Diabetes: ಮೆದುಳಿನಿಂದ ಕಾಲಿನ ಬೆರಳುಗಳವರೆಗೆ ಪರಿಣಾಮ ಬೀರುವ ಮತ್ತು ನಿರ್ಧಿಷ್ಟ ಚಿಕಿತ್ಸೆಯೇ ಇಲ್ಲದ ಕಾಯಿಲೆ ಎಂದರೆ ಅದು ಮಧುಮೇಹ. ಡಾ. ಅಶೋಕ್ ಜಿಂಗನ್ ಕಣ್ಣುಗಳಲ್ಲಿ ಕಂಡುಬರುವ ಮಧುಮೇಹದ ಕೆಲ ಗಂಭೀರ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.

COMMERCIAL BREAK
SCROLL TO CONTINUE READING

ಆಗಾಗ್ಗೆ ಬಾಯಾರಿಕೆಯಾಗುವುದು ಹಾಗೂ ಪದೇ ಪದೇ ಮೂತ್ರ ವಿಸರ್ಜನೆಯಾಗುವುದು ಇವಷ್ಟೇ ಮಧುಮೇಹದ ಲಕ್ಷಣಗಳು ಎಂದು ನೀವು ಭಾವಿಸುತ್ತಿದ್ದರೆ, ನೀವು ಮಧುಮೇಹದ ಬಗ್ಗೆ ಸಾಕಷ್ಟು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರ್ಥ.


BLK Max ನ ನಿರ್ದೇಶಕ ಮತ್ತು ಮಧುಮೇಹ ತಜ್ಞ ಡಾ. ಅಶೋಕ್ ಜಿಂಗನ್ ಅವರು ಮುಖ್ಯವಾಗಿ ಕಣ್ಣಿನಲ್ಲಿ ಕಂಡುಬರುವ ಮಧುಮೇಹದ ಕೆಲವು ರೋಗಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ್ದು, ಹಲವು ಸಂದರ್ಭಗಳಲ್ಲಿ ಅವು ರೋಗಿಗೆ ತಿಳಿದಿರುವುದಿಲ್ಲ ಎಂದಿದ್ದಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವುದರಿಂದ ಈ ಲಕ್ಷಣಗಳು ಕಂಡುಬರುತ್ತವೆ ಎಂದು ಅವರು ಹೇಳಿದ್ದಾರೆ. ಮಧುಮೇಹ ರೋಗಿಗಳಿಗೆ ಗ್ಲುಕೋಮಾ ಮತ್ತು ಬಣ್ಣ ಕುರುಡುತನದಂತಹ ಕಣ್ಣುಗಳ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಮತ್ತೊಂದೆಡೆ, ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಇತರ ಕೆಲವು ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ ಎಂದು ಅವರು ಹೇಳಿದ್ದಾರೆ.


ಒಂದು ವೇಳೆ ಔಷಧಿ ಮತ್ತು ಸಮತೋಲಿತ ಆಹಾರದಿಂದಲೂ ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಕಡಿಮೆಯಾಗುತ್ತಿಲ್ಲ ಎಂದಾದಲ್ಲಿ, ಮಧುಮೇಹ ರೋಗಿಗಳ ಈ 4 ಅಭ್ಯಾಸಗಳು ಕಾರಣವಾಗಿವೆ. ಆ ರೋಗಲಕ್ಷಣಗಳು ಯಾವುವು, ಮಧುಮೇಹ ತಜ್ಞ ಡಾ. ಅಶೋಕ್ ಜಿಂಗನ್ ಅವರಿಂದ ತಿಳಿದುಕೊಳ್ಳೋಣ.


ಕಣ್ಣುಗಳಲ್ಲಿ ಪ್ರಕಾಶಮಾನವಾದ ಬೆಳಕು 
ಹಲವು ಬಾರಿ ಪ್ರಕಾಶಮಾನವಾದ ಬೆಳಕು ಅಥವಾ ಸೂರ್ಯನ ಬೆಳಕಿನಲ್ಲಿ ಕಣ್ಣುಗಳ ಕುಕ್ಕುವಿಕೆ ಮತ್ತು ಅದರಿಂದಾಗಿ ದೃಷ್ಟಿ ನಿಂತುಹೋದಂತೆ ಭಾಸವಾಗುತ್ತದೆ. ಇದು ರೆಟಿನಾ ಸಮಸ್ಯೆಯಿಂದ ಸಂಭವಿಸುತ್ತದೆ ಮತ್ತು ರೆಟಿನಾ ಸಮಸ್ಯೆ ಮಧುಮೇಹದಿಂದಲೂ ಸಂಭವಿಸುತ್ತದೆ.


ಡಬಲ್ ವಿಶನ್ 
ಅನೇಕ ಬಾರಿ, ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ, ರೋಗಿಗೆ ಒಂದೇ ವಸ್ತು ಎರಡೆರಡು ಕಾಣಿಸಲಾರಂಭಿಸುತ್ತವೆ. ಇದನ್ನು ಡಬಲ್ ವಿಶನ್ ಎಂದು ಕರೆಯಲಾಗುತ್ತದೆ.


ಕನ್ನಡಕದ ಸಂಖ್ಯೆಯಲ್ಲಿ ಹೆಚ್ಚಳ
ವಯಸ್ಸಿನೊಂದಿಗೆ ಕನ್ನಡಕ ಸಂಖ್ಯೆ ಹೆಚ್ಚಾಗುವುದು ಸಾಮಾನ್ಯವಾಗಿದೆ, ಆದರೆ ಅದು ವೇಗವಾಗಿ ಹೆಚ್ಚಾಗುತ್ತಿದ್ದರೆ, ಅದನ್ನು ಸಾಮಾನ್ಯ ಪರಿಗಣಿಸಬೇಡಿ. ಅಧಿಕ ರಕ್ತದ ಸಕ್ಕರೆಯ ಕಾರಣದಿಂದಾಗಿ ಇದು ಸಂಭವಿಸುತ್ತದೆ.


ಗ್ಲುಕೋಮಾ
ಸಾಮಾನ್ಯವಾಗಿ, ರೋಗಿಗಳು ಗ್ಲುಕೋಮಾದಿಂದ ಬಳಲುತ್ತಿರುವ ಸಾಧ್ಯತೆಗಳು ಮಧುಮೇಹ ರೋಗಿಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಾಗಿರುತ್ತದೆ. ಗ್ಲುಕೋಮಾ ಸಾಮಾನ್ಯವಾಗಿ ಮಸೂರದ ಸುತ್ತ ದ್ರವದ ಅತಿಯಾದ ಸಂಗ್ರಹದಿಂದ ಉಂಟಾಗುತ್ತದೆ, ಇದು ಆಪ್ಟಿಕ್ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ.


ಕುರುಡುತನ
ಅಧಿಕ ರಕ್ತದ ಸಕ್ಕರೆ ಮತ್ತು ಅಧಿಕ ಬಿಪಿ ಎರಡರಲ್ಲೂ ಕುರುಡುತನದ ಅಪಾಯವಿದೆ. ಈ ರೋಗಗಳನ್ನು ನಿಯಂತ್ರಿಸದಿದ್ದರೆ, ಅವು ಕುರುಡುತನಕ್ಕೆ ಕಾರಣವಾಗುತ್ತದೆ.


ಈ ಜನರು ಹೆಚ್ಚು ಅಪಾಯದಲ್ಲಿದ್ದಾರೆ
ಸಾಮಾನ್ಯ ರೆಟಿನಾದ ಸಮಸ್ಯೆಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದೊಂದಿಗೆ ಸಂಬಂಧಿಸಿವೆ. ಮಧುಮೇಹವು ಕಣ್ಣಿನ ಕಾಯಿಲೆ ಮತ್ತು ಕುರುಡುತನದ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಮಧುಮೇಹ ರೋಗಿಗಳು ಆರಂಭಿಕ ಕಣ್ಣಿನ ಪೊರೆಯ ಅಪಾಯವನ್ನು ಮಾತ್ರ ಹೊಂದಿರುವುದಿಲ್ಲ. ಬದಲಿಗೆ, ಅವರ ರೆಟಿನಾಗೆ ಹಾನಿಯಾಗುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತದೆ.


ರೆಟಿನಾಕ್ಕೆ ಯಾವಾಗ ಹಾನಿಯಾಗಬಹುದು?
>> ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಮಧುಮೇಹ ಬಂದಾಗ ಅನೇಕ ಬಾರಿ ರೆಟಿನಾ ಹಾನಿಗೊಳಗಾಗುತ್ತದೆ.
>> ಧೂಮಪಾನವು ರೆಟಿನಾದ ಮೇಲೆ ಹಾನಿಕಾರಕ ಪರಿಣಾಮವನ್ನು ಬೀರುತ್ತದೆ.
>> ರಕ್ತದಲ್ಲಿನ ಸಕ್ಕರೆಯ ಮಟ್ಟವು ಇದ್ದಕ್ಕಿದ್ದಂತೆ ಹೆಚ್ಚಾದರೂ, ರೆಟಿನಾ ಹಾನಿಗೊಳಗಾಗಬಹುದು.


ಇದನ್ನೂ ಓದಿ-ಬೇಸಿಗೆ ಕಾಲದಲ್ಲಿ ರಕ್ತದಲ್ಲಿನ ಹೈ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಇಲ್ಲಿವೆ ಕೆಲ ಅದ್ಬುತ ಡ್ರಿಂಕ್ ಗಳು!


ರೆಟಿನಾವನ್ನು ಹೇಗೆ ರಕ್ಷಿಸಬೇಕು?
ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಆಹಾರವನ್ನು ತೆಗೆದುಕೊಳ್ಳಿ. ಸಿಟ್ರಸ್ ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳನ್ನು ಸೇವಿಸಿ - ಪಾಲಕ, ಕ್ಯಾರೆಟ್, ಡ್ರೈ ಫ್ರೂಟ್, ಕೋಸುಗಡ್ಡೆ, ಬಾದಾಮಿ, ವಾಲ್ನಟ್ಸ್, ಇತ್ಯಾದಿ. ಮೀನನ್ನು ಸೇವಿಸಿ ಏಕೆಂದರೆ ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್ ಹೊಂದಿರುತ್ತದೆ. ನೇರ ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಿ ಮತ್ತು ಸನ್ಗ್ಲಾಸ್ ಧರಿಸಿ. ನಿಯಮಿತವಾಗಿ ಲಘು ವ್ಯಾಯಾಮಗಳನ್ನು ಮಾಡುವುದರಿಂದ ಕೂಡ ರೆಟಿನಾವನ್ನು ಸುರಕ್ಷಿತವಾಗಿರಿಸುತ್ತದೆ.


ಇದನ್ನೂ ಓದಿ-ಬೆಳ್ಳುಳ್ಳಿ-ಈರುಳ್ಳಿ ಸಿಪ್ಪೆಗಳನ್ನು ಎಸೆಯುವ ತಪ್ಪು ನೀವೂ ಮಾಡುತ್ತೀರಾ? ಆಗಾದರೆ ಈ ಲೇಖನ ಒಮ್ಮೆ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.