Money Tips: ಆಹಾರ ಸೇವಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
ಆಹಾರವು ನಮಗೆ ಬದುಕಲು ಶಕ್ತಿಯನ್ನು ನೀಡುತ್ತದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಆದ್ದರಿಂದ ಆಹಾರ ಸೇವಿಸುವ ಬಗ್ಗೆ ಅಗತ್ಯ ನಿಯಮಗಳನ್ನು ಸಹ ತಿಳಿಸಲಾಗಿದೆ.
ನವದೆಹಲಿ: ಜನರು ಹಣ ಸಂಪಾದಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದ ಕಷ್ಟಪಟ್ಟು ಸಂಪಾದಿಸಿದ ಹಣ ಸಹ ಹಾಳಾಗುತ್ತದೆ. ಧರ್ಮ ಪುರಾಣಗಳು, ವಾಸ್ತು ಶಾಸ್ತ್ರ ಇತ್ಯಾದಿಗಳಲ್ಲಿ ಈ ತಪ್ಪುಗಳು, ಕೆಟ್ಟ ಅಭ್ಯಾಸಗಳ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ಈ ಪರಿಹಾರಗಳಿಂದ ವ್ಯಕ್ತಿಯು ತೊಂದರೆಗಳು, ಆರ್ಥಿಕ ನಷ್ಟ, ಆರೋಗ್ಯ ಸಮಸ್ಯೆಗಳು ಇತ್ಯಾದಿಗಳಿಂದ ಪಾರಾಗಬಹುದು. ಒಬ್ಬ ವ್ಯಕ್ತಿಯನ್ನು ಬಡತನಕ್ಕೆ ತಳ್ಳುವ ಆಹಾರಕ್ಕೆ ಸಂಬಂಧಿಸಿದ ಕೆಟ್ಟ ಅಭ್ಯಾಸ(Bad Food Habits)ಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ.
ತಟ್ಟೆಯಲ್ಲಿ ಉಪ್ಪನ್ನು ಬಿಡುವುದು ತುಂಬಾ ಅಶುಭ
ಆಹಾರ ಸೇವಿಸುವಾಗ ನಿಮ್ಮ ತಟ್ಟೆಯಲ್ಲಿ ಏನನ್ನೂ ಬಿಡಬಾರದು. ತಟ್ಟೆಯಲ್ಲಿ ಆಹಾರ(Mistakes Related Food)ವನ್ನು ಹಾಳು ಮಾಡಿದರೆ ತಾಯಿ ಅನ್ನಪೂರ್ಣ ಕೋಪಗೊಳ್ಳುತ್ತಾಳೆ. ತಾಯಿ ಅನ್ನಪೂರ್ಣ ಲಕ್ಷ್ಮಿ ದೇವಿಯ ರೂಪವಾಗಿದ್ದಾಳೆ. ಆದ್ದರಿಂದ ಅವಳ ಅಸಮಾಧಾನವು ಬಡತನಕ್ಕೆ ಕಾರಣವಾಗಬಹುದು. ಆದ್ದರಿಂದ ಯಾವಾಗಲೂ ನೀವು ತಿನ್ನಬಹುದಾದಷ್ಟು ಆಹಾರವನ್ನು ಮಾತ್ರ ತೆಗೆದುಕೊಳ್ಳಿ. ಹಾಗೆಯೇ ತಟ್ಟೆಯಲ್ಲಿ ಉಪ್ಪನ್ನು ಬಿಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ. ನೀವು ಒಂದು ವೇಳೆ ಉಪ್ಪನ್ನು ಬಿಟ್ಟರೆ ಅದರ ಮೇಲೆ ಸ್ವಲ್ಪ ನೀರು ಸುರಿಯಿರಿ. ಇದು ಅಶುಭ ಪರಿಣಾಮವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: Makar Sankranti 2022: ಇನ್ನೆರಡು ದಿನಗಳಲ್ಲಿ ಹೊಳೆಯಲಿದೆ ಈ 3 ರಾಶಿಯವರ ಅದೃಷ್ಟ
ಬಡವರಲ್ಲಿ ಈ ಅಭ್ಯಾಸ ಸಾಮಾನ್ಯವಾಗಿರುತ್ತದೆ
ಕೆಲವರಿಗೆ ಹಾಸಿಗೆಯ ಮೇಲೆ ಕುಳಿತು ತಿನ್ನುವ ಅಭ್ಯಾಸ(Food Tips)ವಿರುತ್ತದೆ. ಈ ರೀತಿ ಮಾಡುವ ಜನರು ಯಾವಾಗಲೂ ಹಣದ ಸಮಸ್ಯೆಗೆ ಬಲಿಯಾಗುತ್ತಾರೆ. ಅಷ್ಟೇ ಅಲ್ಲ ಈ ಅಭ್ಯಾಸವು ವ್ಯಕ್ತಿಯ ಮೇಲೆ ಋಣಾತ್ಮಕ ಪರಿಣಾಮವನ್ನುಮಾಡುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಈ ಸ್ಥಿತಿಯು ವ್ಯಕ್ತಿಯನ್ನು ಬಡವಾಗಿಸುತ್ತದೆ. ತಾಯಿ ಲಕ್ಷ್ಮಿದೇವಿ ಇಂತಹ ಅಭ್ಯಾಸಗಳನ್ನು ಹೊಂದಿರುವ ಜನರನ್ನು ಇಷ್ಟಪಡುವುದಿಲ್ಲವಂತೆ. ಆದ್ದರಿಂದ ಆಹಾರ ಸೇವಿಸುವಾಗ ಯಾವಾಗಲೂ ನೆಲದ ಮೇಲೆ ಕುಳಿತುಕೊಳ್ಳಿ. ಹಾಸಿಗೆಯ ಮೇಲೆ ಕುಳಿತು ಆಹಾರ ಸೇವಿಸುವ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ.
ಇದನ್ನೂ ಓದಿ: Shukra Margi 2022: ಶುಕ್ರ ರಾಶಿ ಪರಿವರ್ತನೆ, ಈ 2 ರಾಶಿಯವರಿಗೆ ಸಂಪತ್ತು ಪ್ರಾಪ್ತಿ
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.