Bad Omen Signs: ಜೀವನದಲ್ಲಿ ಕೆಲವೊಮ್ಮೆ ಅಚಾನಕ್ ಆಗಿ ಸಂಭವಿಸುವ ಘಟನೆಗಳು ನಮ್ಮ ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಒಳ್ಳೆಯದೋ ಅಥವಾ ಕೆಟ್ಟದೋ ತಿಳಿಯದು, ಅದರ ಪರಿಣಾಮ ಬೀರುತ್ತವೆ ಅನ್ನೋದು ವಾಸ್ತವ. ಶಕುನ್ ಶಾಸ್ತ್ರದ ಪ್ರಕಾರ, ಕೆಲವು ಘಟನೆಗಳು ನಮಗೆ ಭವಿಷ್ಯದಲ್ಲಿ ಸಂಭವಿಸುವ ಶುಭ ಮತ್ತು ಅಶುಭ ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತವೆ. ಅಂತಹ ಘಟನೆಗಳ ಬಗ್ಗೆ ಅರ್ಥಮಾಡಿಕೊಂಡರೆ, ವ್ಯಕ್ತಿಯ ಜೀವನದಲ್ಲಿ ಬರುವ ಸಮಸ್ಯೆಗಳನ್ನು ತಪ್ಪಿಸಬಹುದು ಎಂದು ಶಾಸ್ತ್ರ ಹೇಳುತ್ತದೆ.


COMMERCIAL BREAK
SCROLL TO CONTINUE READING

ದೈನಂದಿನ ಜೀವನದಲ್ಲಿ ಅನೇಕ ಸಣ್ಣಪುಟ್ಟ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದರಲ್ಲಿ ಒಂದು, ನಿಮ್ಮ ಕೈಯಿಂದ ಪದೇ ಪದೇ ಪಾತ್ರೆಗಳು ಜಾರುತ್ತಿದ್ದರೆ, ಅದು ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರ ಅರ್ಥ, ಗ್ರಹದೋಷ ಅಥವಾ ವಾಸ್ತು ದೋಷಗಳಿ ನಿಮ್ಮನ್ನು ಕಾಡುತ್ತಿವೆ ಎಂಬುದಾಗಿದೆ.  


ಇದನ್ನೂ ಓದಿ: 6 ಏರ್’ಬ್ಯಾಗ್, ಡಬಲ್ ಸಿಲಿಂಡರ್ ಸಹಿತ ಬರಲಿದೆ TATA CNG ಕಾರು: ವಿಶೇಷ ಕಾರಿನ ಬೆಲೆ ಕೇಳಿದ್ರೆ ಶಾಕ್ ಆಗ್ತೀರ!


ಈ ವಸ್ತುಗಳು ಕೈಯಿಂದ ಬೀಳುವುದು ಅಶುಭ:


ಮಡಕೆ: ಶಕುನ್ ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳ ಕೈಯಿಂದ ಕೆಳಬಿದ್ದರೆ, ಆ ವ್ಯಕ್ತಿಯ ಜೀವನದಲ್ಲಿ ಅಹಿತಕರ ಸಂಗತಿಗಳು ಸಂಭವಿಸುತ್ತವೆ ಎಂಬುದನ್ನು ಸೂಚಿಸುತ್ತದೆ. ಜೊತೆಗೆ ವಾಸ್ತು ದೋಷಗಳು ಉಂಟಾಗುತ್ತವೆ. ಅನೇಕ ಸಮಸ್ಯೆಗಳು ವ್ಯಕ್ತಿಯ ಜೀವನವನ್ನು ಸುತ್ತುವರೆಯಲು ಪ್ರಾರಂಭ ಮಾಡುತ್ತವೆ. ಲಕ್ಷ್ಮಿ ಕೋಪಗೊಂಡು ಹೊರಡುತ್ತಾಳೆ ಎಂಬುದನ್ನು ಸಹ ಸೂಚಿಸುತ್ತದೆ.


ಒಡೆದ ಪಾತ್ರೆಗಳನ್ನು ಅಡುಗೆ ಮನೆಯಲ್ಲಿ ಬಳಸಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡಿದರೆ ಕುಟುಂಬದವರ ಅದೃಷ್ಟ ಕೆಡುತ್ತದೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಬಡತನವೂ ಮನೆಯವರನ್ನು ಕಾಡಲು ಪ್ರಾರಂಭಿಸುತ್ತದೆ. ಹೀಗಾಗಿ ಒಡೆದ ಪಾತ್ರೆಗಳನ್ನು ಎಂದಿಗೂ ಮನೆಯೊಳಗೆ ಇಡಬೇಡಿ.


ಶಕುನ್ ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿ ಉಪ್ಪು, ಹಾಲು, ಎಣ್ಣೆ ಮತ್ತು ಆಹಾರ ಇತ್ಯಾದಿಗಳು ಕೈಯಿಂದ ಬೀಳುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದ್ದಕ್ಕಿದ್ದಂತೆ ಈ ವಸ್ತುಗಳು ನಿಮ್ಮ ಕೈಯಿಂದ ಬಿದ್ದರೆ, ಅದು ಮನೆಯಲ್ಲಿ ಹಣದ ನಷ್ಟವನ್ನು ಸೂಚಿಸುತ್ತದೆ. ತಾಯಿ ಲಕ್ಷ್ಮಿ ನಿಮ್ಮ ಕುಟುಂಬದ ಮೇಲೆ ಕೋಪಗೊಂಡಿದ್ದು, ಮುಂದೆ ಬಡತನ ನಿಮ್ಮನ್ನು ಕಾಡಲಿದೆ ಎಂದು ಅರ್ಥವನ್ನು ಸೂಚಿಸುತ್ತದೆ.


ಇದನ್ನೂ ಓದಿ: Akhand Samrajya Yoga: ಅಖಂಡ ಸಾಮ್ರಾಜ್ಯ ಯೋಗದಿಂದ 1 ವರ್ಷ ಬದಲಾಗೋದಿಲ್ಲ ಈ ರಾಶಿಯವರ ಅದೃಷ್ಟ! ಹೋದಲ್ಲೆಲ್ಲಾ ಧನಪ್ರಾಪ್ತಿ ಖಚಿತ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.