ನವದೆಹಲಿ : ತುಳಸಿ ಎಲೆಗಳ ನೀರು (Tulsi leave water) ಕೂದಲ ಆರೋಗ್ಯಕ್ಕೆ ಒಳ್ಳೆಯದು. ಇದರ ಎಲೆಗಳ ಪೇಸ್ಟ್ (benefits of tulsi for hair) ಮತ್ತು ನೀರು ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೂದಲು ಉದುರುವಿಕೆ, ತಲೆಹೊಟ್ಟು ಮತ್ತು ಒಣ ಕೂದಲಿನ ಸಮಸ್ಯೆ ಇದ್ದರೆ ತುಳಸಿ ಎಲೆಗಳನ್ನು ಬಳಸಿ ಪರಿಹಾರ ಕಂಡುಕೊಳ್ಳಬಹುದು.  


COMMERCIAL BREAK
SCROLL TO CONTINUE READING

 ಕೂದಲಿನ ಬುಡಕ್ಕೆ ಮಸಾಜ್ ಮಾಡಿ : 
ಒಂದು ಪಾತ್ರೆಯಲ್ಲಿ 3 ಲೋಟ ನೀರು ತೆಗೆದುಕೊಂಡು ಅದರಲ್ಲಿ 20 ರಿಂದ 25 ತುಳಸಿ ಎಲೆಗಳನ್ನು (benefits of tulsi leave) ಹಾಕಿ ಕುದಿಸಿ. ಇದರ ರಸ ನೀರಿನಲ್ಲಿ ಕರಗಿದ ನಂತರ ತಣ್ಣಗಾಗಲು ಬಿಡಿ. ನಂತರ ಈ ನೀರಿನಿಂದ ಕೂದಲನ್ನು ತೊಳೆಯಿರಿ. ಕುದನ್ನು ತೊಳೆಯುವ ವೇಳೆ ಈ ನೀರಿನಿಂದ ಕೂದಲಿನ ಬುಡಕ್ಕೆ  ಸರಿಯಾಗಿ ಮಸಾಜ್ ಮಾಡಿ ಕೊಳ್ಳುವುದನ್ನು ಮರೆಯಬೇಡಿ.  


ಇದನ್ನೂ ಓದಿ : Skin Problems : ನೀವು ಸ್ನಾನ ಮಾಡುವಾಗ ಈ 5 ತಪ್ಪುಗಳಿಂದ ಹಾಳಾಗುತ್ತೆ ಚರ್ಮ : ಹೇಗೆ? ಇಲ್ಲಿದೆ ನೋಡಿ


ರಕ್ತ ಪರಿಚಲನೆ ಉತ್ತಮವಾಗಿರುತ್ತದೆ : 
ತುಳಸಿಯಲ್ಲಿರುವ (Tulsi leave) ಔಷಧೀಯ ಗುಣಗಳು ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ. ಇದರ ಎಲೆಗಳು ಹೇರ್  (Hair care tips) ಫಾಲಿಕಲ್ಸ್ ಗಳನ್ನು ಪುನಃ ಸಕ್ರಿಯಗೊಳಿಸಲು ಸಹಾಯ ಮಾಡುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ತೆಗೆದುಹಾಕುತ್ತದೆ. ಇದಲ್ಲದೆ, ಇದರ ಬಳಕೆಯು ನೆತ್ತಿಯನ್ನು ತಂಪಾಗಿರಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು (blood circulation) ಸುಧಾರಿಸುತ್ತದೆ. 


ಎಣ್ಣೆಯಲ್ಲಿ ಮಿಶ್ರಣ ಮಾಡಿ ಬಳಸಿ :
ತುಳಸಿ ಎಲೆಗಳನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ಬಳಸಬೇಕು. ತುಳಸಿ ಎಲೆಗಳನ್ನು ಪುಡಿಮಾಡಿ ಎಣ್ಣೆಯಲ್ಲಿ ಮಿಶ್ರಣ ಮಾಡಿಕೊಳ್ಳಿ. ಎಣ್ಣೆಯನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಿಸಿ. ನಂತರ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಸ್ವಲ್ಪ ಸಮಯದವರೆಗೆ ಕೂದಲಿನ ಮೇಲೆ ಹಾಗೇ ಬಿಡಿ.  ಸುಮಾರು ಒಂದು ಗಂಟೆಯ ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. 


ಇದನ್ನೂ ಓದಿ : Weight Loss: ತೂಕ ಇಳಿಸಲು ಬೆಳಗಿನ ಉಪಾಹಾರದಲ್ಲಿ ಈ ಆಹಾರಗಳನ್ನು ತಪ್ಪದೇ ಸೇವಿಸಿ


ಕರಿಬೇವಿನ ಎಲೆಗಳೊಂದಿಗೆ ಮಿಶ್ರಣ ಮಾಡಿ :
ಕರಿಬೇವಿನ ಎಲೆಗಳು ಮತ್ತು ತುಳಸಿ ಎಲೆಗಳ ಹೇರ್ ಪ್ಯಾಕ್ ಬಳಸಿ ಡ್ಯಾಂಡ್ರಫ್ ಸಮಸ್ಯೆಯನ್ನು ಹೋಗಲಾಡಿಸಬಹುದು. ಈ ಹೇರ್ ಪ್ಯಾಕ್ ಅನ್ನು ಕನಿಷ್ಠ 35 ನಿಮಿಷಗಳ ಕಾಲ ಕೂದಲಿಗೆ ಹಚ್ಚಿ ಹಾಗೇ ಬಿಡಿ. ನಂತರ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.


ಬಿಳಿ ಕೂದಲಿನ ಸಮಸ್ಯೆ ದೂರವಾಗುತ್ತದೆ :
ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ, ಕೂದಲು ಬಿಳಿಯಾಗುವ ಸಮಸ್ಯೆ ಇರುತ್ತದೆ. ಒಂದು ಬೌಲ್ ಉಗುರುಬೆಚ್ಚಗಿನ ನೀರಿನಲ್ಲಿ 2 ಚಮಚ ಆಮ್ಲಾ ಮತ್ತು ತುಳಸಿ ಪುಡಿಯನ್ನು ಮಿಶ್ರಣ ಮಾಡಿ ರಾತ್ರಿಯಿಡೀ ಅದನ್ನು ಇರಿಸಿ. ಈ ಮಿಶ್ರಣವನ್ನು ಬೆಳಿಗ್ಗೆ ಕೂದಲಿಗೆ ಹಚ್ಚಿ. 40 ನಿಮಿಷಗಳ ನಂತರ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.