ನವದೆಹಲಿ: ಭಾರತದಲ್ಲಿ ನಾವು ನೋಡುವ ಸಾಮಾನ್ಯ ರೋಗವೆಂದರೆ ಮಧುಮೇಹ. ಈಗ ಇದು ವಯಸ್ಸಾದವರಿಗೆ ಸೀಮಿತವಾಗಿಲ್ಲ, ಎಲ್ಲಾ ವಯೋಮಾನದವರಿಗೂ ಈ ರೋಗ ವ್ಯಾಪಿಸಿದೆ. ಇಂದು ಚಿಕ್ಕ ಮಕ್ಕಳು ಕೂಡ ಮಧುಮೇಹ(Diabetes)ದಿಂದ ಬಳಲುತ್ತಿದ್ದಾರೆ. ಇದು ಮಾನವ ದೇಹವನ್ನು ಒಳಗಿನಿಂದ ದುರ್ಬಲಗೊಳಿಸುವ ಕಾಯಿಲೆಯಾಗಿದೆ.


COMMERCIAL BREAK
SCROLL TO CONTINUE READING

ಭಾರತದಲ್ಲಿದ್ದಾರೆ ಲಕ್ಷಾಂತರ ಮಧುಮೇಹ ರೋಗಿಗಳು


ಭಾರತವನ್ನು ವಿಶ್ವದ ಮಧುಮೇಹದ(Diabetes) ರಾಜಧಾನಿ ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಅತಿಹೆಚ್ಚು ಮಧುಮೇಹ ರೋಗಿಗಳನ್ನು ಕಾಣಬಹುದು. ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ ಪ್ರಕಾರ, 2015ರಲ್ಲಿ ಭಾರತದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ಸುಮಾರು 6.91 ಮಿಲಿಯನ್ ಗಿಂತಲೂ ಹೆಚ್ಚು ಅಂತಾ ಹೇಳಲಾಗಿದೆ.   


ಇದನ್ನೂ ಓದಿ: Weight Loss Tips : ವ್ಯಾಯಾಮವಿಲ್ಲದೆ ನೀವು ತೂಕ ಇಳಿಸಿಕೊಳ್ಳಬೇಕೆ? ಹಾಗಿದ್ರೆ, ಈ ಸ್ಪೆಷಲ್ ಚಹಾ ಸೇವಿಸಿ!


ಅನೇಕ ರೋಗಗಳಿಗೆ ಮೂಲ ಮಧುಮೇಹ


ಮಧುಮೇಹವು ಆರೋಗ್ಯದ ಮೇಲೆ ಆಳವಾದ ಪರಿಣಾಮ ಬೀರುತ್ತದೆ. ಇದರಲ್ಲಿ ಆಯಾಸ, ಚರ್ಮದ ಸಮಸ್ಯೆ(Body Organs) ಹಾಗೂ ಪಾದಗಳ ಮರಗಟ್ಟುವಿಕೆ, ಪದೇ ಪದೇ ಮೂತ್ರ ವಿಸರ್ಜನೆ, ಬಾಯಿ ಒಣಗುವುದು ಮುಂತಾದ ಹಲವು ಸಮಸ್ಯೆಗಳಿದ್ದು ಇದನ್ನು ನಿಯಂತ್ರಿಸಲು ನಿಯಮಿತವಾಗಿ ರಕ್ತದಲ್ಲಿನ ಸಕ್ಕರೆ ಪರೀಕ್ಷೆ ಮಾಡಿಸಿಕೊಳ್ಳಬೇಕು.


ಈ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ


ಮಧುಮೇಹದಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದರೆ ಮುಂದಿನ 5 ರಿಂದ 10 ವರ್ಷಗಳಲ್ಲಿ ದೇಹದ ಅನೇಕ ಭಾಗಗಳ ಮೇಲೆ ದುಷ್ಪಣಾಮ ಬೀರುತ್ತದೆ. ಮೇದೋಜ್ಜೀರಕ ಗ್ರಂಥಿ(Pancreas) ಯ ಮೂಲಕ ತಯಾರಾಗುವ ಇನ್ಸುಲಿನ್(Insulin) ಮೂಲಕ ದೇಹದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲಾಗುತ್ತದೆ. ಇನ್ಸುಲಿನ್ ಅಧಿಕವಾಗಿ ಉತ್ಪತ್ತಿಯಾಗಲು ಪ್ರಾರಂಭಿಸಿದರೆ ಮೂತ್ರಪಿಂಡಗಳು, ಕಣ್ಣುಗಳು ಮತ್ತು ಕಾಲುಗಳ ನರಗಳು ಪರಿಣಾಮ ಬೀರುತ್ತವೆ.


ಇದನ್ನೂ ಓದಿ: Acne: ನೀವೂ ಈ ತಪ್ಪುಗಳನ್ನು ಮಾಡುತ್ತೀರಾ; ಮುಖದ ಮೇಲೆ ಮೊಡವೆಗೆ ಕಾರಣವಾಗಬಹುದು


ಮಧುಮೇಹ ತುಂಬಾ ಅಪಾಯಕಾರಿ


ಇದರಿಂದ ಕಾಲುಗಳಲ್ಲಿ ರಕ್ತಸಂಚಾರ ಕಡಿಮೆಯಾಗಿ ಹಲವು ನರಗಳು ಸ್ಥಗಿತಗೊಳ್ಳುವ ಅಪಾಯವಿದ್ದು, ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಿದೆ. ಮೆದುಳಿಗೆ ರಕ್ತ ಪೂರೈಕೆಯು ಪರಿಣಾಮ ಬೀರಿದರೆ ನಂತರ ಮೆದುಳಿನ ಸ್ಟ್ರೋಕ್ ಸಹ ಸಂಭವಿಸಬಹುದು.


ಇದನ್ನು ತಪ್ಪಿಸಲು ಏನು ಮಾಡಬೇಕು?


ಮಧುಮೇಹ ರೋಗಿಗಳಿಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ನಿಮ್ಮ ಜೀವನಶೈಲಿ(Lifestyle)ಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದು. ಅತಿಯಾಗಿ ಸಿಹಿ ತಿನ್ನುವ ಅಭ್ಯಾಸವನ್ನು ತಪ್ಪಿಸಬೇಕು, ಪ್ರತಿದಿನ ವ್ಯಾಯಾಮ ಮಾಡಿ, ಕಡಿಮೆ ಕ್ಯಾಲೋರಿ ಹೊಂದಿರುವ ಆರೋಗ್ಯಕರ ಆಹಾರ ಸೇವಿಸಿ, ಇದರಲ್ಲಿ ಹಸಿರು ಎಲೆಗಳ ತರಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಫೈಬರ್ ಆಹಾರವನ್ನು ಸೇವಿಸುವುದರಿಂದ ಮಧುಮೇಹದ ಅಪಾಯವೂ ಕಡಿಮೆಯಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.