ಬೆಂಗಳೂರು : ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಹಿಂದೆಂದೂ  ಯಾರು ಕೂಡಾ ಯೋಚಿಸಿರಲಿಕ್ಕಿಲ್ಲ. ಕರೋನಾ (Coronavirus) ಯುಗದಲ್ಲಿ ದೇಹದ ಇಮ್ಯುನ್ ಸಿಸ್ಟಮ್ ಅನ್ನು ಕಾಪಾಡಿಕೊಳ್ಳುವುದರ ಮಹತ್ವ ಬಹುತೇಕ ಎಲ್ಲರಿಗೂ ತಿಳಿದಿದೆ (Low immune system symptoms). ಒಮಿಕ್ರಾನ್ ಮತ್ತು ಅದರ ಉಪ ರೂಪಾಂತರಗಳು ಮತ್ತೆ ಕೆಲವು ದೇಶಗಳಲ್ಲಿ  ತಾಂಡವವಾಡುತ್ತಿದೆ. ಏಷ್ಯಾದ ಕೆಲವು ದೇಶಗಳಲ್ಲಿ ಮತ್ತೊಮ್ಮೆ ಅಲರ್ಟ್ ಜಾರಿಗೊಳಿಸಲಾಗಿದೆ. 


COMMERCIAL BREAK
SCROLL TO CONTINUE READING

ಈ ಎಲ್ಲಾ ರೂಪಾಂತರಗಳನ್ನು ತಪ್ಪಿಸಲು, ಪ್ರತಿರಕ್ಷಣಾ ವ್ಯವಸ್ಥೆಯನ್ನು  ಆರೋಗ್ಯಕರವಾಗಿರುವುದು ಅವಶ್ಯಕವಾಗಿದೆ. ಇದಕ್ಕೂ ಮೊದಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಹೌದು, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿದೆಯೇ ಎನ್ನುವುದನ್ನು ತಿಳಿಯಲು ಯಾವುದೇ ಸಾಧನವನ್ನು ಬಳಸಲಾಗುವುದಿಲ್ಲ.  ದೇಹ ನೀಡುವ ಈ 4 ಸಂಕೇತಗಳಿಂದ ಇದನ್ನೂ ಪತ್ತೆ ಹಚ್ಚಬಹುದು. 


ಇದನ್ನೂ ಓದಿ : ಸಣ್ಣ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗುತ್ತಿದ್ದರೆ ನಿಮ್ಮ ಆಹಾರದಲ್ಲಿರಲಿ ಈ ವಸ್ತುಗಳು


1- ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುವುದು ಮತ್ತು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುವುದು : 
ಒಂದು ವರ್ಷದಲ್ಲಿ ನಿಮಗೆ ಎರಡರಿಂದ ಮೂರು ಬಾರಿ ಶೀತ ನೆಗಡಿಯಾದರೆ ಭಯಪಡುವ ಅಗತ್ಯವಿಲ್ಲ. ಸಾಮಾನ್ಯವಾಗಿ ಶೀತ ನೆಗಡಿಯಾದರೆ (cold) ಅನೇಕರು ಒಂದು ವಾರದಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ ಒಂದು ವಾರ ಅಥವಾ 15 ದಿನಗಳ ನಂತರವೂ ಸಮಸ್ಯೆ ಮುಂದುವರಿದರೆ,  ಅಥವಾ ಆಗಾಗ ಫುಡ್ ಪಾಯಿಸನ್ (food poision) ಆಗುತ್ತಿದ್ದರೆ,  ಅದು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯ ಸಂಕೇತವಾಗಿದೆ.


2- ನಿರಂತರ ಒತ್ತಡವನ್ನು ನಿರ್ವಹಿಸುವುದು :
ಸಾಂದರ್ಭಿಕ ಒತ್ತಡವು ನಿಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುವುದರಿಂದ ಕೆಲವು ರೀತಿಯ ಒತ್ತಡವು ನಮ್ಮ ರೋಗನಿರೋಧಕ (immunity)ಆರೋಗ್ಯ ಮತ್ತು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ನೀವು ದೀರ್ಘಕಾಲದವರೆಗೆ ಒತ್ತಡದಲ್ಲಿದ್ದರೆ, ಅದು ನಿಮ್ಮ ರೋಗನಿರೋಧಕ ಆರೋಗ್ಯಕ್ಕೆ ಹಾನಿಕಾರಕವಾಗಿರುತ್ತದೆ (immunity system). ಅತಿಯಾದ ಒತ್ತಡವು ನಿಮ್ಮನ್ನು ಸೋಂಕಿಗೆ ಗುರಿ ಮಾಡಬಹುದು.  ಇದು ರೋಗದಿಂದ ಚೇತರಿಸಿಕೊಳ್ಳುವ ಸಮಯವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ : Belly Fat: ನೈಸರ್ಗಿಕವಾಗಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ 5 ಆಹಾರಗಳನ್ನು ಸೇವಿಸಿ


3-ಬಾಯಿಯಲ್ಲಿಣ ಹುಣ್ಣು : 
ಬಾಯಿ ಹುಣ್ಣುಗಳು ಮತ್ತು ಆಗಾಗ್ಗೆ ಸರ್ಪಸುತ್ತುಗಳು ನೀವು ಎಲ್ಲೋ ಹರ್ಪಿಸ್ ವೈರಸ್ ನಿಂದ ಬಳಲುತ್ತಿರುವುದನ್ನು ಸೂಚಿಸುತ್ತದೆ. ನೀವು ಈ ವೈರಸ್‌ನೊಂದಿಗೆ ಸಂಪರ್ಕಕ್ಕೆ ಬಂದಾಗ, ಅದು ನಿಮ್ಮ ದೇಹದಲ್ಲಿ ಉಳಿಯುತ್ತದೆ. ಇದು ನಿಮ್ಮನ್ನು ಮತ್ತೆ ಮತ್ತೆ ಈ ಸಮಸ್ಯೆಗೆ ಈಡು ಮಾಡುತ್ತದೆ.  ನೀವು ಒತ್ತಡದಲ್ಲಿರುವಾಗ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಜೀವಕೋಶಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಈ ವೈರಸ್ ಮತ್ತೆ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. 


4-ಔಷಧಗಳು ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಉಂಟುಮಾಡುತ್ತವೆ :
ಕೆಲವು ಔಷಧಿಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ. ಅವುಗಳಲ್ಲಿ ಒಂದು ಕ್ಯಾನ್ಸರ್ ಕೀಮೋಥೆರಪಿ. ಕೆಲವು ಆಟೋ ಇಮ್ಯುನ್ ರೋಗಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ (reason for low immunity). ಇದಲ್ಲದೆ, ಅಲರ್ಜಿಗಳು, ಅಸ್ತಮಾ ಮತ್ತು ಇತರ ಕಾಯಿಲೆಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಪುನರಾವರ್ತಿತ ಆಂಟಿಬಯೋಟಿಕ್ ಬಳಕೆ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಹಾನಿಗೊಳಿಸುತ್ತದೆ. ಆದ್ದರಿಂದ, ಈ ಔಷಧಿಗಳನ್ನು ಸೇವಿಸುವಾಗ ಜಾಗರೂಕರಾಗಿರಬೇಕು.


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್