Chanakya Niti: ಜೀವನದ ಯಶಸ್ಸಿನ ಹಾದಿಗೆ ಮುಳ್ಳಾಗಲಿವೆ ನಿಮ್ಮ ಈ ಗುಣಗಳು
Chanakya Niti For Life: ಚಾಣಕ್ಯ ನೀತಿಯಲ್ಲಿ ಪ್ರತಿಯೊಬ್ಬರ ಜೀವನಕ್ಕೆ ಅನ್ವಯವಾಗುವ ಹಲವು ಅಂಶಗಳ ಬಗ್ಗೆ ಉಲ್ಲೇಖಿಸಲಾಗಿದೆ. ಆಚಾರ್ಯ ಚಾಣಕ್ಯರ ಪ್ರಕಾರ, ವ್ಯಕ್ತಿಯ ಕೆಲ ಗುಣ, ಸ್ವಭಾವಗಳು ಯಶಸ್ಸಿನ ಹಾದಿಯಲ್ಲಿ ತೊಡುಕುಂಟು ಮಾಡುತ್ತವೆ ಎಂದು ತಿಳಿಸಲಾಗಿದೆ.
Chanakya Niti For Life: ಜೀವನದಲ್ಲಿ ಯಶಸ್ಸು ಗಳಿಸುವುದು ಪ್ರತಿಯೊಬ್ಬರ ಕನಸು. ಅದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಆದರೆ, ಆಚಾರ್ಯ ಚಾಣಕ್ಯರ ಪ್ರಕಾರ, ನಮ್ಮ ಕೆಲವು ಗುಣ-ಸ್ವಭಾವಗಳು ನಮ್ಮ ಯಶಸ್ಸಿನ ಹಾದಿಯಲ್ಲಿ ಮುಳ್ಳಾಗುತ್ತವೆ. ನಮ್ಮ ಕೆಲವು ದುರ್ಗುಣಗಳಿಂದಾಗಿ ನಾವು ಎಷ್ಟೇ ಕಷ್ಟ ಪಟ್ಟು ಶ್ರಮಿಸಿದರೂ ಕೂಡ ಯಶಸ್ಸನ್ನು ಸಾಧಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಲಾಗುತ್ತದೆ. ಆ ಗುಣಗಳು ಯಾವುವು ಎಂದು ತಿಳಿಯೋಣ...
ಜೀವನದ ಯಶಸ್ಸಿನ ಹಾದಿಗೆ ಮುಳ್ಳಾಗಲಿವೆ ನಿಮ್ಮ ಈ ಗುಣಗಳು:
ಸೋಮಾರಿತನ:
ವ್ಯಕ್ತಿ ಎಷ್ಟೇ ಪ್ರತಿಭಾವಂತನಾಗಿದ್ದರೂ ಕೂಡ ಅವನು ಸೋಮಾರಿಯಾಗಿದ್ದರೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ನೀವೂ ಕೂಡ ಯಶಸ್ಸಿನ ಶಿಖರವನ್ನು ಏರಲು ಬಯಸಿದರೆ ನಿಮ್ಮ ಜೀವನದಿಂದ ಸೋಮಾರಿತನವನ್ನು ನಿರ್ಮೂಲನೆ ಮಾಡುವುದು ತುಂಬಾ ಅಗತ್ಯ ಎಂದು ಚಾಣಕ್ಯ ನೀತಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ- Chanakya Niti: ಇಂತಹವರ ಬಳಿ ಎಂದಿಗೂ ಹಣ ನಿಲ್ಲಲ್ಲ
ಅಹಂಕಾರ:
ಯಾವ ವ್ಯಕ್ತಿಗೆ ತನಗೇ ಎಲ್ಲಾ ಗೊತ್ತು ಎಂಬ ಅಹಂ ಭಾವ ಇರುತ್ತದೆಯೋ ಆತ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಜ್ಞಾನ ಮಾತ್ರವಲ್ಲ, ಹಣ, ಕೀರ್ತಿಯ ವಿಷಯದಲ್ಲೂ ಕೂಡ ಅಹಂಕಾರ ಎಂಬುದು ತಲೆಗೇರಿದರೆ ಆತನ ಜೀವನ ಅಲ್ಲಿಗೆ ಅಂತ್ಯ ಕಾಣುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.
ಇದನ್ನೂ ಓದಿ- Chanakya Niti : ಚಾಣಕ್ಯನ ಈ ನೀತಿ ಅನುಸರಿಸಿದರೆ 2023 ರಲ್ಲಿ ನಿಮಗೆ ಹಣದ ಮಳೆ ಸುರಿಯುತ್ತೆ!
ತೋರಿಕೆ:
ಕೆಲವರಿಗೆ ತಮಗೆ ತಿಳಿದಿರುವುದನ್ನು, ತಮ್ಮ ಬಳಿ ಇರುವುದನ್ನು ಎಲ್ಲರ ಮುಂದೆ ತೋರಿಕೆ ಪಡಿಸುವ ಹುಚ್ಚು ಅತಿಯಾಗಿರುತ್ತದೆ. ಅಂತಹವರು, ಎದುರಿಗಿರುವ ಚಿನ್ನದಂತಹ ಅವಕಾಶವನ್ನೂ ಕೂಡ ಕೈ ಬಿಡುತ್ತಾರೆ. ಅವರು ಜೀವನದಲ್ಲಿ ತಮ್ಮ ಬೆನ್ನನ್ನು ತಟ್ಟಿಕೊಳ್ಳುವುದರ ಹೊರತಾಗಿ ಬೇರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.