Palm Reading for Health Problems : ಜ್ಯೋತಿಷ್ಯ ಶಾಸ್ತ್ರದಂತೆಯೇ ಹಸ್ತಸಾಮುದ್ರಿಕ ಶಾಸ್ತ್ರಕ್ಕೂ ವಿಶೇಷ ಪ್ರಾಮುಖ್ಯತೆ ಇದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ವ್ಯಕ್ತಿಯ ವ್ಯಕ್ತಿತ್ವ, ಆರ್ಥಿಕ ಸ್ಥಿತಿ, ಮದುವೆ, ವೃತ್ತಿ ಜೊತೆಗೆ ಆರೋಗ್ಯದ ಬಗ್ಗೆಯೂ ತಿಳಿದುಕೊಳ್ಳಬಹುದು. ಒಬ್ಬ ವ್ಯಕ್ತಿಯು ಯಾವ ರೀತಿಯ ಕಾಯಿಲೆಗೆ ಬಲಿಯಾಗಬಹುದು ಎಂಬುದನ್ನು ಅಂಗೈಯ ರೇಖೆಗಳು  ಕೂಡಾ ಹೇಳುತ್ತವೆಯಂತೆ. ಹಸ್ತದಲ್ಲಿರುವ ಯಾವ ರೇಖೆ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತದೆ ಎಂಬುದನ್ನು ತಿಳಿಯೋಣ. 


COMMERCIAL BREAK
SCROLL TO CONTINUE READING

ಹಸ್ತ ರೇಖೆಗಳ ಮೂಲಕ ಆರೋಗ್ಯವನ್ನು ತಿಳಿಯಿರಿ :
 ಯಾರ ತೋರು ಬೆರಳು ಮತ್ತು ಕಿರುಬೆರಳುಗಳ ಮೇಲೆ ಅಡ್ಡ ರೇಖೆಗಳು ಇರುತ್ತವೆಯೋ ಅವರ ಆರೋಗ್ಯ ಉತ್ತಮವಾಗಿರುವುದಿಲ್ಲ. 


ಇದನ್ನೂ ಓದಿ : Zodiac Signs : ಅತೀ ಚಿಕ್ಕ ವಯಸ್ಸಿನಲ್ಲೇ ಯಶಸ್ಸು ಪಡೆಯುತ್ತಾರೆ ಈ ರಾಶಿಯ ಯುವಕರು


ಅಂಗೈಯಲ್ಲಿ ಗುರು ಮತ್ತು ಬುಧ ಪರ್ವತದ ಮೇಲೆ ಬಲೆಯ ರೀತಿಯ ಆಕಾರ ಇರುವುದು ಒಳ್ಳೆಯದಲ್ಲ. ಅಂತಹವರು ಮಧುಮೇಹ, ಥೈರಾಯ್ಡ್ ಅಥವಾ ಯಕೃತ್ತಿನ ಸಮಸ್ಯೆಗಳಂತಹ ಹಾರ್ಮೋನ್ ಸಂಬಂಧಿತ ಕಾಯಿಲೆಗಳಿಂದ ಬಳಲುತವ ಸಾಧ್ಯತೆ ಹೆಚ್ಚು ಇರುತ್ತದೆ. 


ತಮ್ಮ ಕೈಯಲ್ಲಿ ಮಂಗಳ ಪ್ರದೇಶದ ಬಳಿ ಬಿಳಿ ಚುಕ್ಕೆಗಳನ್ನು ಹೊಂದಿದ್ದರೆ ಅಥವಾ ಎರಡೂ ಕೈಗಳ ಮಧ್ಯದಲ್ಲಿ ಹೃದಯ ರೇಖೆ  ತುಂಡಾದ ಸ್ಥಿತಿಯಲ್ಲಿದ್ದಾರೆ ಅಂತಹವರಿಗೆ ಕಿಡ್ನಿ ಸಂಬಂಧಿ ಕಾಯಿಲೆ  ಬರುವ ಅಪಾಯವಿರುತ್ತದೆ. ಆದರೆ ಇವರಿಗೆ ಇರುವ ರೋಗದ ಬಗ್ಗೆ ಬಹಳ ತಡವಾಗಿ ತಿಳಿಯುತ್ತದೆ. 


ಅಂಗೈಯಲ್ಲಿ ಚಂದ್ರ ಪರ್ವತದ ಮೇಲೆ ನಕ್ಷತ್ರಪುಂಜದ ಚಿಹ್ನೆ ಇದ್ದರೆ, ಚಂದ್ರ ಪರ್ವತದ ಕೆಳಭಾಗವು ಎತ್ತರದಲ್ಲಿದ್ದು, ಅನೇಕ ಗೆರೆಗಳಿಂದ ಕತ್ತರಿಸಲ್ಪಟ್ಟಿದ್ದರೆ ಅಂತಹ ಜನರ ಕಾಯಿಲೆಗೆ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. 


ಇದನ್ನೂ ಓದಿ : ಐಶಾರಾಮಿ ಬದುಕು ಬದುಕುತ್ತಾರೆ ಈ ರಾಶಿಯವರು, ಎಲ್ಲರೂ ಮೆಚ್ಚುವಂಥ ಜೀವನ ಇವರದ್ದು


ಹಳದಿ ಉಗುರುಗಳು ಮತ್ತು ಅವುಗಳ ಮೇಲೆ ಕಲೆಗಳನ್ನು ಹೊಂದಿರುವ ಜನರು ಕರುಳಿನ ಕಾಯಿಲೆಯನ್ನು ಹೊಂದಿರಬಹುದು. ಅಂಥಹವರು ಕಾಲಕಾಲಕ್ಕೆ ವೈದ್ಯರನ್ನು ಸಂಪರ್ಕಿಸಬೇಕು.  


ಆರೋಗ್ಯ ರೇಖೆ ಅಥವಾ ಆರೋಗ್ಯ ರೇಖೆಯಲ್ಲಿ ಅಡ್ಡ ಗುರುತು ಇರುವುದು ಕೂಡಾ ಅಶುಭ. ಅಂತಹ ವ್ಯಕ್ತಿಯು ಇದ್ದಕ್ಕಿದ್ದಂತೆ ಅಪಘಾತಕ್ಕೆ ಬಲಿಯಾಗಬಹುದು. ಅಂತಹ ಜನರ ಜೀವಿತಾವಧಿ ಬಹಳ ಕಡಿಮೆಯಿರುತ್ತದೆ. 


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.