ಬೆಂಗಳೂರು : ಶನಿಯ ಸಾಡೇ ಸಾತಿಯಂತೆ ಶನಿ  ಧೈಯವೂ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತದೆ (Shani Sade sati). ಶನಿಯ ಸಾಡೇಸಾತಿಯ ಅವಧಿ ಏಳೂವರೆ ವರ್ಷ. ಆದರೆ ಶನಿಯ ಧೈಯಾ ಅವಧಿ ಎರಡೂವರೆ ವರ್ಷಗಳು (Shani  dhaiya). ಜ್ಯೋತಿಷ್ಯದ (Astrology) ಲೆಕ್ಕಾಚಾರದ ಪ್ರಕಾರ, ಪ್ರಸ್ತುತ ಶನಿಯು ಮಕರ ರಾಶಿಯಲ್ಲಿದೆ. ಏಪ್ರಿಲ್ 29 ರವರೆಗೆ ಶನಿ ಈ ರಾಶಿಯಲ್ಲಿಯೇ ಇರಲಿದ್ದಾನೆ. ನಂತರ ಶನಿಯ ಪ್ರವೇಶ ಕುಂಭ ರಾಶಿಗೆ ಆಗಲಿದೆ. 


COMMERCIAL BREAK
SCROLL TO CONTINUE READING

ಶನಿ ಧೈಯಾದಿಂದ ಮಿಥುನ ಮತ್ತು ತುಲಾ ರಾಶಿಯವರಿಗೆ ಸಿಗಲಿದೆ ಮುಕ್ತಿ :  
ಜ್ಯೋತಿಷ್ಯಶಾಸ್ತ್ರದ ಪ್ರಕಾರ (Astrology), ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಕೆಲವು ರಾಶಿಚಕ್ರ ಚಿಹ್ನೆಗಳು ಧೈಯಾದಿಂದ (Shani  dhaiya) ಮುಕ್ತಿಯನ್ನು ಪಡೆಯುತ್ತವೆ. ಏಪ್ರಿಲ್ 29 ರಂದು, ಶನಿಯು ರಾಶಿಚಕ್ರವನ್ನು ಬದಲಾಯಿಸಿದಾಗ (Zodiac Sign), ಮಿಥುನ ಮತ್ತು ತುಲಾ ರಾಶಿಯ ಜನರು ಶನಿ ಧೈಯಾದಿಂದ ಮುಕ್ತರಾಗುತ್ತಾರೆ. 


ಇದನ್ನೂ ಓದಿ : Budh Ast : ಈ 6 ರಾಶಿಯವರಿಗೆ ಅದೃಷ್ಟ ತರಲಿದ್ದಾನೆ 'ಅಸ್ತ' ಬುಧ : ನಿಮಗೆ ಹಣದ ಸುರಿ ಮಳೆ!


ಮತ್ತೊಂದೆಡೆ, ಶನಿಯು ಜುಲೈ 12 ರಂದು ಮತ್ತೆ ಮಕರ ರಾಶಿಯನ್ನು (Capricorn)ಪ್ರವೇಶಿಸಲಿದ್ದಾನೆ. ಜನವರಿ 17, 2023 ರವರೆಗೆ ಮಕರ ರಾಶಿಯಲ್ಲಿಯೇ ಇರಲಿದ್ದಾನೆ. ಈ ಅವಧಿಯಲ್ಲಿ, ಮಿಥುನ ಮತ್ತು ತುಲಾ ರಾಶಿಯ (Libra) ಮೇಲೆ ಜನರು ಮತ್ತೊಮ್ಮೆ ಶನಿಯ ಹಿಡಿತಕ್ಕೆ ಒಳಗಾಗುತ್ತಾರೆ. ಶನಿಯ ದಶಾದಿಂದ (Shani deshe)ಇವರಿಗೆ  ಜನವರಿ 17, 2023 ರಂದು ಸಂಪೂರ್ಣ ಮುಕ್ತಿ ಸಿಗಲಿದೆ. ಇದೆ ವೇಳೆ ಈ ಸಂದರ್ಭದಲ್ಲಿ ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ  ಶನಿಯ ಧೈಯಾ ಆರಂಭವಾಗಲಿದೆ. ಮೀನರಾಶಿಯವರಿಗೆ ಶನಿಗ್ರಹದ ಸಾಡೇ ಸಾತಿ (Sade Sathi)ಆರಂಭವಾಗಲಿದೆ. ಧನು ರಾಶಿಯವರು ಶನಿ ಸಾಡೇ ಸಾತಿಯಿಂದ ಮುಕ್ತಿ ಪಡೆಯಲಿದ್ದಾರೆ.  


ಶನಿ ಕೃಪೆಗೆ ಪಾತ್ರರಾಗಲು ಏನು ಮಾಡಬೇಕು ? 
ಶನಿದೇವನನ್ನು (Shani Deva) ಮೆಚ್ಚಿಸುವುದರಿಂದ ಶನಿಯ ಕೋಪ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ. ಪ್ರತಿ ಶನಿವಾರದಂದು ಶನಿದೇವನನ್ನು ವಿಧಿ ವಿಧಾನದೊಂದಿಗೆ ಪೂಜಿಸುವುದರಿಂದ ಶನಿಯ ಆಶೀರ್ವಾದ ಇರಲಿದೆ. ಶನಿ ಚಾಲೀಸಾ (Shani chalisa) ಮತ್ತು ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದಲೂ ಪರಿಣಾಮ ಬೀರಲಿದೆ. ಅಶ್ವತ ಮರದ ಕೆಳಗೆ ಎಳ್ಳು ಎಣ್ಣೆಯ ದೀಪವನ್ನು ಬೆಳಗಿಸಬೇಕು.   


ಇದನ್ನೂ ಓದಿ : Chanakya Niti : ಅಪ್ಪಿತಪ್ಪಿಯೂ ಮಾಡಬೇಡಿ ಈ 3 ಕೆಲಸ : ಇದರಿಂದ ಹಾಳಾಗುತ್ತೆ ನಿಮ್ಮ ಕೆರಿಯರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.