ಬೆಂಗಳೂರು : ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂಡು ವಸ್ತುವಿನಲ್ಲಿಯೂ ವಿಶೇಷ ಶಕ್ತಿ ಇರುತ್ತದೆ. ಅದು ಧನಾತ್ಮಕ ಶಕ್ತಿ ಅಥವಾ ನಕಾರಾತ್ಮಕ ಶಕ್ತಿಯಾಗಿರಬಹುದು. ಇದೇ ಕಾರಣಕ್ಕೆ ನಿಮ್ಮ ಮನೆ ಅಥವಾ ಕಚೇರಿಯ ಸುತ್ತ ನೆಗೆಟಿವ್ ಎನರ್ಜಿ ಇರುವ ಯಾವ ವಸ್ತುವನ್ನೂ ಇಟ್ಟುಕೊಳ್ಳಬಾರದು. ನಕಾರಾತ್ಮಕ ಶಕ್ತಿಯು ಹಣಕಾಸಿನ ತೊಂದರೆಗಳು, ಪ್ರಗತಿಯಲ್ಲಿ ಅಡಚಣೆ, ಅನಾರೋಗ್ಯ ಮತ್ತು ಸಂಬಂಧಗಳಲ್ಲಿ ಅಪಶ್ರುತಿಯನ್ನು ಉಂಟುಮಾಡುತ್ತದೆ. ಸುತ್ತಲೂ ಸಕಾರಾತ್ಮಕ ಗುಣಗಳಿರುವ ವಸ್ತುಗಳನ್ನು ಇಟ್ಟುಕೊಳ್ಳುವುದರಿಂದ   ಆಶೀರ್ವಾದ, ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ವಾಸ್ತು ಶಾಸ್ತ್ರದಲ್ಲಿ, ಕೆಲವು ಮರಗಳು ಮತ್ತು ಸಸ್ಯಗಳು ಸಂಪತ್ತನ್ನು ಗಳಿಸಲು ಬಹಳ ಮಂಗಳಕರವೆಂದು ಹೇಳಲಾಗಿದೆ. ಈ ಗಿಡಗಳು ಮನೆಯಲ್ಲಿದ್ದರೆ ಹಣವು ಅಯಸ್ಕಾಂತದಂತೆ ಆಕರ್ಷಿತವಾಗುತ್ತದೆ ಎಂದು ಹೇಳಲಾಗುತ್ತದೆ. 2024 ವರ್ಷವು ಪ್ರಾರಂಭವಾಗಲಿದೆ. ಮುಂದಿನ ವರ್ಷ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಬೇಕಾದರೆ ಈ ಸಸ್ಯಗಳನ್ನು ಮನೆಯಲ್ಲಿ ನೆಡಿ. 


COMMERCIAL BREAK
SCROLL TO CONTINUE READING

ಈ ಸಸ್ಯಗಳು ಹಣವನ್ನು ಆಕರ್ಷಿಸುತ್ತವೆ  : 
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಈ ಸಸ್ಯಗಳನ್ನು ನೆಟ್ಟರೆ ವಾತಾವರಣದಲ್ಲಿ ಸಕಾರಾತ್ಮಕತೆ ಹೆಚ್ಚಿಸುತ್ತದೆ. ಬದಲಿಗೆ, ಇದು ಮನೆಗೆ ಹಣದ ಹರಿವನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಒದಗಿಸುತ್ತದೆ. 2024 ವರ್ಷ ಪ್ರಾರಂಭವಾಗುವ ಮೊದಲು ಮನೆಯಲ್ಲಿ ಯಾವ ಸಸ್ಯಗಳನ್ನು ನೆಡಬೇಕು ಎನ್ನುವುದು ತಿಳಿದಿರೇಕು. 


ಇದನ್ನೂ ಓದಿ : ಹಣಕ್ಕೆ ಸಂಬಂಧಿಸಿದ ಈ ಒಂದು ವಿಷಯ ನಿಮ್ಮನ್ನು ಕೋಟ್ಯಾಧೀಶರನ್ನಾಗಿ ಮಾಡುತ್ತೆ!


ರಾತ್ರಿ ರಾಣಿ  : ನಿಮ್ಮ ಮನೆಯಲ್ಲಿ  ರಾತ್ರಿ ರಾಣಿ   ಗಿಡವನ್ನು ನೆಡಬೇಕು.  ರಾತ್ರಿ ರಾಣಿ  ಹೂವುಗಳ ಸುಗಂಧವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸಂತೋಷ ಮತ್ತು ಶಾಂತಿಯನ್ನು ನೀಡುತ್ತದೆ. ಇದು ಕುಟುಂಬ ಸದಸ್ಯರ ನಡುವೆ ಪ್ರೀತಿ ಹೆಚ್ಚಿಸಿ ವೈವಾಹಿಕ ಸಂತೋಷವನ್ನು ನೀಡುತ್ತದೆ. ಪ್ರಗತಿ ಮತ್ತು ಸಂಪತ್ತು ಗಳಿಸಲು ಹೊಸ ಮಾರ್ಗಗಳನ್ನು ತೆರೆಯುತ್ತದೆ. 


ಚಂಪಾ : ಚಂಪಾ ಗಿಡಗಳ ವಿಶೇಷತೆ ಎಂದರೆ ಸದಾ ಹಸಿರಾಗಿಯೇ ಇರುತ್ತದೆ. ಇದರ ತಿಳಿ ಹಳದಿ ಹೂವುಗಳು ಸುಂದರವಾಗಿರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತ್ವರಿತವಾಗಿ ನಿವಾರಿಸುತ್ತದೆ. ಚಂಪಾ ಗಿಡ ಇರುವ ಮನೆಯಲ್ಲಿ ಸದಾ ಸಕಾರಾತ್ಮಕತೆ ಇರುತ್ತದೆ. ಕುಟುಂಬದ ಸದಸ್ಯರ ಆರೋಗ್ಯವು ಉತ್ತಮವಾಗಿರುತ್ತದೆ. ಮನೆ ಸಂತೋಷ ಮತ್ತು ಸಮೃದ್ದಿಯಿಂದ ಕೂಡಿರುತ್ತದೆ.  


ಇದನ್ನೂ ಓದಿ : ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಾಗಿದ್ಯಾ? ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ಸುಲಭವಾಗಿ ಹೋಗಲಾಡಿಸಬಹುದು


ಮಲ್ಲಿಗೆ : ಮಲ್ಲಿಗೆ ಗಿಡವು ಅದರ ಆಹ್ಲಾದಕರ ಪರಿಮಳ ಮತ್ತು ಸುಂದರವಾದ ಹೂವುಗಳಿಗೆ ಹೆಸರುವಾಸಿಯಾಗಿದೆ. ಮಲ್ಲಿಗೆ ಗಿಡವನ್ನು ವಾಸ್ತು ಶಾಸ್ತ್ರದಲ್ಲಿ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಗಿಡದಿಂದ ಮನೆಯಲ್ಲಿ ಮನೆ ಮಂದಿಯ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆದಾಯ ಹೆಚ್ಚುತ್ತದೆ. 


ಪಾರಿಜಾತ : ಪಾರಿಜಾತ ಹೂವುಗಳು ತುಂಬಾ ಸುಂದರವಾಗಿರುತ್ತವೆ.  ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದ ಪಾರಿಜಾತ ಮನೆ ಮಂದಿಯ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಎನ್ನುವುದು ನಂಬಿಕೆ. ಈ  ಹೂವು ಮಾನಸಿಕ ಒತ್ತಡ ಕಡಿಮೆ ಮಾಡುತ್ತದೆ. ಮನೆಯಲ್ಲಿ ಯಾವುದೇ ಆರ್ಥಿಕ ಬಿಕ್ಕಟ್ಟು  ಬಾರದಂತೆ ತಡೆಯುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ