Emerald Panna stone: ಪಚ್ಚೆ ರತ್ನ ಧರಿಸುವುದರಿಂದ ಈ ರಾಶಿಯವರಿಗೆ ಬರುತ್ತೆ ಅದಷ್ಟ!
Emerald Panna stone: ಪಚ್ಚೆ ರತ್ನ ರೋಮಾಂಚಕ ಮತ್ತು ಹೆಚ್ಚು ಆಕರ್ಷಕವಾಗಿರುತ್ತದೆ. ಪಚ್ಚೆ ರತ್ನವು ಈ ದಿನಗಳಲ್ಲಿ ಅನೇಕ ಜನರನ್ನು ಆಕರ್ಷಿಸುತ್ತಿದೆ. ರತ್ನ ಶಾಸ್ತ್ರದಲ್ಲಿ ಪಚ್ಚೆಯನ್ನು ಅಮೂಲ್ಯ ಮತ್ತು ಬೆಲೆಬಾಳುವ ರತ್ನವೆಂದು ಪರಿಗಣಿಸಲಾಗಿದೆ.
Emerald Panna stone: ಪಚ್ಚೆ ರತ್ನ ರೋಮಾಂಚಕ ಮತ್ತು ಹೆಚ್ಚು ಆಕರ್ಷಕವಾಗಿರುತ್ತದೆ. ಪಚ್ಚೆ ರತ್ನವು ಈ ದಿನಗಳಲ್ಲಿ ಅನೇಕ ಜನರನ್ನು ಆಕರ್ಷಿಸುತ್ತಿದೆ. ರತ್ನ ಶಾಸ್ತ್ರದಲ್ಲಿ ಪಚ್ಚೆಯನ್ನು ಅಮೂಲ್ಯ ಮತ್ತು ಬೆಲೆಬಾಳುವ ರತ್ನವೆಂದು ಪರಿಗಣಿಸಲಾಗಿದೆ. ಈ ಸುಂದರವಾದ ಹಸಿರು ಬಣ್ಣದ ರತ್ನ ಬುಧ ಗ್ರಹಕ್ಕೆ ಸಂಬಂಧಿಸಿದೆ ಎಂಬ ನಂಬಿಕೆಯಿದೆ. ಈ ಪಚ್ಚೆ ರತ್ನವನ್ನು ಧರಿಸುವುದರಿಂದ ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ ಯಾವ ರಾಶಿಯವರು ಪಚ್ಚೆಯನ್ನು ಧರಿಸಬಹುದು? ಪಚ್ಚೆ ಧರಿಸುವುದರಿಂದಾಗುವ ಪ್ರಯೋಜನಗಳು ಏನು ಎಂಬುದು ತುಂಬಾ ಮುಖ್ಯವಾಗಿದೆ.
ಇದನ್ನೂ ಓದಿ: ಮುಂದಿನ 2 ವರ್ಷಗಳವರೆಗೆ ಈ 3 ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಶನಿದೇವ
ಯಾವ ರಾಶಿಯವರು ಪಚ್ಚೆಯನ್ನು ಧರಿಸಬಹುದು?
ಮಿಥುನ ಮತ್ತು ಕನ್ಯಾ ರಾಶಿಯವರು ಈ ರತ್ನನವನ್ನು ಧರಿಸಿದರೆ ಉತ್ತಮ ಫಲವನ್ನು ಪಡೆಯುತ್ತಾರೆ. ಯಾರ ಜನ್ಮ ಲಗ್ನದಲ್ಲಿ ಬುಧ 6, 8 ಮತ್ತು 12 ನೇ ಮನೆಯಲ್ಲಿರುತ್ತಾನೆಯೋ ಅವರು ಪಚ್ಚೆಯನ್ನು ಧರಿಸಬಹುದು. ಬುಧನು ಕ್ಷೀಣ ಮೀನ ರಾಶಿಯಲ್ಲಿದ್ದರೂ ಈ ರತ್ನವನ್ನು ಧರಿಸಬಹುದು. ಬುಧನು ಶುಭ ಸ್ಥಾನದ ಅಧಿಪತಿ, ಹೀಗಾಗಿ 8 ನೇ ಮನೆಯಲ್ಲಿದ್ದರೆ ಪಚ್ಚೆಯನ್ನು ಧರಿಸುವುದು ಅದೃಷ್ಟವನ್ನು ತರುತ್ತದೆ.
ಈ ಪಚ್ಚೆಯನ್ನು ಧರಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಆರೋಗ್ಯ ಶಾಸ್ತ್ರದಲ್ಲಿ ಸೇರಿಸಲಾಗಿದೆ. ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಹೊಂದಿರುವವರು ಪಚ್ಚೆಯನ್ನು ಧರಿಸಬೇಕು ಎಂದು ಹೇಳಲಾಗುತ್ತದೆ. ಇದರಿಂದ ಅವರ ಕಾಯಿಲೆಗೆ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ.
ಪಚ್ಚೆ ಧರಿಸುವುದರಿಂದಾಗುವ ಪ್ರಯೋಜನಗಳು:
ಪಚ್ಚೆಯನ್ನು ಧರಿಸುವುದರಿಂದ ಜ್ಞಾಪಕ ಶಕ್ತಿ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಅಲ್ಲದೇ, ಬುದ್ಧಿ ಕೂಡ ಚುರುಕಾಗುತ್ತದೆ. ಜನರು ಆರೋಗ್ಯಕರ ಜೀರ್ಣಕ್ರಿಯೆಯನ್ನು ಹೊಂದಿರುತ್ತಾರೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣುತ್ತಾರೆ. ಪಚ್ಚೆಯನ್ನು ಧರಿಸುವುದರಿಂದ ನಿಮ್ಮ ಸಂವಹನ ಕೌಶಲ್ಯ ಕೂಡ ಸುಧಾರಿಸುತ್ತದೆ. ಮನೆಯಲ್ಲಿ ಪಚ್ಚೆಯನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ಆಹಾರ ಮತ್ತು ಸಂಪತ್ತು ವೃದ್ಧಿಯಾಗುತ್ತದೆ.
ಇದನ್ನೂ ಓದಿ: Rahu Gochar 2022: ರಾಹು ನಕ್ಷತ್ರ ಬದಲಾವಣೆ ಪರಿಣಾಮ ಈ ರಾಶಿಯವರಿಗೆ ಹಣದ ಸುರಿಮಳೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.