ಬೆಂಗಳೂರು : ಸನಾತನ ಧರ್ಮದಲ್ಲಿ ದೀಪಾವಳಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುತ್ತದೆ. ದೀಪಾವಳಿಯನ್ನು ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುತ್ತದೆ. ಇದಕ್ಕೂ ಮುನ್ನ ಧನ್ತೇರಸ್ ಮತ್ತು ನರಕ ಚತುರ್ದಶಿ ಹಬ್ಬ ಬರುತ್ತದೆ.  ನಂತರ ಲಕ್ಷ್ಮೀ ಪೂಜೆ, ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಹಬ್ಬಕ್ಕೆ ಗ್ರಹಣದ ಕಾರ್ಮೋಡ  :
ಈ ಬಾರಿಯ ನರಕ ಚತುರ್ದಶಿಯ ಮಾರನೇ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮೀ ಪೂಜೆ, ಅಂಗಡಿ ಪೂಜೆ ಗೋಪೂಜೆ ಮಾಡುವ ಮುಹೂರ್ತದಲ್ಲಿ ಕೂಡಾ ಬದಲಾವಣೆಯಾಗಲಿದೆ. ಸೂರ್ಯಗ್ರಹಣ ಇರುವ ಹಿನ್ನೆಲೆಯಲ್ಲಿ ಹಬ್ಬದ ಪೂಜೆಯ ಬಗ್ಗೆ ಜನರಲ್ಲಿ ಗೊಂದಲ ಮೂಡಿದೆ. 


ಇದನ್ನೂ ಓದಿ : Shani Margi 2022: ಶನಿಯ ಚಲನೆಯಲ್ಲಿ ಬದಲಾವಣೆ, ಈ ರಾಶಿಯವರ ಮೇಲೆ ಪರಿಣಾಮ!


ಧನ್ತೇರಸ್ : 
ಪ್ರತಿ ವರ್ಷ ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯಂದು ಧನ್ತೇರಸ್ ಆಚರಿಸಲಾಗುತ್ತದೆ. ಈ ಬಾರಿ ಈ  ತಿಥಿ ಅಕ್ಟೋಬರ್ 22 ಮತ್ತು 23 ಎರಡು ದಿನಗಳಲ್ಲಿ ಬೀಳುತ್ತಿದೆ. ಜ್ಯೋತಿಷಿಗಳ ಪ್ರಕಾರ, ಅಕ್ಟೋಬರ್ 22 ರಂದು ಧನ್ತೇರಸ್ ಹಬ್ಬವನ್ನು ಆಚರಿಸುವುದು ಹೆಚ್ಚು ಮಂಗಳಕರವಾಗಿರುತ್ತದೆ.


ನರಕ ಚತುರ್ದಶಿ :
ನರಕ ಚತುರ್ದಶಿಯನ್ನು ದೀಪಾವಳಿಗೂ ಮುನ್ನ ಅಂದರೆ  ಧನ್ತೇರಸ್ ಮರುದಿನ ಆಚರಿಸಲಾಗುತ್ತದೆ. ಈ ಬಾರಿ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನಾಂಕವು ಅಕ್ಟೋಬರ್ 23 ರಂದು ಸಂಜೆ 6.04 ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 24 ರ ಸಂಜೆ 5:28 ರವರೆಗೆ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನರಕ ಚತುರ್ದಶಿಯನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ.


ಇದನ್ನೂ ಓದಿ : ಶನಿ ದೋಷ ಪರಿಹಾರಕ್ಕಾಗಿ ನೀಲ ಮಣಿಯ ಬದಲಿಗೆ ಈ ಮರದ ಬೇರನ್ನು ತೋಳಿಗೆ ಕಟ್ಟಿಕೊಂಡರೂ ಸಿಗುವುದು ಪರಿಹಾರ .!


ಲಕ್ಷ್ಮೀ ಪೂಜೆ :
ಲಕ್ಷ್ಮೀ ಪೂಜೆ, ಗೋವರ್ಧನ ಪೂಜೆಯನ್ನು ಪ್ರತಿ ವರ್ಷನರಕ ಚತಿರ್ದಶಿಯ  ಮರುದಿನ ಆಚರಿಸಲಾಗುತ್ತದೆ. ಆದರೆ, ಈ ಬಾರಿ ಸೂರ್ಯಗ್ರಹಣದಿಂದಾಗಿ ಅದರಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ನರಕ ಚತುರ್ದಶಿಯ ಮಾರನೇ ದಿನ  ಅಂದರೆ ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುತ್ತದೆ.  ಸೂರ್ಯಗ್ರಹಣದಂದು ಪೂಜೆ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ  ಲಕ್ಷ್ಮೀ ಪೂಜೆಯನ್ನು  ಅಕ್ಟೋಬರ್ 25ರ ಬದಲಾಗಿ ಅಕ್ಟೋಬರ್ 26ರಂದು ಆಚರಿಸಲಾಗುವುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ