ನವದೆಹಲಿ: ಚಳಿಗಾಲ ಬಂತೆಂದರೆ ಸಾಕು ಜನರ ಆರೋಗ್ಯ ಹದಗೆಡುತ್ತದೆ. ಹೆಚ್ಚಿನ ಜನರು ಕೆಮ್ಮು ಮತ್ತು ಸೀನುವಿಕೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಚಳಿಗಾಲ ಬಂತೆಂದರೆ ಬೇಗ ಅನಾರೋಗ್ಯಕ್ಕೆ ಒಳಗಾಗಲು ಅತಿದೊಡ್ಡ ಕಾರಣವೆಂದರೆ ದೇಹದ ರೋಗನಿರೋಧಕ ಶಕ್ತಿಯಲ್ಲಿ ಕಡಿಮೆಯಾಗುವುದು. ಬಿಡುವಿಲ್ಲದ ಜೀವನಶೈಲಿಯಲ್ಲಿ ಜನರು ತಮ್ಮ ದೇಹಕ್ಕೆ ಅಗತ್ಯ ಗಮನ ನೀಡಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರತಿದಿನ ಅರಿಶಿನ ಹಾಲು(Turmeric Milk) ಕುಡಿಯುವ ಅಭ್ಯಾಸ ರೂಢಿಸಿಕೊಂಡರೆ ನೀವು ಹಲವಾರು ಸಮಸ್ಯೆಗಳಿಂದ ದೂರವಿರಬಹುದು. ಅರಿಶಿನ ಹಾಲು ತಯಾರಿಸುವ ಸರಿಯಾದ ವಿಧಾನದ ಬಗ್ಗೆ ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ 


COMMERCIAL BREAK
SCROLL TO CONTINUE READING

ಗೋಲ್ಡನ್ ಮಿಲ್ಕ್ ಎಂದೇ ಜನಪ್ರಿಯ


ಗೋಲ್ಡನ್ ಮಿಲ್ಕ್ ಎಂದು ಜನಪ್ರಿಯವಾಗಿರುವ ಅರಿಶಿನ ಹಾಲು ದೇಹಕ್ಕೆ ಹಲವು ವಿಧಗಳಲ್ಲಿ ತುಂಬಾ ಪ್ರಯೋಜನಕಾರಿಯಾಗಿದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಅರಿಶಿನ ಹಾಲಿನ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಇದು ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅರಿಶಿನ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ದಿವ್ಯೌಷಧ ಎಂದೂ ಹೇಳಲಾಗುತ್ತದೆ.


ದೇಹವನ್ನು ಆರೋಗ್ಯವಾಗಿರಿಸುತ್ತದೆ


ಅರಿಶಿನ ಹಾಲು(How To Make Turmeric Milk) ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಇದನ್ನು ಪ್ರತಿನಿತ್ಯ ಸೇವಿಸುವುದರಿಂದ ಹಲವಾರು ರೋಗಗಳಿಂದ ದೂರವಿರಬಹುದು. ಇದು ದೇಹಕ್ಕೆ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುವುದಲ್ಲದೆ, ಅತ್ಯುತ್ತಮ ಚಳಿಗಾಲದ ಪಾನೀಯವಾಗಿದೆ.


ಇದನ್ನೂ ಓದಿ: Winter Tips: ಚಳಿಗಾಲದಲ್ಲಿ ನೀವೂ ಸಹ ಸ್ವೆಟರ್ ಧರಿಸಿ ಮಲಗುತ್ತೀರಾ? ಈ ಸುದ್ದಿಯನ್ನು ತಪ್ಪದೇ ಓದಿ


ಕೊರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿ


ಕೊರೊನಾ ವಿರುದ್ಧ ಹೋರಾಡಲು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ ಎಂದು ಎಲ್ಲಾ ದೇಶಗಳ ಸಂಶೋಧನೆಯಲ್ಲಿ ಕಂಡುಬಂದಿದೆ. ಕಡಿಮೆ ರೋಗನಿರೋಧಕ ಶಕ್ತಿ(Turmeric Milk Benefits) ಹೊಂದಿರುವ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾದಾಗ, ಅವರ ದೇಹವು ತ್ವರಿತವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಇತರ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅರಿಶಿನ ಹಾಲು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ.


ಅರಿಶಿನ ಹಾಲು ತಯಾರಿಸುವಾಗ ಈ ವಿಷಯ ನೆನಪಿನಲ್ಲಿಡಿ


ಸಾಮಾನ್ಯವಾಗಿ ಜನರು ಅರಿಶಿನವನ್ನು ಹಾಲಿಗೆ ಬೆರೆಸಿ ಅರಿಶಿನ ಹಾಲು ಕುಡಿಯುತ್ತಾರೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಉತ್ತಮ ರೀತಿಯಲ್ಲಿ ತಯಾರಿಸಿದರೆ ಮತ್ತಷ್ಟು ಪ್ರಯೋಜನಕಾರಿ ಎಂದು ಹೇಳಬಹುದು.  


ಅರಿಶಿನ ಹಾಲಿಗೆ ಕರಿಮೆಣಸು ಸೇರಿಸಲು ಮರೆಯಬೇಡಿ


ಅರಿಶಿನ ಹಾಲನ್ನು ತಯಾರಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಮುಖ್ಯ. ಇದನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದರಿಂದ ದೇಹಕ್ಕೆ ಹೆಚ್ಚಿನ ಬಲ ಸಿಗುತ್ತದೆ. ನೀವು ಅರಿಶಿನ ಹಾಲು ಮಾಡಿದಾಗ ಅದಕ್ಕೆ ಕರಿಮೆಣಸು(Black Pepper) ಸೇರಿಸಲು ಮರೆಯಬೇಡಿ. ಕರಿಮೆಣಸನ್ನು ಸೇರಿಸದಿದ್ದರೆ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.


ಇದನ್ನೂ ಓದಿ: ಮುಖದ ಮೇಲಿನ pores ನಿಂದ ಪಡೆಯಿರಿ ಮುಕ್ತಿ.. ಈ ಮನೆಮದ್ದಿನಿಂದ ಚರ್ಮವು ಬೆಣ್ಣೆಯಂತೆ ಮೃದುವಾಗುತ್ತೆ


ಅರಿಶಿನ ಹಾಲನ್ನು ಈ ರೀತಿ ತಯಾರಿಸಿ


ಅರಿಶಿನ ಹಾಲನ್ನು ತಯಾರಿಸಲು ಕಾಲು ಚಮಚ ಅರಿಶಿನ ಪುಡಿ ಮತ್ತು ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಅರ್ಧ ಕಪ್ ಉಗುರುಬೆಚ್ಚಗಿನ ಹಾಲಿಗೆ ಬೆರೆಸಬೇಕು. ನೀವು ಸಿಹಿಕಾರಕ ಸೇರಿಸದೆ ಕುಡಿಯುವುದು ಅತ್ಯುತ್ತಮ ಮಾರ್ಗವಾಗಿದೆ.


ಅರಿಶಿನ ಹಾಲಿನ ಪ್ರಯೋಜನಗಳು


ಅರಿಶಿನದ ಹಾಲನ್ನು ಸೇವಿಸುವುದರಿಂದ ದೇಹವು ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಎ, ಬಿ2, ಬಿ12, ವಿಟಮಿನ್ ಡಿ, ಸತು, ಪೊಟ್ಯಾಸಿಯಮ್, ರಂಜಕ ಮತ್ತು ಅನೇಕ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯುತ್ತದೆ. ಅರಿಶಿನದ ಉರಿಯೂತದ ಗುಣಲಕ್ಷಣಗಳಿಂದ ದೇಹದ ಚೇತರಿಕೆಯ ಪ್ರಕ್ರಿಯೆಯು ವೇಗಗೊಳ್ಳುತ್ತದೆ. ಅರಿಶಿನದಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳಿವೆ. ಇದು ಸಂಧಿವಾತ ರೋಗಿಗಳಿಗೂ ಪರಿಹಾರ ನೀಡುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.