Palmistry: ಅಂಗೈನ ಶುಕ್ರ ಪರ್ವತದಲ್ಲಿ ಈ ರೇಖೆ ಇದ್ದರೆ ನಿಮಗೆ ಅಪಾರ ಸಂಪತ್ತು ಸಿಗುತ್ತದೆ, ಈ ರೀತಿ ಪರೀಕ್ಷಿಸಿ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟದ ರೇಖೆಯಲ್ಲಿ ಕಪ್ಪು ಮಚ್ಚೆ ಅಥವಾ ಕಲೆ ಇದ್ದರೆ ಅದು ಅಶುಭ. ಅಂಗೈಯಲ್ಲಿ ಇದನ್ನು ಹೊಂದಿರುವವರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ನವದೆಹಲಿ: ಜೀವನವನ್ನು ಆನಂದಮಯವಾಗಿಸಲು ಪ್ರತಿಯೊಬ್ಬರಿಗೂ ಹಣದ ಅಗತ್ಯವಿದೆ. ಪ್ರತಿಯೊಬ್ಬರೂ ಹೆಚ್ಚು ಹೆಚ್ಚು ಹಣವನ್ನು ಗಳಿಸಲು ಬಯಸುತ್ತಾರೆ. ಆದರೆ ಹಲವು ಬಾರಿ ಸಾಕಷ್ಟು ಪ್ರಯತ್ನ ಮಾಡಿದರೂ ಹಣ ಸಂಪಾದಿಸಲು ಸಾಧ್ಯವಾಗುವುದಿಲ್ಲ. ಮನುಷ್ಯನ ಅಂಗೈಯಲ್ಲಿ ಇದರ ರಹಸ್ಯ ಅಡಗಿದೆ. ವಾಸ್ತವವಾಗಿ ಅಂಗೈಯಲ್ಲಿನ ಕೆಲವು ಗೆರೆಗಳು(Palmistry) ಮತ್ತು ವಿಶೇಷ ರೇಖೆಗಳು ಸಂಪತ್ತಿನ ಬಗ್ಗೆ ವಿಶೇಷ ಸೂಚನೆಗಳನ್ನು ನೀಡುತ್ತವೆ.
ಅದೃಷ್ಟದ ರೇಖೆಯಲ್ಲಿ ಕಪ್ಪು ಮಚ್ಚೆ
ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟದ ರೇಖೆ(Special Symbol In Palm)ಯಲ್ಲಿ ಕಪ್ಪು ಮಚ್ಚೆ ಅಥವಾ ಕಲೆ ಇದ್ದರೆ ಅದು ಅಶುಭ. ಅಂಗೈಯಲ್ಲಿ ಇದನ್ನು ಹೊಂದಿರುವವರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೇ ಇಂತವರು ಹಣ ಪಡೆಯಲು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕಪ್ಪು ಮಚ್ಚೆ ಅಥವಾ ಕಲೆ ಇಲ್ಲದವರಿಗೆ ಹಣದ ಕೊರತೆಯಾಗುವುದಿಲ್ಲ.
ಇದನ್ನೂ ಓದಿ: Vastu Tips: ಮನೆ, ಜಮೀನು ಖರೀದಿಸುವ ಮುನ್ನ ತಪ್ಪದೇ ಈ ನಿಯಮ ಅನುಸರಿಸಿ
ಅಂಗೈಯಲ್ಲಿನ ಅದೃಷ್ಟ ರೇಖೆ ಹೀಗಿರಬೇಕು!
ಅಂಗೈಯಲ್ಲಿನ ಅದೃಷ್ಟ ರೇಖೆಯು ಆರಂಭದಲ್ಲಿ ಮತ್ತು ನಂತರ ದಪ್ಪವಾಗಿದ್ದರೆ ಅಥವಾ ಜೀವನ ರೇಖೆಯಿಂದ ದೂರವಿದ್ದರೆ, 25ನೇ ವಯಸ್ಸಿನಿಂದ ವ್ಯಕ್ತಿಯ ಜೀವನವು ತುಂಬಾ ಆಹ್ಲಾದಕರವಾಗಿರುತ್ತದೆ. ಅದೇ ರೀತಿ ಆತನ ಜೀವನವು ಶ್ರೀಮಂತಿಕೆಯಿಂದ ತುಂಬಿ ತುಳುಕುತ್ತದೆ. ಈ ರೀತಿಯ ರೇಖೆ ಹೊಂದಿದವರಿಗೆ ಜೀವನದಲ್ಲಿ ಹಣದ ಕೊರತೆಯೇ ಉಂಟಾಗುವುದಿಲ್ಲವೆಂದು ನಂಬಲಾಗಿದೆ.
ಅಂಗೈನ ಜೀವನ ರೇಖೆ ಹೀಗಿರಬೇಕು!
ಅಂಗೈಯಲ್ಲಿನ ಜೀವನ ರೇಖೆಯು ದುಂಡಾಗಿದ್ದರೆ ಮತ್ತು ಕೈ ಮೃದುವಾಗಿದ್ದರೆ, ಗುರು ಮತ್ತು ಶನಿಯ ಸ್ಥಾನವು ಉತ್ತಮವಾಗಿದ್ದರೆ ಅಂತಹ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾನೆ. ಮತ್ತೊಂದೆಡೆ ಅದೃಷ್ಟದ ರೇಖೆಯು ಹೃದಯ ಅಥವಾ ಹೆಡ್ ಲೈನ್‌ನಲ್ಲಿ ಕೊನೆಗೊಂಡರೆ ಸಂಪತ್ತಿನ ಅಡಚಣೆ ಇರುತ್ತದೆ.
ಇದನ್ನೂ ಓದಿ: Financially Strong Zodiac Sign In 2022: ಹೊಸ ವರ್ಷದಲ್ಲಿ ಹೆಚ್ಚಾಗಲಿದೆ ಈ ರಾಶಿಯವರ ಆದಾಯ
ಶನಿಯ ರೇಖೆ ಮತ್ತು ಜೀವನ ರೇಖೆ
ಅಂಗೈಯು ಬಲವಾಗಿದ್ದರೆ, ಪರ್ವತಗಳೆಲ್ಲವೂ ಮುಂದುವರಿದರೆ, ವಿಧಿ ರೇಖೆಯು ಕಂಕಣದಿಂದ ಶನಿ ಪರ್ವತಕ್ಕೆ ಹಾದು ಹೋದರೆ ಮತ್ತು ಶನಿ ರೇಖೆಯು ಜೀವನರೇಖೆಯಿಂದ ಹುಟ್ಟಿಕೊಂಡರೆ ಇಂತಹ ಜನರ ಮೇಲೆ ಮಹಾಲಕ್ಷ್ಮಿಯ ಕೃಪೆಯುಂಟಾಗುತ್ತದೆ. ಇದರ ಹೊರತಾಗಿ ಅದೃಷ್ಟ ರೇಖೆಯು ಜೀವನ ರೇಖೆಯಿಂದ ದೂರವಿದ್ದರೆ, ಶನಿಗ್ರಹವು ಮುಂದುವರಿದರೆ ಒಬ್ಬ ವ್ಯಕ್ತಿ ದೇಶ ಮತ್ತು ವಿದೇಶದಿಂದ ಹಣ ಗಳಿಸುತ್ತಾನೆ. ಇವರಿಗೂ ಕೂಡ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಇರುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.