Zodiac Sighs And Relationships: ಈ ಎರಡು ರಾಶಿಯ ಜನರು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದೇ ಇಲ್ಲ
Zodiac Sighs And Relationships: ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology), ಪ್ರತಿಯೊಂದು ರಾಶಿಗಳ ಸ್ವಭಾವದ ಕುರಿತು ಹೇಳಲಾಗಿದೆ. ವ್ಯಕ್ತಿಯ ಸ್ವಭಾವವು ಅವನ ನಿಜವಾದ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ಪ್ರತಿಯೊಂದು ರಾಶಿಯ ಜನರು ತಮ್ಮ ಸ್ವಭಾವಕ್ಕೆ ಅನುಗುಣವಾಗಿ ಇತರ ರಾಶಿಗಳ ಜನರೊಂದಿಗೆ ಒಳ್ಳೆಯ ಅಥವಾ ಕೆಟ್ಟ ಸಂಬಂಧವನ್ನು ಹೊಂದಿವೆ.
ನವದೆಹಲಿ: Zodiac Sighs And Their Toxic Relationships - ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) 12 ರಾಶಿಗಳನ್ನು (Zodiac Signs) ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಈ ರಾಶಿಗಳನ್ನು ಜಲ, ಪೃಥ್ವಿ, ಅಗ್ನಿ ಹಾಗೂ ವಾಯು ಎಂಬ ಒಟ್ಟು ನಾಲ್ಕು ತತ್ವಗಳಲ್ಲಿ ವಿಂಗಡಿಸಲಾಗಿದೆ. ಎಲ್ಲಾ ರಾಶಿಗಳು (Sun Signs) ತಮ್ಮ ಗುಣಲಕ್ಷಣಗಳಿಗೆ ಅನುಗುಣವಾಗಿ ವ್ಯವಹರಿಸುತ್ತವೆ. ಜಲತತ್ವ ಒಟ್ಟು ಮೂರು ರಾಶಿಗಳನ್ನು ಒಳಗೊಂಡಿದೆ. ಕರ್ಕ (Cancer), ವೃಶ್ಚಿಕ (Scorpio) ಹಾಗೂ ಮೀನ ರಾಶಿಗಳು ಇದರಲ್ಲಿ ಶಾಮೀಲಾಗಿವೆ. ಕರ್ಕ ಹಾಗೂ ವೃಶ್ಚಿಕ ರಾಶಿಯ ಜನರು ತಮ್ಮ ನಡುವೆ ಜಗಳವಾಡುತ್ತಲೇ ಇರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ (Jotishya Shastra) ಪ್ರಕಾರ ಇದು ಯಾಕೆ ಎಂಬುದನ್ನೊಮ್ಮೆ ತಿಳಿದುಕೊಳ್ಳಲು ಪ್ರಯತ್ನಿಸೋಣ ಬನ್ನಿ.
ಒಟ್ಟಿಗೆ ಇರುವುದು ಕಷ್ಟ
ಕರ್ಕ ರಾಶಿಯ ಜನರು ತೀರಾ ಭಾವುಕರಾಗಿರುತ್ತಾರೆ, ವೃಶ್ಚಿಕ ರಾಶಿಯವರು ಹಠಮಾರಿಗಳಾಗಿರುತ್ತಾರೆ. ಇದರಿಂದಾಗಿ ಈ ಎರಡು ರಾಶಿಯವರಿಗೆ ಒಟ್ಟಿಗೆ ಇರುವುದು ಕಷ್ಟ. ಸಂಬಂಧಕ್ಕೆ ಸಂಬಂಧಿಸಿದಂತೆ ಎರಡೂ ರಾಶಿಚಕ್ರದ ಚಿಹ್ನೆಗಳಲ್ಲಿ ಪಾಲುದಾರನ ಭಾವನೆ ಇದೆ. ಆದರೆ, ಇದನ್ನು ನಂಬುವುದು ಕಷ್ಟ, ಏಕೆಂದರೆ ಇದು ದೀರ್ಘಕಾಲ ಉಳಿಯುವುದಿಲ್ಲ.
ತಮ್ಮೊಳಗೆ ಜಗಳ
ಕರ್ಕ ಮತ್ತು ವೃಶ್ಚಿಕ ರಾಶಿಯವರು ಮಧ್ಯೆ ಒಮ್ಮತ ಮೂಡದಿರುವುದು ಅನೇಕ ಬಾರಿ ಸಂಭವಿಸುತ್ತದೆ. ಈ ಪರಿಸ್ಥಿತಿಯು ಜಗಳಕ್ಕೆ ತಲುಪುತ್ತದೆ. ಇದಲ್ಲದೆ, ಕರ್ಕ ರಾಶಿಯ ಜನರು ತುಂಬಾ ಸಭ್ಯರು. ಈ ರಾಶಿಯ ಜನರು ಮಂಗಳ ಪ್ರತಿನಿಧಿಸುವ ವೃಶ್ಚಿಕ ರಾಶಿಯವರೊಂದಿಗೆ ಇದ್ದಾಗ, ಅವರು ಪರಸ್ಪರ ಜಗಳವಾಡುತ್ತಾರೆ.
ಇದನ್ನೂ ಓದಿ-Saturn Transit: 2022ರಲ್ಲಿ 8 ರಾಶಿಯವರ ಮೇಲೆ ಶನಿಯ ದೊಡ್ಡ ಪ್ರಭಾವ; ಯಾರಿಗೆ ಅದೃಷ್ಟ
ಸೇಡು ತೀರಿಸಿಕೊಳ್ಳುತ್ತಾರೆ
ಇಂತಹ ಸಂದರ್ಭಗಳಲ್ಲಿ ವೃಶ್ಚಿಕ ರಾಶಿಯ ಜನರು ಒಂದೊಮ್ಮೆ ಹಟಕ್ಕೆ ಬಿದ್ದರೆ, ತಮ್ಮ ಸಣ್ಣಪುಟ್ಟ ಗಾಯಗಳಿಗೂ ಕೂಡ ಅವರು ಸೇಡು ತೀರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಈ ಕೆಟ್ಟ ಪ್ರವೃತ್ತಿಯು ಕರ್ಕ ರಾಶಿಯವರಲ್ಲಿಯೂ ಕಂಡುಬರುತ್ತದೆ. ಒಂದೆಡೆ, ಕರ್ಕ ರಾಶಿಯ ಜನರು ಆರ್ಥಿಕವಾಗಿ ನಿಯಂತ್ರಿಸಲು ಬಯಸುತ್ತಾರೆ. ಇನ್ನೊಂದೆಡೆ ವೃಶ್ಚಿಕ ರಾಶಿಯ ಜನರು ಖರ್ಚಿನ ಮೇಲೆ ನಿಯಂತ್ರಣಇಡುವುದಿಲ್ಲ. ಈ ಕಾರಣದಿಂದಾಗಿ, ಕರ್ಕ ಮತ್ತು ವೃಶ್ಚಿಕ ರಾಶಿಯ ಜನರು ಪರಸ್ಪರ ಹೊಂದಿಕೆಯಾಗುವುದಿಲ್ಲ. ಸಂಬಂಧದಲ್ಲಿ ಯಶಸ್ವಿಯಾಗಲು ಕರ್ಕ ಮತ್ತು ವೃಶ್ಚಿಕ ರಾಶಿಯವರಿಗೆ ಸತ್ಯವನ್ನು ಒಪ್ಪಿಕೊಳ್ಳುವುದು ಬಹಳ ಮುಖ್ಯ.
ಇದನ್ನೂ ಓದಿ-Rahu Transit 2022: 2022ರಲ್ಲಿ ಈ 6 ರಾಶಿಗಳ ಜೀವನದಲ್ಲಿ ಪ್ರಕ್ಷುಬ್ಧತೆಯನ್ನು ಸೃಷ್ಟಿಸುತ್ತಾನೆ ರಾಹು!
(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವುದಕ್ಕು ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Palmistry: ನಿಮ್ಮ ಕೈಯಲ್ಲೂ ಈ ಚಿಹ್ನೆ ಇದೆಯಾ? ಇದ್ರೆ, ಅದು ಅಪಾಯದ ಸಂಕೇತ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.