ಬಹಳ ಸಂದೇಹ ಸ್ವಭಾವದವರಾಗಿರುತ್ತಾರೆ ಈ ಮೂರು ರಾಶಿಯವರು, ಸಂಗಾತಿಯ ಪ್ರತಿ ನಡೆಯ ಮೇಲೆ ಇಟ್ಟಿರುತ್ತಾರೆ ಕಣ್ಣು
ಅನೇಕ ಜನರು ತಮ್ಮ ಸಂಗಾತಿಯ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಟ್ಟಿರುತ್ತಾರೆ. ಇವರು ತಮ್ಮ ಸಂಗಾತಿಯನ್ನು ಎಂದಿಗೂ ನಂಬುವುದಿಲ್ಲ. ತಮ್ಮ ಸಂಗಾತಿಯಾ ಮೇಲೆ ಯಾವಾಗಲೂ ಅನುಮಾನಪಡುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಅನುಮಾನದ ಸಮಸ್ಯೆಯು 3 ರಾಶಿಯವರಿಗೆ ಇರುತ್ತದೆ.
ನವದೆಹಲಿ : ಪ್ರತಿಯೊಬ್ಬ ಮನುಷ್ಯನು ವಿಭಿನ್ನ ಮನಸ್ಥಿತಿ, ಸಾಮರ್ಥ್ಯ, ಮನೋಧರ್ಮ ಮತ್ತು ಅಭ್ಯಾಸಗಳನ್ನು ಹೊಂದಿರುತ್ತಾನೆ. ಇವುಗಳಲ್ಲಿ ಕೆಲವು ವಿಷಯಗಳು ಸಹಜ ಮತ್ತು ಕೆಲವು ಅಭ್ಯಾಸಗಳು ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಇರುತ್ತವೆ. ಜ್ಯೋತಿಷ್ಯದ ಪ್ರಕಾರ (Astrology), ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವ, ನಡವಳಿಕೆ, ವ್ಯಕ್ತಿತ್ವ ಮತ್ತು ಭವಿಷ್ಯವು ಅವನ ರಾಶಿಚಕ್ರದ ಚಿಹ್ನೆಯಿಂದ ಪ್ರಭಾವಿತವಾಗಿರುತ್ತದೆ. ರಾಶಿಚಕ್ರಕ್ಕೆ ಅನುಗುಣವಾಗಿ ವ್ಯಕ್ತಿಯ ಗುಣಗಳು ಮತ್ತು ದೋಷಗಳು ಕಂಡುಬರುತ್ತವೆ (Zodiac sign nature). ಕೆಲವರಿಗೆ ಪ್ರತಿಯೊಂದು ವಿಷಯದಲ್ಲಿಯೂ ಸಂದೇಹ ಪಡುವ ಗುಣವಿರುತ್ತದೆ. ಈ ಮೂರು ರಾಶಿಯವರು ತಮ್ಮ ಸಂಗಾತಿಯನ್ನು ನಂಬುವುದಿಲ್ಲ ಮತ್ತು ಅವರ ಪ್ರತಿಯೊಂದು ಚಟುವಟಿಕೆಯ ಮೇಲೆ ಕಣ್ಣಿಡುತ್ತಾರೆ.
ಈ 3 ರಾಶಿಚಕ್ರದ ಜನರು ಸ್ವಭಾವತಃ ಸಂದೇಹ ಮನೋಭಾವದವರು :
ಮೇಷ ರಾಶಿ : ಮೇಷ ರಾಶಿಯ (Aries)ಜನರು ತುಂಬಾ ಅನುಮಾನಾಸ್ಪದ ಸ್ವಭಾವದವರು. ವಿಶೇಷವಾಗಿ ಈ ರಾಶಿಚಕ್ರದ ಮಹಿಳೆಯರು ಈ ವಿಷಯದಲ್ಲಿ ಬಹಳ ಮುಂದಿರುತ್ತಾರೆ. ಅವರು ತಮ್ಮ ಪತಿ ಅಥವಾ ಸಂಗಾತಿಯನ್ನು ಎಂದಿಗೂ ನಂಬುವುದಿಲ್ಲ. ಅವರು ತಮ್ಮ ಸಂಗಾತಿಯ ಪ್ರತಿಯೊಂದು ಚಟುವಟಿಕೆಯ ಮೇಲೆ ನಿಗಾ ಇಡುತ್ತಾರೆ (Personality by zodiac)
ಇದನ್ನೂ ಓದಿ : ಈ ಮೂರು ವಿಷಯಗಳಲ್ಲಿ ಮುಜುಗರಪಟ್ಟುಕೊಂಡು ಮಾಡಿಕೊಳ್ಳುವ ನಷ್ಟವನ್ನು ಜೀವನ ಪರ್ಯಂತ ಭರಿಸುವುದು ಸಾಧ್ಯವೇ ಇಲ್ಲ
ವೃಷಭ ರಾಶಿ : ವೃಷಭ ರಾಶಿಯ (Taurus)ಜನರು ತಮ್ಮ ಸಂಗಾತಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರಿಬ್ಬರ ನಡುವೆ ಬಲವಾದ ನಂಬಿಕೆಯ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತಾರೆ. ಆದರೆ ಅವರು ಹಾಗೆ ಮಾಡಲು ಸಾಧ್ಯವಾಗುವುದಿಲ್ಲ. ತಮ್ಮ ಸಂಗಾತಿಯ ಮೇಲೆ ಸದಾ ಕಣ್ಣಿಟ್ಟಿ ರುತ್ತಾರೆ. ಆದರೆ ಅವರು ತಮ್ಮ ಸಂಗಾತಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ ಮತ್ತು ಅವನಿಂದಲೂ ಅದನ್ನೇ ನಿರೀಕ್ಷಿಸುತ್ತಾರೆ.
ಧನು ರಾಶಿ : ಧನು ರಾಶಿಯವರು (Sagittarius)ತಮ್ಮ ಸಂಗಾತಿಗೆ ಸ್ವಲ್ಪವೂ ಸ್ಪೇಸ್ ನೀಡುವುದಿಲ್ಲ. ಪ್ರೈವಸಿ ಎನ್ನುವ ಪದವನ್ನು ಅವರು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಅವರು ಯಾವಾಗಲೂ ತಮ್ಮ ಸಂಗಾತಿಯ ಮೇಲೆ ಕಣ್ಣಿಡಲು ಬಯಸುತ್ತಾರೆ. ತಮ್ಮ ಸಂಗಾತಿ ತಮ್ಮೊಂದಿಗೆ ಸಣ್ಣ ವಿಷಯವನ್ನೂ ಹಂಚಿಕೊಳ್ಳದಿದ್ದರೂ ಬಹಳ ಕೋಪಗೊಳ್ಳುತ್ತಾರೆ.
ಇದನ್ನೂ ಓದಿ : Zodiac Sign: ಸಂಬಂಧದ ವಿಷಯದಲ್ಲಿ ತುಂಬಾ ಪ್ರಾಮಾಣಿಕರು ಈ 5 ರಾಶಿಯ ಜನ
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.