Zodiac signs: ಸಾಕಷ್ಟು ತರ್ಕಬದ್ಧವಲ್ಲದವರೊಂದಿಗೆ ಮಾತನಾಡುವುದು ನಿಜವಾಗಿಯೂ ಕಷ್ಟ. ಜಗಳವನ್ನು ಇಷ್ಟಪಡುವ, ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳದ ಮತ್ತು ತುಂಬಾ ಮುಂಗೋಪದವರನ್ನು ನಿಭಾಯಿಸುವುದು ಸುಲಭವಲ್ಲ. ಕೆಲವರು ಯಾವಾಗಲೂ ವಾದ ಮಾಡುತ್ತಾರೆ. ಅಂತಹ ಜನರನ್ನು ಅವರ ರಾಶಿಗಳ ಆಧಾರದ ಮೇಲೆ ಗುರುತಿಸಬಹುದು. 


COMMERCIAL BREAK
SCROLL TO CONTINUE READING

ಸಿಂಹ ರಾಶಿ: ಇವರು ಭಿನ್ನಾಭಿಪ್ರಾಯ ಬಂದಾಗ ನಿಮ್ಮ ದೊಡ್ಡ ಎದುರಾಳಿಗಳಾಗಿರಬಹುದು. ವಿಷಯವನ್ನು ಶಾಂತವಾಗಿ ಪರಿಹರಿಸಬಹುದಾದರೂ, ಅದನ್ನು ವೈಭವೀಕರಿಸಲು ಮತ್ತು ತೀವ್ರಗೊಳಿಸಲು ಒಂದು ಮಾರ್ಗವನ್ನು ಹುಡುಕಿಯೇ ತೀರುತ್ತಾರೆ. ಸಿಂಹ ರಾಶಿಯ ಜನರೊಂದಿಗೆ ಜಗಳವನ್ನು ಕೊನೆಗೊಳಿಸಲು ಉತ್ತಮ ಮಾರ್ಗವೆಂದರೆ ಕ್ಷಮೆಯಾಚಿಸುವುದು.


ಇದನ್ನೂ ಓದಿ : Diet Tips: ಈ 3 ವಿಧಾನದಿಂದ ಪ್ರತಿದಿನ 500 ಕ್ಯಾಲೊರಿ ಬರ್ನ್ ಮಾಡಿ


ವೃಷಭ ರಾಶಿ: ಈ ರಾಶಿಯವರು ಹಠಮಾರಿಗಳು. ಅವರಿಗೆ ನಿಮ್ಮ ಜೊತೆ ಭಿನ್ನಾಭಿಪ್ರಾಯ ಮೂಡದ ಹೊರತು ಅವರು ಜಗಳವಾಡುವುದಿಲ್ಲ. ಅವರ ಜೊತೆಗಿನ ಜಗಳ ಗಂಟೆಗಳವರೆಗೆ ಹೋಗಬಹುದು ಮತ್ತು ಅವರು ತಪ್ಪನ್ನು ಒಪ್ಪಿಕೊಳ್ಳಲು ಸಹ ಇಷ್ಟಪಡುವುದಿಲ್ಲ.  


ವೃಶ್ಚಿಕ ರಾಶಿ: ನಿಮಗೆ ತಿಳಿಯುವ ಮೊದಲೇ ಅವರು ವಾದವನ್ನು ಹೆಚ್ಚಿಸಬಹುದು. ಅವರು ವಾದದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ. ಆದ್ದರಿಂದ ನೀವು ಅವರೊಂದಿಗೆ ಜಗಳವಾಡುತ್ತಿದ್ದರೆ, ಅವರು ತುಂಬಾ ನೋವುಂಟು ಮಾಡುವ ಹಾಗೆ ಕೂಡ ಮಾತನಾಡಬಹುದು.


ಮಿಥುನ ರಾಶಿ: ಅವರ ಮನಸ್ಥಿತಿಯು ಯಾವುದೇ ಸಮಯದಲ್ಲಿ ಬದಲಾಗಬಹುದು, ವಿಶೇಷವಾಗಿ ಅವರು ಆತ್ಮಾವಲೋಕನ ಮಾಡುವಾಗ ಅಥವಾ ಶಾಂತ ಮತ್ತು ಭಾವನಾತ್ಮಕ ದಿನವನ್ನು ಹೊಂದಿರುವಾಗ ಆಕ್ರೋಶ ಭರಿತರಾಗುತ್ತಾರೆ. ನೀವು ಮಿಥುನ ರಾಶಿಯವರೊಂದಿಗೆ ವಾದದಲ್ಲಿ ತೊಡಗಿದರೆ, ನಿಮ್ಮ ಕಿವಿಗಳು ಬ್ಲಾಸ್ಟ್ ಆಗುತ್ತವೆ. 


ಕಟಕ ರಾಶಿ:  ಇವರೊಂದಿಗೆ ಮಾತನಾಡುವಾಗ ನೀವು ಹೆಚ್ಚು ಜಾಗರೂಕರಾಗಿರಬೇಕು. ಅವರು ತುಂಬಾ ಭಾವನಾತ್ಮಕ ಮತ್ತು ಸಂವೇದನಾಶೀಲರು. ಹೀಗಾಗಿ, ಈ ಲಕ್ಷಣವು ಅವರನ್ನು ಕಟುವಾಗಿ ವಾದಿಸುವಂತೆ ಮಾಡಬಹುದು. 


ಇದನ್ನೂ ಓದಿ : Breakup ಬಳಿಕ ಹುಡುಗಿಯರು ಈ 4 ಕೆಲಸಗಳನ್ನು ಮಾಡುತ್ತಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.