್ನವಾಗಿರುತ್ತದೆ. ವಾಸ್ತವವಾಗಿ, ಹೆಸರಿನ ಮೊದಲ ಅಕ್ಷರವು ಜ್ಯೋತಿಷ್ಯಕ್ಕೆ ಸಂಬಂಧಿಸಿದೆ. ಇಂದು ನಾವು ನಿಮಗೆ ಕೆಲವು ಜನರ ಸ್ವಭಾವದ ಬಗ್ಗೆ ತಿಳಿಸಲಿದ್ದೇವೆ. ಅವರು ಸ್ವಭಾವತಃ ತುಂಬಾ ಕೋಪಿಷ್ಠರಾದರೂ ನಿಷ್ಕಲ್ಮಶ ಹೃದಯವವರು ಎಂದು ಹೇಳಲಾಗುತ್ತದೆ.
ಈ ಜನರು ಶುದ್ಧ ಹೃದಯವಂತರು :
'ಬಿ' (B) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನ: ಬಿ (B) ಅಕ್ಷರದಿಂದ ಹೆಸರು ಪ್ರಾರಂಭವಾಗುವ ಜನರು ತುಂಬಾ ಕೋಪಗೊಳ್ಳುತ್ತಾರೆ. ಈ ಜನರು ತಪ್ಪು ಮಾತುಗಳನ್ನು ಸಹಿಸುವುದಿಲ್ಲ ಮತ್ತು ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮ್ಮ ಕೋಪವನ್ನು (Angry) ನಿಯಂತ್ರಿಸುವುದಿಲ್ಲ. ಆದರೆ ನಂತರ ಪಶ್ಚಾತ್ತಾಪಪಡುತ್ತಾರೆ. ತಮ್ಮ ಈ ಸ್ವಭಾವದಿಂದಾಗಿ, ಅವರು ಅನೇಕ ಬಾರಿ ಕೊರಗುವುದೂ ಉಂಟು.
ಇದನ್ನೂ ಓದಿ- Dhanteras 2021: ಧನತ್ರಯೋದಶಿ ದಿನ ಈ ವಸ್ತುಗಳನ್ನು ದಾನ ಮಾಡುವುದರಿಂದ ಹೊಳೆಯುತ್ತೆ ಅದೃಷ್ಟ
'H' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನ: ಎಚ್ (H) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ಯಾವುದೇ ವಿಚಾರಕ್ಕೂ ಬಹಳ ಬೇಗ ಕುಪಿತಗೊಳ್ಳುತ್ತಾರೆ. ವಿಶೇಷವಾಗಿ ಅವರ ಸ್ವಾಭಿಮಾನದ ವಿಷಯಕ್ಕೆ ಬಂದಾಗ, ಅವರು ಅನಿಯಂತ್ರಿತರಾಗುತ್ತಾರೆ. ಆದರೆ ಈ ಜನರು ತುಂಬಾ ಪ್ರೀತಿ (Love) ಮತ್ತು ಕಾಳಜಿಯುಳ್ಳವರು. ಹಾಗೆಯೇ ಆತ್ಮೀಯರ ವಿರುದ್ಧದ ಮಾತಿಗೆ ಕಿವಿಗೊಡುವುದಿಲ್ಲ.
'L' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನ: ಎಲ್ (L) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ತಮ್ಮ ಸ್ವಂತ ಇಚ್ಛೆಯನ್ನು ಚಲಾಯಿಸಲು ಇಷ್ಟಪಡುತ್ತಾರೆ ಮತ್ತು ಅದು ಸಾಧ್ಯವಾಗದಿದ್ದರೆ ಅವರು ಕೋಪಗೊಳ್ಳುತ್ತಾರೆ. ಆದರೆ ಹೃದಯದಲ್ಲಿ ತುಂಬಾ ಮೃದುವಾದ ಕಾರಣ, ಒಮ್ಮೆ ಪ್ರೀತಿಯಿಂದ ಹೇಳಿದರೆ, ಅವರು ಒಪ್ಪುತ್ತಾರೆ.
ಇದನ್ನೂ ಓದಿ - Money Tips: ಹಣದ ಕೊರತೆಯಿಂದ ಬೇಸತ್ತಿದ್ದೀರಾ? ಈ ಕ್ರಮಗಳನ್ನು ತೆಗೆದುಕೊಳ್ಳಿ, ಅದೃಷ್ಟ ಬದಲಾಗುತ್ತದೆ
'P' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನ: ಈ ಜನರು ಬೇಗನೆ ಕೋಪಗೊಳ್ಳುತ್ತಾರೆ, ಆದರೆ ಅವರು ಕೋಪಗೊಂಡರೆ, ಅವರು ದೀರ್ಘಕಾಲ ಶಾಂತವಾಗುವುದಿಲ್ಲ. ಈ ಜನರಿಗೆ ಹೇಗೆ ದುಃಖವಾಗುತ್ತದೆ ಮತ್ತು ಇತರರಿಗೆ ತಮ್ಮ ದುಃಖದಲ್ಲಿ ಸಹಾಯ ಮಾಡುವುದು ಹೇಗೆ ಎಂದು ಚೆನ್ನಾಗಿ ತಿಳಿದಿದೆ.
'S' ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನ: ಎಸ್ (S) ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಜನರು ತುಂಬಾ ಸ್ವಾಭಿಮಾನಿಗಳು ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಒಂದು ಪದವನ್ನು ಸಹ ಕೇಳುವುದಿಲ್ಲ. ಈ ಜನರು ಬೇಗನೆ ಕೋಪಗೊಳ್ಳುತ್ತಾರೆ ಆದರೆ ಅವರು ಬೇಗನೆ ಶಾಂತವಾಗುತ್ತಾರೆ.
ಸೂಚನೆ: ಈ ಲೇಖನದಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ